April 27, 2024

Bhavana Tv

Its Your Channel

ಕಾರ್ಕಳ ತಾಲೂಕಿನ ಛಾಯಾಗ್ರಾಹಕರು ಕಾರ್ಯಕ್ರಮದ ಛಾಯಾಗ್ರಹಣಕ್ಕೆ ತೆರಳುವಾಗ ಮತ್ತು ಮರಳಿ ಬರುವಾಗ ದಯವಿಟ್ಟು ಪೋಲಿಸರು ಸಹಕರಿಸಿ – ಸಂಘದ ಉಭಯ ಜಿಲ್ಲಾಧ್ಯಕ್ಷ ಶೆಟ್ಟಿಗಾರ್

ಕಾರ್ಕಳ:ಕಾರ್ಯಕ್ರಮದ ಛಾಯಾಗ್ರಹಣಕ್ಕೆ ತೆರಳುವಾಗ ಮತ್ತು ಮರಳಿ ಬರುವಾಗ ದಯವಿಟ್ಟು ಛಾಯಾಗ್ರಾಹಕರಿಗೆ ರಿಯಾಯತಿ ನೀಡುವಂತೆ ದ.ಕ ಮತ್ತು ಉಡುಪಿ ಜಿಲ್ಲಾ ಫೊಟೋಗ್ರರ‍್ಸ್ ಎಸೋಶಿಯೇಶನ್ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್ ಪೋಲಿಸರು ಮತ್ತು ಜಿಲ್ಲಾಡಳಿತಕ್ಕೆ ಕಳಕಳಿಯ ಮನವಿ ಮಾಡಿದ್ದಾರೆ.
ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದುವೆಯ ಸೀಸನ್ ಹತ್ತು ಹಲವು ಮದುವೆಗಳು ಈಗಾಗಲೇ ಬುಕ್ ಆಗಿದೆ ಅನಿವಾರ್ಯ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಆಗಿದೆ. ಇದು ಛಾಯಾಗ್ರಹಾಕರ ಪಾಲಿನ ಕಠಿಣವಾದ ದಿನವಾಗಿದೆ. ಕಳೆದ ಬಾರಿಯೂ ಲಾಕ್ ಡೌನ್ ಛಾಯಾಗ್ರಾಹಕರ ನಗುವನ್ನು ಕಸಿದುಕೊಂಡಿದೆ. ಬೇರೆಯವರ ನಗುವಿನೊಂದಿಗೆ ವ್ಯವಹರಿಸುತ್ತಿರುವ ಛಾಯಾಗ್ರಾಹಕ ತಾನು ಅಳುತ್ತಿರುವುದು ಯಾರಿಗೂ ಗೊತ್ತಾಗುವುದಿಲ್ಲ.
ಈಗಾಗಲೇ ಕರ್ನಾಟಕ ಸರ್ಕಾರದ ರಾಜ್ಯದೆಲ್ಲೆಡೆ ಲಾಕ್ ಡೌನ್ ಘೋಷಣೆ ಮಾಡಿದೆ. ಲಾಕ್ ಡೌನ್ ಜನರ ಸುರಕ್ಷತೆ ದೃಷ್ಟಿಯಿಂದ ಮಾಡಲೇ ಬೇಕಿದೆ. ರಾತ್ರಿಯ ನಿಗದಿತ ಕಾರ್ಯಕ್ರಮ ಮುಗಿಸಿ ಬರುವಾಗ ದಯವಿಟ್ಟು ಪೊಲೀಸರು ಛಾಯಾಗ್ರಹಣಕರಿಗೆ ತೊಂದರೆ ನೀಡದಿರಿ. ನಮ್ಮ ಸಂಸ್ಥೆ ನೀಡಿದ ಗುರುತು ಚೀಟಿಯನ್ನು ಪರಿಶೀಲಿಸಿ, ಸಮಾರಂಭಕ್ಕೆ ತೆರಳಲು ಮತ್ತು ವಾಪಸಾಗಲು ದಯವಿಟ್ಟು ಅನುಮತಿ ನೀಡಿ.
ದಯವಿಟ್ಟು ಸಂಬAದ ಪಟ್ಟ ಅಧಿಕಾರಿಗಳು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಛಾಯಾಗ್ರಾಹಕರ ಸಂಘ ನೀಡಿದ ಗುರುತಿನ ಚೀಟಿಯನ್ನು ಪರಿಶೀಲಿಸಿ ಛಾಯಾಗ್ರಾಹಕರಿಗೆ ಅವಕಾಶ ಮಾಡಬೇಕೆಂದು ಸಂಘದ ಉಭಯ ಜಿಲ್ಲಾಧ್ಯಕ್ಷ ಶೀಧರ್ ಶೆಟ್ಟಿಗಾರ್‌ರವರು ಪೋಲಿಸ್ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

error: