May 1, 2024

Bhavana Tv

Its Your Channel

ಪೆಟ್ರೋಲ್, ಡೀಸೆಲ್,ಅಡುಗೆ ಅನಿಲ ಇತ್ಯಾದಿ ಬೆಲೆ ಏರಿಕೆಯನ್ನು ಖಂಡಿಸಿ ಕಾರ್ಕಳ ರೈತ, ಕಾಮಿ೯ಕ, ಕೂಲಿಕಾರರಿಂದ ಬೃಹತ್ ಪ್ರತಿಭಟನೆ

ಕಾಕ೯ಳ: ಪೆಟ್ರೋಲ್, ಡೀಸೆಲ್,ಅಡುಗೆ ಅನಿಲ ಇತ್ಯಾದಿ ಬೆಲೆ ಏರಿಕೆಯನ್ನು ಖಂಡಿಸಿ ಕಾರ್ಕಳ ರೈತ, ಕಾಮಿ೯ಕ, ಕೂಲಿಕಾರರಿಂದ ಬೃಹತ್ ಪ್ರತಿಭಟನೆ ಜರುಗಿತು ವೆಂಕಟೇಶ್ ಕೋಣಿಕೃಷಿ ರಂಗದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಹೆಸರಲ್ಲಿ ಕೇಂದ್ರ ಸರಕಾರ ಅಂಗೀಕರಿಸಿರುವ ಮೂರು ಹೊಸ ಕೃಷಿ ಕಾನೂನುಗಳು ರೈತ ವಿರೋಧಿಯಾಗಿದೆ.ನಮ್ಮ ವ್ಯವಸಾಯ ರಂಗವನ್ನು ಕಬಳಿಸಲು ಹೊಂಚು ಹಾಕುತ್ತಿರುವ ಕಾಪೋ೯ರೇಟ್ ಕಂಪೆನಿಗಳ ಪರವಾಗಿದೆ.ಬೇಸಾಯದಲ್ಲಿ ಕೃಷಿಕೂಲಿಕಾರರು ಮುಖ್ಯ ಪಾತ್ರ ನವ೯ಹಿಸುತ್ತಾರೆ.ಆದರೆ ಕೇಂದ್ರ ಸರಕಾರ ಕೃಷಿಕೂಲಿಕಾರರನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ದೇಶದಲ್ಲಿ ಋಣ ಮುಕ್ತಿ ಕಾನೂನು ಇಲ್ಲದೆ ಇರುವುದರಿಂದ ಕೂಲಿಕಾರರು ಮಾಡಿದ ಸಾಲವನ್ನು ವಾಪಾಸ್ ಕೊಡಲಾಗದೆ ಆತ್ಮಹತ್ಯೆ ಹಾದಿ ತುಳಿಯುತ್ತಾರೆ. ಇನ್ನೊಂದೆಡೆ ರೈತರ ಕೃಷಿ ಉತ್ಪನ್ನ ಗಳಿಗೆ ಕನಿಷ್ಟ ಬೆಂಬಲ ಬೆಲೆ ಇಲ್ಲದೆ ದಿವಾಳಿ ಯಾಗುತ್ತಿದ್ದಾನೆ. ಕಳೆದ ನಲ್ವತ್ತು ವಷ೯ಗಳಲ್ಲಿ ಮೂರು ಲಕ್ಷ ರೈತ ಹುತಾತ್ಮರಾಗಿದ್ದಾರೆ. ಗೊಬ್ಬರ, ವಿದ್ಯುತ್, ಬೀಜ ಇತ್ಯಾದಿ ದರ ಮೊದಲೇ ನಿಗದಿಯಾಗಿರುತ್ತದೆ. ಆದರೆ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡದ ಕೇಂದ್ರ ಸರಕಾರದ ರೈತ ವಿರೋಧಿ ನೀತಿಯನ್ನು ಅಖಿಲ ಭಾರತ ಕೃಷಿಕೂಲಿಕಾರರ ಸಂಘಉಡುಪಿ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ್ ಕೋಣಿ ಖಂಡಿಸಿದರು. ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕಾಪೋ೯ರೇಟ್ ಕಂಪೆನಿಗಳೇ ಭಾರತ ಬಿಟ್ಟು ತೊಲಗಿ- ರೈತ, ಕಾಮಿ೯ಕ, ಕೂಲಿಕಾರರಿಂದ ಸೋಮವಾರ ದೇಶವ್ಯಾಪಿ ಪ್ರತಿಭಟನೆ ಜರುಗಿದ ಅಂಗವಾಗಿ ಕಾಕ೯ಳ ಬಸ್ಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನಾಕಾರರನ್ನುದ್ದೇಶಿಸಿ ಅವರು ಮಾತನಾಡಿದರು.
ಸಿಐಟಿಯು, ಎಐಕೆಎಸ್, ಎಐಎಡಬ್ಲ್ಯೂಯು ಸಂಘಟನೆಗಳ ಜಂಟಿ ಆಶ್ರಯದಲ್ಲಿ ಜರಗಿದ ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ತಾಲೂಕು ಸಂಚಾಲಕ ಶೇಖರ ಕುಲಾಲ ಕಾಕ೯ಳ,ಮುಖಂಡರಾದ ರತ್ನಾಕರ ಪೂಜಾರಿ ಮುದ್ರಾಡಿ, ಲೆಮಿನಾ ಪೌಂಡ್ರಿ ಲಿ; ಕಾಮಿ೯ಕ ಸಂಘದ ಅಧ್ಯಕ್ಷ ಮೋಹನ ಚಂದ್ರ ಸೆಟ್ಟಿ ನಿಟ್ಟೆ,ನಾಗೇಶ ಕುಮಾರ ನಿಟ್ಟೆ ಕಾಯ೯ದಶಿ೯ ಮೊದಲಾದವರು ನೇತೃತ್ವ ವಹಿಸಿದ್ದರು.

error: