May 1, 2024

Bhavana Tv

Its Your Channel

ನಮ್ಮ ಫ್ರೆಂಡ್ಸ ಮುಂಡ್ಕೂರು ವತಿಯಿಂದ ವೃಕ್ಷೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.

ಮುಂಡ್ಕೂರು : ಆರೋಗ್ಯದ ದೃಷ್ಟಿಕೋನದಿಂದ ಪರಿಸರದ ಸಂರಕ್ಷಣೆ, ಪರಿಸರದ ಜಾಗೃತಿ ಮೂಡಿಸುವಂಥ ಕಾರ್ಯಕ್ರಮದ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಂದು ನಾಗರಿಕನ ಕರ್ತವ್ಯ. ಜೀವಯನದಲ್ಲಿ ಸಂತೋಷವೊAದಿದ್ದರೇ ಮನುಷ್ಯನಿಗೆ ಅದುವೇ ಸ್ವಾತಂತ್ರ‍್ಯ. ಇಂತಹ ಮನೋಭಾವವನ್ನು ಬೆಳೆಸಿ ಉಳಿಸಿಕೊಳ್ಳುವಲ್ಲಿ ನಾವು ಸನ್ನದ್ಧರಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು. ಕಾರ್ಕಳ ತಾಲೂಕಿನ ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ನಮ್ಮ ಫ್ರೆಂಡ್ಸ್ ಮುಂಡ್ಕೂರು ಇದರ ೨೩ನೇ ಹೆಜ್ಜೆಯ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ವೃಕ್ಷೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ನಮ್ಮ ಫ್ರೆಂಡ್ಸ್ ಮುಂಡ್ಕೂರು ಇದರ ಸಂಚಾಲಕರಾದ ಆನಂದ ಸಾಲ್ಯಾನ್‌ರವರ ನೇತೃತ್ವದಲ್ಲಿ ಅಧ್ಯಕ್ಷರಾದ ಪ್ರಕಾಶ್ ನಾಯ್ಕ್ ಉನ್ನತ ಸಾಧನೆ ಮಾಡಿದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿ, ಸಾಧನೆ ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಲ್ಲ. ಹಾಗಾಗಿ ವಿದ್ಯಾರ್ಥಿಗಳು ಶ್ರಮ ವಹಿಸಿ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ನಂತರ ವನಮಹೋತ್ಸವದ ಅಂಗವಾಗಿ ಶಾಲಾ ವಠಾರದಲ್ಲಿ ಔಷಧೀಯ ಗುಣಗಳುಳ್ಳ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಪಾಂಡುರAಗ ಪ್ರಭು, ಪ್ರಿನ್ಸಿಪಾಲ್ ದೇವದಾಸ್, ಮುಖ್ಯ ಶಿಕ್ಷಕಿ ಸವಿತಾ, ಶಿಕ್ಷಕ ಮಾಲಂತೇಶ್, ದಿನೇಶ್, ಮುಂಡ್ಕೂರು ಜೆಸಿಐ ಅಧ್ಯಕ್ಷ ಪ್ರಶಾಂತ್, ನಮ್ಮ ಫ್ರೆಂಡ್ಸ್ನ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ, ಪೂರ್ವಾಧ್ಯಕ್ಷ ಉದಯ ಕುಮಾರ್, ಕೋಶಾಧಿಕಾರಿ ಅರುಣ್, ನವನೀತ್, ಪ್ರಮೋದ್ ಕಜೆ, ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಅರುಣ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ವರದಿ: ಅರುಣ ಭಟ್ಟ ಕಾರ್ಕಳ

error: