May 1, 2024

Bhavana Tv

Its Your Channel

ಬೋಳ ವ್ಯ. ಸೆ. ಸ. ಸಂಘದ ವಿರುದ್ಧ ತೇಜೋವಧೆ ಮಾಡುವವರ ವಿರುದ್ದ ಸೂಕ್ತ ಕಾನೂನು ಕ್ರಮ: ಸದಾಶಿವ ಶೆಟ್ಟಿ..!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿದ ದಿ. ಸದಾನಂದ ಶೆಟ್ಟಿಯವರು ತನ್ನ ಸೇವಾವಧಿಯಲ್ಲಿ ಅಧಿಕಾರ ದುರುಪಯೋಗ, ಕರ್ತವ್ಯ ಲೋಪ ಮತ್ತು ಹಣ ದುರುಪಯೋಗ ಮಾಡಿದ್ದು, ಸಂಸ್ಥೆಗೆ ನಷ್ಟ ಮಾಡಿದ್ದಾರೆ ಎಂದು ಬೋಳ ವ್ಯ. ಸೆ. ಸ. ಸಂಘದ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹೇಳಿದ್ದಾರೆ.

ಸೆ.೧೭ರ ಶುಕ್ರವಾರದಂದು ಬೋಳ ವ್ಯ.ಸೆ.ಸ.ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಳ ಕೊರಡೇಲು ಎಂಬಲ್ಲಿಯ ಸಾಂತೂರು ಪ್ರಮೀಳಾ ಶೆಟ್ಟಿಯವರ ಪತಿ ಸದಾನಂದ ಶೆಟ್ಟಿಯವರು ಸುಮಾರು ೨೦ ವರ್ಷಗಳ ಅವಧಿಯಲ್ಲಿ ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಸೇವಾವಧಿಯಲ್ಲಿ ಜಾಯಿಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದು, ೨೦೧೧ರ ಸೆಪ್ಟೆಂಬರ್ ೧೦ರಂದು ನಿಧನ ಹೊಂದಿದರು.

ದಿ. ಸದಾನಂದ ಶೆಟ್ಟಿಯವರ ಅವಧಿಯಲ್ಲಿ ಸುಮಾರು ೧ಕೋಟಿ ರೂಪಾಯಿಗೂ ಮಿಕ್ಕಿ ಸಂಘದ ನಿಧಿಯನ್ನು ದುರುಪಯೋಗ ಮಾಡಿ ಸಂಘಕ್ಕೆ ನಷ್ಟ ಮಾಡಿದ್ದಲ್ಲದೇ, ಸಂಘದ ಗೌರವವನ್ನು ಹಾಳು ಮಾಡಿ, ಸಂಸ್ಥೆಯನ್ನು ದಿವಾಳಿ ಅಂಚಿಗೆ ತಂದಿಟ್ಟಿದ್ದರು ಎಂದು ಸದಾಶಿವ ಶೆಟ್ಟಿ ಹೇಳಿದ್ದಾರೆ.

ನ್ಯಾಯಾಲಯದ ಆದೇಶದಂತೆ ಈಗಾಗಲೇ ಸುಮಾರು ೭೭ಲಕ್ಷ ರೂ.ಗಳನ್ನು ವಸೂಲಿ ಮಾಡಿದ್ದು, ಮಾನವೀಯ ನೆಲೆಯಲ್ಲಿ ಆಡಳಿತ ಮಂಡಳಿಯು ಬಡ್ಡಿಯನ್ನು ಮನ್ನಾ ಮಾಡಿ, ಸಧ್ಯ ಸುಮಾರು ೨೬ಲಕ್ಷ ರೂ. ಬಾಕಿ ಇರುತ್ತದೆ. ಅಲ್ಲದೇ ದಿ.ಸದಾನಂದ ಶೆಟ್ಟಿಯವರ ಭವಿಷ್ಯ ನಿಧಿ ಮೊಬಲಗನ್ನು ಕೂಡ ಅವರ ಪತ್ನಿ ಪ್ರಮೀಳಾ ಶೆಟ್ಟಿಯವರಿಗೆ ನೀಡುವುದಕ್ಕೆ ಆಡಳಿತ ಮಂಡಳಿಯು ತಯರಾಗಿರುತ್ತದೆ ಎಂದು ಹೇಳಿದರು.

ಆದರೆ ಪ್ರಮೀಳಾ ಶೆಟ್ಟಿ ಮತ್ತು ರವಿ ಶೆಟ್ಟಿ ಎಂಬವರು ಕಳೆದ ೩ ತಿಂಗಳಿನಿAದ ಸಂಸ್ಥೆಯ ಹೆಸರನ್ನು ಕೆಡಿಸಿ, ತಾವು ಲಾಭ ಮಾಡುವ ಉದ್ದೇಶದಿಂದ ಬ್ಲಾಕ್‌ಮೇಲ್ ಮಾಡುವ ಮೂಲಕ ಹಣ ಗಳಿಸುವ ಏಕೈಕ ಉದ್ದೇಶವನ್ನು ಹೊಂದಿರುತ್ತಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ತೇಜೋವಧೆ ಮಾಡುವ ಇಂತಹ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದಕ್ಕೆ ಸಂಸ್ಥೆ ಬದ್ಧವಾಗಿದೆ ಎಂದು ಸದಾಶಿವ ಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಅವಿನಾಶ್ ಮಲ್ಲಿ, ಸಿಓ ದಿನೇಶ್ ಆಚಾರ್, ನಿರ್ದೇಶಕರುಗಳಾದ ಸೂರ್ಯಕಾಂತ ಶೆಟ್ಟಿ, ಜಯರಾಮ ಸಾಲ್ಯಾನ್, ಮುರಳಿಧರ್ ಭಟ್ ಹಾಗೂ ಕೆ.ಮೋಹನದಾಸ್ ಅಡ್ಯಂತಾಯ ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: