April 29, 2024

Bhavana Tv

Its Your Channel

ಕಾರ್ಕಳ ಜೋಡು ರಸ್ತೆ ಪೂರ್ಣಿಮಾ ಸಿಲ್ಕ್ಸ್ ಗೆ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿಯವರ ಭೇಟಿ.

ಕಾರ್ಕಳದ ಜೋಡು ರಸ್ತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರದ ಬಳಿ ಇರುವ ಪೂರ್ಣಿಮಾ ಸಿಲ್ಕ್ಸ್ ಗೆ ಶ್ರೀಗಳು ಆಗಮಿಸಿದ ಸಂದರ್ಭದಲ್ಲಿ ಪಾಲುದಾರರಾದ ರವಿಪ್ರಕಾಶ್ ಪ್ರಭು, ಕಿರಣಾ ರವಿಪ್ರಕಾಶ್ ಪ್ರಭು,ಪ್ರಜ್ವಲ್ ಪ್ರಭು ಅವರು ಶ್ರೀಗಳನ್ನು ಶಾಲು ಹೊದಿಸಿ ಹೂ ಫಲಪುಷ್ಪ ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಶ್ರೀಗಳು ಕೊಲ್ಲೂರು ಶ್ರೀ ಮೂಕಾಂಬಿಕ ದೇವಿಯ ಆಶೀರ್ವಾದದಿಂದ ಪೂರ್ಣಿಮಾ ಸಿಲ್ಕ್ಸ್ ನ ಇನ್ನೊಂದು ನೂತನ ಶಾಖೆ ಪೂರ್ಣಿಮಾ ಲೈಫ್ ಸ್ಟೈಲ್ ಪ್ರೈಮ್ ಮಾಲ್ ಕಟ್ಟಡ ಅತೀ ಶೀಘ್ರದಲ್ಲಿ ಶುಭಾರಂಭ ಗೊಂಡು ಜೋಡು ರಸ್ತೆಯಲ್ಲಿನ ಅವಳಿ ಜವಳಿ “ಪೂರ್ಣಿಮಾ” ಸಂಸ್ಥೆ ಗಳಲ್ಲಿ ಹಲವಾರು ಜನರಿಗೆ ಉದ್ಯೋಗಾವಕಾಶ ದೊರಕಲಿ ಹಾಗೂ ಗ್ರಾಹಕರು ಸಂತೃಪ್ತರಾಗುವAತೆ ಸೇವೆ ನೀಡುವಂತಗಲಿ. ಪೂರ್ಣಿಮಾ ಆಡಳಿತ ವರ್ಗದವರಿಗೂ, ಗ್ರಾಹಕರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ, ಶುಭಹಾರೈಸಿದರು.ಈ ಸಂದರ್ಭದಲ್ಲಿ ಕುಂದಾಪುರ ಸಹನಾ ಗ್ರೂಪನ ನಿರ್ದೇಶಕರಾದ ಶ್ರೀ ಸುರೇಂದ್ರ ಶೆಟ್ಟಿಯವರು ಉಪಸ್ಥಿತರಿದ್ದರು.

ವರದಿ:ಅರುಣ ಭಟ್ ಕಾರ್ಕಳ

error: