April 29, 2024

Bhavana Tv

Its Your Channel

ಬಂಟ್ಸ್ ಕ್ರೆಡಿಟ್ ಕೋ- ಆಪರೆಟಿವ್ ಸೊಸೈಟಿ ಉದ್ಘಾಟಿಸಿದ ಕೇಮಾರು ಈಶ ವಿಠಲದಾಸ ಸ್ವಾಮೀಜಿ

ಕಾರ್ಕಳ: ಪ್ರಾಮಾಣಿಕತೆ, ದಕ್ಷತೆ, ವಿಶ್ವಾರ್ಹತೆ, ಕ್ರಿಯಾಶೀಲತೆ ಹೊಂದಿದ್ದ ಬಂಟ ಸಮುದಾಯವು ನಾಡಿನ ಸಂಸ್ಕೃತಿ ಇದ್ದಂತೆ . ಸಂಸ್ಕೃತಿಯಿAದಾಗಿ ಸಮಾಜದಲ್ಲಿ ಉತ್ಸವಗಳು ಮೂಡಿಬರುತ್ತವೆ ಹಾಗೂ ಸಮಾಜದಲ್ಲಿ ಎಲ್ಲರು ಒಗ್ಗಟ್ಟಾಗಿಸಲು ಸಾಧ್ಯವೆಂದು ಕೇಮಾರು ಈಶ ವಿಠಲದಾಸ ಸ್ವಾಮೀಜಿ ನುಡಿದರು.
ಕುಕ್ಕುಂದೂರು ಜೋಡುರಸ್ತೆಯ ಪ್ರೆÊಮ್‌ಮಾಲ್‌ನ ಒಂದನೇಯ ಮಹಡಿಯಲ್ಲಿ ಪ್ರಾರಂಭಿಸಲಾದ ಬಂಟ್ಸ್ ಕ್ರೆಡಿಟ್ ಕೋ ಆಪರೆಟಿವ್ ಸೊಸೈಟಿಯಲ್ಲಿ ದೀಪಪ್ರಜ್ವಲಿಸಿದ ಬಳಿಕ ಉಷಾ ಸೆಲೆಬ್ರೇಶನ್ ಹಾಲ್‌ನಲ್ಲಿ ಜರುಗಿದ್ದ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಸೊಸೈಟಿ ಹೊಸ ಆಶಯವನ್ನು ಹುಟ್ಟು ಹಾಕುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ನೀಡಲು ಸಿದ್ದ ವಾಗಿದ್ದು, ಹಣ ಹೂಡಿಕೆ,ಸಾಲ ಸೌಲಭ್ಯಗಳ ವ್ಯವಹಾರವನ್ನು ಸದುಪಯೋಗ ಪಡಿಸುವಂತೆ ಕೋರಿದರು.
ಸಭೆಯಲಿ ಪ್ರಗತಿಪರ ಹಿರಿಯ ಕೃಷಿಕ ಅಶೋಕ್ ಅಡ್ಯಂತಾಯ, ಕರ್ನಾಟಕ ಗೇರು ಬೀಜ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ. ಕರ್ನಾಟಕ ರಾಜ್ಯ ಸೌಹಾರ್ದ ಮಹಾಮಂಡಲದ ನಿರ್ದೇಶಕ ಸದಾಶಿವ ಶೆಟ್ಟಿ ಬೋಳ, ಕಾರ್ಕಳ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸವಿತಾ ವಿಜಯ ಶೆಟ್ಟಿ, ಸಾಣೂರು ಬಂಟರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಬಜಗೋಳಿ ಬಂಟರ ಸಂಘದ ಅಧ್ಯಕ್ಷ ಶ್ಯಾಮ ಶೆಟ್ಟಿ, ಕುಕ್ಕುಂದೂರು ಬಂಟರ ಸಂಘದ ಅಧ್ಯಕ್ಷ ಭರತ್ ಶೆಟ್ಟಿ, ಉದ್ಯಮಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಶೋಧನ್‌ಕುಮಾರ್ ಶೆಟ್ಟಿ, ಕೆ. ಚಂದ್ರಶೇಖರ ಮಾಡ, ಯತಿರಾಜ್ ಶೆಟ್ಟಿ, ವಕೀಲ ಸುನೀಲ್ ಕುಮಾರ್ ಶೆಟ್ಟಿ, ಕೃಷಿಕ ಜಗದೀಶ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿದ್ದರು

ನಿದೇಶಕರಾದ ಸುಹಾಸ್ ಕುಮಾರ್ ಹೆಗ್ಡೆ, ಕಾರ್ಕಳ ಸುಧೀರ್ ಹೆಗ್ಡೆ, ಸುರೇಂದ್ರ ಶೆಟ್ಟಿ, ಪ್ರಶಾಂತ ಶೆಟ್ಟಿ, ಕೆ.ನವೀನ್ ಚಂದ್ರ ಶೆಟ್ಟಿ, ರಮೇಶ್ ಶೆಟ್ಟಿ, ರಾಮಲೇಖ ಎನ್.ರೈ, ಸುಧಾಕರ ಶೆಟ್ಟಿ, ಸಚೀಂದ್ರ ಶೆಟ್ಟಿ, ಎಂ.ಪ್ರಸನ್ನ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಸುನೀತಾ ಸಿರಿಯಣ್ಣ ಶೆಟ್ಟಿ, ವಿನಯ ಅರುಣ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು.
ವಂದನಾ ರೈ ಪ್ರಾರ್ಥಿಸಿದರು. ಸೊಸೈಟಿಯ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಸ್ವಾಗತಿಸಿದರು. ಉಪಾಧ್ಯಕ್ಷ ಕೆ.ಮಂಜುನಾಥ ಶೆಟ್ಟಿ ಬೈಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಯಿನಾಥ ಶೆಟ್ಟಿ ಮುಂಡ್ಕೂರು ನಿರೂಪಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: