May 15, 2024

Bhavana Tv

Its Your Channel

ಕರ್ನಾಟಕ ರೈತ ಸುರಕ್ಷಾ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯ ಮಾಹಿತಿ ಕಾರ್ಯಕ್ರಮ

ಕಾರ್ಕಳ:-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಕಾರ್ಕಳ ತಾಲೂಕು ಸಾಣೂರು ವಲಯದ ಸಾಣೂರು ಕಾರ್ಯಕ್ಷೇತ್ರದಲ್ಲಿ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯ ಮಾಹಿತಿ ಕಾರ್ಯಕ್ರಮ ಸಾಣೂರು ಗ್ರಾಮ ಪಂಚಾಯತಿನ ಸುವರ್ಣ ಗ್ರಾಮೋದಯ ಸೌಧದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸುಜಾತಾ ಶೆಟ್ಟಿ ವಹಿಸಿದ್ದರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾನ್ಯ ಯೋಜನಾಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ರೈತರು “ಫಸಲ್ ಭೀಮಾ ಯೋಜನೆಯ ಬೆಳೆ ವಿಮಾ ಪರಿಹಾರವನ್ನು ಹೇಗೆ ಪಡೆದಕ್ಕೊಳ್ಳ ಬಹುದು ಹಾಗೂ ಈ ಕಾರ್ಯಕ್ರಮವು ಧರ್ಮಸ್ಥಳ ದ ಸಾಮಾನ್ಯ ಸೇವಾಕೇಂದ್ರದ ಮೂಲಕ ರೈತರು ಸಂಪರ್ಕಿಸಿ ಪ್ರಯೋಜನ ಪಡೆಯುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಶ್ವಿನ್ ಇವರು ಫಸಲ್ ಭೀಮಾ ಯೋಜನೆಯ ಮಾಹಿತಿ ನೀಡಿದರು, ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಮಧು ಎಂ ಸಿ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ನಡೆಯುವ ಫಸಲ್ ಭೀಮಾ ಯೋಜನೆ ಮಾಹಿತಿ ಕಾರ್ಯಕ್ರಮದಿಂದ ಅತೀ ಹೆಚ್ಚಿನ ರೈತರಿಗೆ ಮಾಹಿತಿ ತಲುಪಲಿದೆ ಎಂದು ಎಲ್ಲರಿಗೂ ಶುಭಹಾರೈಸಿದರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ್ನ ಉಪಾಧ್ಯಕ್ಷರು ಹಾಗೂ ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಮಾತನಾಡುತ್ತಾ ಡಾ. ಡಿ, ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಯೋಜನೆಯ ಪ್ರಾರಂಭ ಹಂತದಿAದಲೇ ಪ್ರಗತಿ ಬಂಧು ಸಂಘಗಳ ಮುಖಾಂತರ ರೈತರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ಈ ಫಸಲ್ ಭೀಮಾ ಯೋಜನೆ ಕಾರ್ಯಕ್ರಮವೂ ರೈತರಿಗೆ ತಲುಪಲು ನೇತೃತ್ವ ವಹಿಸಿಕ್ಕೊಂಡಿರುವುದು ಶ್ಲಾಘನೀಯ ಎಂದು ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲಿ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆಯ ನಾಮ ನಿರ್ದೇಶಿತ ಸದಸ್ಯರಾದ ದೇವಾನಂದ ಶೆಟ್ಟಿ ಈ ಕಾರ್ಯಕ್ರಮ ದಿಂದ ರೈತರಿಗೆ ಮಾಹಿತಿ ಸಿಕ್ಕಿದೆ ಎಂದರು. ಕಾರ್ಯಕ್ರಮವನ್ನು ಸೇವಾಪ್ರತಿನಿಧಿ ಪುಷ್ಪಲತಾ ಪ್ರಾರ್ಥಿಸಿ ಸೇವಾಪ್ರತಿನಿಧಿ ಅರುಣಿ ಸ್ವಾಗತಿಸಿ ಮೇಲ್ವಿಚಾರಕರು ಶಾರದಾ ರೈ ನಿರೂಪಿಸಿ ವಂದಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: