May 10, 2024

Bhavana Tv

Its Your Channel

ಯುವಕರಲ್ಲಿ ರಕ್ತದಾನ ಮಾಡುವ ಮನೋಭಾವನೆ ಮೂಡಿರುವುದು ಅಭಿನಂದನೀಯ-ಡಾ.ಕೆ.ಆರ್.ಜೋಷಿ.

ಕಾರ್ಕಳ:-ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ರಕ್ತದಾನ ಮಾಡುವ ಮನೋಭಾವ ಬೆಳೆಯುತ್ತಿರುವುದು ಅಭಿನಂದನೀಯ, ಕಾರ್ಕಳ ಪ್ರೀಮಿಯರ್ ಲೀಗಿನ ಯುವಕರು ಕೇವಲ ಕ್ರಿಕೆಟಿಗೆ ಸೀಮಿತವಾಗಿರದೆ ರಕ್ತದಾನದಂತಹ ಸಮಾಜಮುಖಿ ಕಾರ್ಯಗಳಿಗೆ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಘಟಕದ ಸಭಾಪತಿ ಡಾ.ಕೆ.ಆರ್.ಜೋಶಿ ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆ ಇದರ ವತಿಯಿಂದ ಕ್ರಿಕೆಟ್ ಆಟಗಾರರು ಮತ್ತು ಕ್ರಿಕೆಟ್ ಅಭಿಮಾನಿಗಳು ಕಾರ್ಕಳ,ಕಾರ್ಕಳ ಪ್ರೀಮಿಯರ್ ಲೀಗ್ ಮತ್ತು ಸಿ.ಎಸ್.ಕೆ.ಇವರ ಸಹಯೋಗದೊಂದಿಗೆ ಕಾರ್ಕಳ ಎಸ್. ವಿ. ಟಿ ಶಾಲಾ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದ ಅವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾರ್ಕಳ ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ರೊ. ಮೋಹನ್ ಶೆಣೈಯವರು ಮಾತನಾಡುತ್ತಾ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಿರುವುದು ಅಭಿನಂದನೀಯ, ಇಂತಹ ಕೆಲಸಗಳು ಕಾರ್ಕಳ ಪ್ರೀಮಿಯರ್ ಲೀಗಿನಿಂದ ಪ್ರತಿವರ್ಷ ನಡೆಯಲಿ ಎಂದು ಶುಭ ಹಾರೈಸಿದರು.

ಉಪಸಭಾಪತಿ ಶೇಖರ್ ಹೆಚ್ ,ಕೆಪಿಎಲ್ ಸ್ಥಾಪಕರಾದ ಕೌಶಿಕ್ ಕಿಣಿ ಮತ್ತು ಬೋಳ ವಿಘ್ನೇಶ್ ಕಾಮತ್, ಅಧ್ಯಕ್ಷ ಅಶೋಕ ಪೈ, ಕಾರ್ಯದರ್ಶಿ ರಾಜೇಶ್ ನಾಯಕ್, ಉಡುಪಿ ಜಿಲ್ಲಾ ರಕ್ತನಿಧಿಯ ವೈದ್ಯಾಧಿಕಾರಿ ಡಾ.ವೀಣಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಸಿ.ಎಸ್.ಕೆ.ಸದಸ್ಯರ ಉಪಸ್ಥಿತರಿದ್ದು ಕಾರ್ಕಳ ಪ್ರೀಮಿಯರ್ ಲೀಗಿನ ಬೋಳ ವಿಘ್ನೇಶ್ ಕಾಮತ್ ಮತ್ತು ವಾರಿಜಾ ಕಾಮತ್ ಅತಿಥಿಗಳನ್ನು ಸನ್ಮಾನಿಸಿದರು.ಶಿವಕುಮಾರ್ ಪ್ರಾರ್ಥಿಸಿದರು. ವಸಂತ್ ಎಂ.ಕಾರ್ಯಕ್ರಮ ನಿರೂಪಿಸಿದರು. ಮೋಹನದಾಸ್ ಶೆಣೈ ಧನ್ಯವಾದವಿತ್ತರು.

ವರದಿ: ಅರುಣ ಭಟ್ ಕಾರ್ಕಳ

error: