May 15, 2024

Bhavana Tv

Its Your Channel

ದಿ.ಮಾಜಿ ಶಾಸಕ ಗೋಪಾಲ ಭಂಡಾರಿ ಯವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

ಕಾರ್ಕಳ: ದಿ. ಹೆಚ್.ಗೋಪಾಲ ಭಂಡಾರಿ ಒಬ್ಬ ಸಜ್ಜನ ರಾಜಕಾರಿಣಿ ಅವರು ಪ್ರತಿಪಾದಿಸಿಕೊಂಡು ಬಂದ ಸರ್ವ ಜನಾಭ್ಯುದಯದ ದಾರಿಯಲ್ಲಿ ನಡೆದು ಮತ್ತೆ ಇಲ್ಲಿ ಕಾಂಗ್ರೆಸ್ ಪಕ್ಷವನ್ನು ಅದರ ಗತ ವೈಭವದತ್ತ ಒಯ್ಯೋಣ. ಇದೇ ಅವರಿಗೆ ನಾವು ನೀಡ ಬೇಕಾದ ನಿಜವಾದ ನೆನಪಿನ ತರ್ಪಣ ಎಂದು ಕಾಂಗ್ರೆಸ್ ನಾಯಕ ಮಾಜಿ ಸಚಿವ ಅಭಯಚಂದ್ರ ಜೈನ ಹೇಳಿದ್ದಾರೆ.
ಅವರು ಇಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ನಾರಾಯಣ ಗುರು ಸಭಾ ಭವನದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ದಿವಂಗತ ಮಾಜಿ ಶಾಸಕ ಗೋಪಾಲ ಭಂಡಾರಿ ಯವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತಾಡುತ್ತಿದ್ದರು.
ಬಡವರ ದ್ವನಿಯಾಗಿ ಮೆರೆದ ಗೋಪಾಲ ಭಂಡಾರಿ ಕಾರ್ಕಳದಲ್ಲಿ ಭೂಸುಧಾರಣಾ ಮಸೂದೆಯ ಪರಿಪಕ್ವ ಅನುಷ್ಠಾನಕ್ಕೆ ಕಾರಣೀಭೂತರಾಗಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷನಾಗಿ, ಜಿಲ್ಲಾ ಪಂಚಾಯತ್ ಸದಸ್ಯನಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ಹೆಗಲಿಗೆ ಹೆಗಲು ಕೊಟ್ಟು ಕಾರ್ಕಳದ ಸರ್ವಾಂಗೀಣ ಅಭಿವೃದ್ದಿಗೆ ಕಾರಣೀಭೂತರಾದವರು. ಎರಡು ಅವಧಿಗೆ ಶಾಸಕನಾಗಿ ವಿಧಾನ ಸಭೆಯಲ್ಲಿ ಅವರ ವಿಷಯ ಪ್ರತಿಪಾದನೆಯ ವೈಖರಿ ನಾನೂ ಸೇರಿ ಬೇರೆ ಶಾಸಕರಿಗೆ ಅನುಕರಣೀಯ ಆಗಿತ್ತು ಎಂದು ಅವರು ಹೇಳಿದರು.
ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಿರಿಯ ನ್ಯಾಯವಾದಿ ಶೇಖರ ಮಡಿವಾಳ ಮಾತಾಡಿ ಪ್ರಧಾನಿ ಇಂದಿರಾ ಗಾಂಧಿ ಜಾರಿಗೊಳಿಸಿದ ತುರ್ತು ಪರಿಸ್ಥಿತಿಯ ಸಂದರ್ಭ ಗೋಪಾಲ ಭಂಡಾರಿ ಒಬ್ಬ ನಿಜವಾದ ತುಳಿತಕ್ಕೊಳಗಾದ ಬಡಜನರ ನಾಯಕನಾಗಿ ಹೊರಹೊಮ್ಮಿದ್ದರು. ತುರ್ತುಪರಿಸ್ಥಿತಿ ಭೂಸುದಾರಣ ಮಸೂದೆಯೂ ಸೇರಿ ಇಂದಿರಾಗಾAಧಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದ 20ಅಂಶ ಕಾರ್ಯಕ್ರಮಕ್ಕೆ ರಕ್ಷಣಾತ್ಮಕ ಕವಚವಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿ ಮಾತಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಮಾತಾಡಿ ಕಾರ್ಕಳವನ್ನು ಒಂದು ಶೈಕ್ಷಣಿಕ ಕೇಂದ್ರವನಾನಿಗಿಸುವಲ್ಲಿ ಗೋಪಾಲ ಭಂಡಾರಿಯವರ ಪಾತ್ರ ಮಹತ್ತರ ವಾಗಿತ್ತು ಎಂದರು.

ಹೆಬ್ರಿ ಬ್ಲಾಕ್ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತಾಡಿ ಭೂಸುಧಾರಣಾ ಮಸೂದೆಯಿಂದ ಭೂಮಿ ಪಡೆದವರೆಲ್ಲ ಇಂದು ಗೋಪಾಲ ಭಂಡಾರಿಯವರ ಸೇವೆಯನ್ನೂ ಮರೆತಿದ್ದಾರೆ. ಕಾಂಗ್ರೆಸ್ ಪಕ್ಷವನ್ನೂ ಮರೆತಿದ್ದಾರೆ ಎಂದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಅದ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ವಂದನಾರ್ಪಣೆ ಗೈದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ನಗರಾಧ್ಯಕ್ಷ ಮದುರಾಜ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ನೀರೆ ಕೃಷ್ಣ ಶೆಟ್ಟಿ, ಸುಧಾಕರ ಕೋಟ್ಯಾನ್ ಕಿಸಾನ್ ಘಟಕ ಸದಸ್ಯ ಉದಯ ವಿ. ಶೆಟ್ಟಿ, ಮಾಜಿ ಪುರಸಭಾಧ್ಯಕ್ಷ ಸುಬೀತ್ ಕುಮಾರ್, ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ, ವಿಘ್ನೇಶ್ ಕಿಣಿ, ನವೀನ ದೇವಾಡಿಗ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಪ್ರೀತ್ ಶೆಟ್ಟಿ , ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾದ್ಯಕ್ಷೆ ಮಾಲಿನಿ ರೈ ಹಾಗೂ ವಿವಿದ ಘಟಕಗಳ ಅಧ್ಯಕ್ಷರು, ಸದಸ್ಯರು, ಪುರಸಭಾ ಸದಸ್ಯರು ಮತ್ತು ಗೋಪಾಲ ಭಂಡಾರಿ ಅಭಿಮಾನಿಗಳು ಉಪಸ್ಥಿತರಿದ್ದರು.
ಈ ಸಂದರ್ಭ ದಿ.ಗೋಪಾಲ ಭಂಢಾರಿ ಸ್ಮರಣಾರ್ಥ ಪುರಸಭಾ ಸದಸ್ಯ ಹಾಗು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದಾ ರಾವ್ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಸರಕಾರಿ ಆಸ್ಪತ್ರೆ ಸಂಯೋಜನೆಯ ಡಾಡಿಯಲ್ಲಿ ಸುಮಾರು 75 ಯುನಿಟ್ ರಕ್ತ ಧಾನಿಗಳಿಂದ ಸಂಗ್ರಹಿಸಲಾಗಿತ್ತು.

ವರದಿ: ಅರುಣ ಭಟ್ ಕಾರ್ಕಳ

error: