May 16, 2024

Bhavana Tv

Its Your Channel

ಆಷಾಡ ಮಾಸದ ಉಪನ್ಯಾಸ, ಕೆಸರು ಗದ್ದೆಯಲ್ಲಿ ಕ್ರೀಡಾಕೂಟ

ಕಾರ್ಕಳ: :ಆಷಾಢ ಮಾಸ ಎಂದರೆ ಶೂನ್ಯ ಮಾಸ. ಈ ಮಾಸದಲ್ಲಿ ಶುಭ ಕೆಲಸಗಳಿಗೆ ಅವಕಾಶವಿರುದಿಲ್ಲ, ಆದರೆ ವಿಪರೀತ ಸುರಿಯುವ ಮಳೆಯ ನೀರಿನಲ್ಲಿ ರೈತ ಇಡೀ ದಿನ ನಿಂತು ವ್ಯವಸಾಯ ಮಾಡುತ್ತಿದ್ದ ಆ ಕಾಲವನ್ನು ನಾವು ಸ್ಮರಿಸಬೇಕು, ಅವನಿಲ್ಲದೆ ನಮ್ಮ ಬಾಳಿಲ್ಲ ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸುವ ಪ್ರಯತ್ನ ಮಾಡುಬೇಕು. ಎಂದು ಕಾರಿಂಜೇಶ್ರರ ಕ್ಷೇತ್ರದ ಜೋತಿಷಿ ಸುಬ್ರಮಣ್ಯ ಭಟ್ ತಿಳಿಸಿದರು

ಅವರು ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಕ್ಷತ್ರೀಯ ಮರಾಠ ಸಮಾಜ (ರಿ) ಇದರ ಜಂಟಿ ಆಶ್ರಯದಲ್ಲಿ ನಡೆದ ಆಷಾಡ ಮಾಸದ ವಿಶೇಷತೆಯ ಬಗ್ಗೆ ಉಪನ್ಯಾಸ ನೀಡುತ್ತಾ ಹೇಳಿದರು, ಸಮಾರಂಭ ಅಧ್ಯಕ್ಷತೆ ವಹಿಸಿಕೊಂಡ ದೇವಸ್ಥಾನದ ಆಡಳಿತ ಮೊಕ್ತೇಸರ್ ಗಿರೀಶ್ ರಾವ್ ಸಮಾಜ ಬಂದುಗಳ ವಿಳಾಸ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಕೆಸರು ಗದ್ದೆಯಲ್ಲಿ ವಿವಿಧ ಸರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು, ಮನೆ ಮನೆಯಲ್ಲಿ ತಯಾರಿಸಿದ ಆಷಾಡ ಮಾಸದ 40 ಬಗೆಯ ವಿವಿದ ಖಾದ್ಯಗಳನ್ನು ಉಣಬಡಿಸಲಾಯಿತು,

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ವಾಸೋಜಿರಾವ್ ವೀಡೆ, ಸತ್ಯರ್ಥಿರಾವ್, ಲಕ್ಷ್ಮಣ್ ರಾವ್, ಸೇವಾ ಸಮಿತಿ ಸಂಚಾಲಕ ಗುರು ಪ್ರಸಾದ್, ಟ್ರಸ್ಟ್ ಗೌರವಾದ್ಯಕ್ಷ ಗುಣಪ್ರಕಾಶ್, ಉದ್ಯಮಿ ಸಂತೋಷ್ ರಾವ್ ಮಸ್ಕತ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜದ ಅದ್ಯಕ್ಷ ಶುಭದರಾವ್ ಪ್ರಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು, ಹರೇಂದ್ರ ರಾವ್ ನಿರೂಪಿಸಿ ಪ್ರಸನ್ನರಾವ್ ಧನ್ಯವಾದವಿತ್ತರು.

ವರದಿ: ಅರುಣ ಭಟ್ ಕಾರ್ಕಳ

error: