May 15, 2024

Bhavana Tv

Its Your Channel

ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

ಕಾರ್ಕಳ : ಕಾರ್ಕಳ ತಾಲೂಕು ಕಚೇರಿ ಸಿಬ್ಬಂದಿ ಸುಶ್ಮಿತಾ (24) ಎಂಬವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಡ್ಕೊ ಕಾಲನಿ ನಿವಾಸಿಯಾಗಿದ್ದ ಸುಶ್ಮಿತಾ ಅವರು ಭಾನುವಾರ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ. ತಂದೆ, ತಾಯಿ, ಓರ್ವ ಸಹೋದರಿಯನ್ನು ಅಗಲಿದ್ದಾರೆ. ಕಚೇರಿಯಲ್ಲಿ ಉತ್ತಮ ಸಿಬ್ಬಂದಿ ಎಂಬ ಹೆಸರು ಸಂಪಾದಿಸಿದ್ದರು. ಶಾಲಾ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಪ್ರತಿಭೆ ಆಧಾರದಲ್ಲಿ ಸರಕಾರಿ ನೌಕರಿ ಪಡೆದುಕೊಂಡಿದ್ದರು. ಆತ್ಮಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ.

ವರದಿ: ಅರುಣ ಭಟ್ ಕಾರ್ಕಳ

error: