April 27, 2024

Bhavana Tv

Its Your Channel

ಅರಣ್ಯವಾಸಿಗಳನ್ನ ಉಳಿಸಿ ಜಾಥ; ಡಿ. 10 ಶಿರಸಿಯಲ್ಲಿ ಅತಿಕ್ರಮಣದಾರರ ಶಕ್ತಿಪ್ರದರ್ಶನ- ರವೀಂದ್ರನಾಯ್ಕ.

ಮುoಡಗೋಡ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಫಂದಿಸುವAತೆ ಅಗ್ರಹಿಸಿ, ಶಿರಸಿಯಲ್ಲಿಡಿ. 10 ರಂದು ಸಂಘಟಿಸಲಾದ ಅರಣ್ಯವಾಸಿಗಳನ್ನ ಉಳಿಸಿ ಜಾಥದಲ್ಲಿ
ಅತಿಕ್ರಮಣದಾರರ ಶಕ್ತಿ ಪ್ರದರ್ಶಿಸಲಾಗುವುದೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷರವೀಂದ್ರನಾಯ್ಕ ಹೇಳಿದ್ದಾರೆ.
ಅವರು ಇಂದು ಮುಂಡಗೋಡ ತಾಲೂಕಿನ, ದೈವಜ್ಞ ಕಲ್ಯಾಣ ಮಂಟಪದಲ್ಲಿ ಶಿರಸಿಯಲ್ಲಿ ಡಿ. 10 ರಂದು ಸಂಘಟಿಸಲಾದ ಅರಣ್ಯವಾಸಿಗಳನ್ನ ಉಳಿಸಿ ಜಾಥದ ಪೂರ್ವಭಾವಿ ಸಭೆಯಲ್ಲಿಅತಿಕ್ರಮಣದಾರರನ್ನ ಉದ್ದೇಶಿಸಿ ಮಾತನಾಡಿದರು.ಚಳಿಗಾಲದ ಅಧಿವೇಶನ ಡಿಸೆಂಬರ್ 19 ರಿಂದ ಬೆಳಗಾಂವದಲ್ಲಿ ಜರುಗುವ ಹಿನ್ನೆಲೆಯಲ್ಲಿ, ಅರಣ್ಯವಾಸಿಗಳ ಸಮಸ್ಯೆಗಳ ಸ್ಫಂದಿಸುವ ದಿಶೆಯಲ್ಲಿ, ಸರಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ರ‍್ಯಾಲಿ ಸಂಘಟಿಸಲಾಗಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ತಾಲೂಕ ಸಮಿತಿ ಅಧ್ಯಕ್ಷ ಶಿವಾನಂದ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಶೇಖಯ್ಯ ಹಿರೇಮಠ, ಮಹೇಶ ಗಣೇಶನಗರ, ಮಲ್ಲಿಕಾರ್ಜುನ ಓಣೀಕೇರಿ, ನಿಸಾರ್ ಅಹಮ್ಮದ್ ಹನುಮಾಪುರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಚಾಯಪ್ಪ ಲಂಬಾಣಿ, ಅಬ್ದುಲ್ ರಜಾಕ್, ಅರ್ಜುನ ಚೆನ್ನಪ್ಪಮುಂತಾದವರು ಉಪಸ್ಥಿತರಿದ್ದರು.

ತಿದ್ದುಪಡಿ ಪ್ರಮಾಣ ಪತ್ರಅವಶ್ಯ:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತೀರಸ್ಕಾರವಾಗಿರುವ ಅರಣ್ಯವಾಸಿಗಳನ್ನ ಹಂತಹoತವಾಗಿ ಒಕ್ಕಲೆಬ್ಬಿಸಲಾಗುವುದೆಂಬ ಪ್ರಮಾಣ ಪತ್ರ ಸುಫ್ರೀಂ ಕೋರ್ಟನಲ್ಲಿ ರಾಜ್ಯ ಸರಕಾರ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಅರಣ್ಯವಾಸಿಗಳ ಪರವಾಗಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಅರಣ್ಯ
ಅತಿಕ್ರಮಣದಾರರು ನಿರಾಶ್ರಿತರಾಗುವುರೆಂದು ರವೀಂದ್ರನಾಯ್ಕ ಹೇಳಿದರು.

error: