May 16, 2024

Bhavana Tv

Its Your Channel

ಆಶ್ರಯ ಕೇಂದ್ರಕ್ಕೆ ಊಟ, ವಸತಿ ಸರಿಯಾಗಿ ಒದಗಿಸಿಲ್ಲ. ಪೌಷ್ಠಿಕ ಆಹಾರ ನೀಡಲು ಸರ್ಕಾರದ ಬಳಿ ಹಣ ಇದೆ. ಜಿಪುಣತನ ತೋರದೇ ಅಧಿಕಾರಿಗಳು ಕಾರ್ಯನಿರ್ವಹಿಸಿ- ಕಂದಾಯ ಸಚೀವ ಆರ್. ಅಶೋಕ

ಹೊನ್ನಾವರ ; ತಾಲೂಕಿನ ಗುಂಡಬಾಳ ನದಿ ತೀರದ ನೆರೆ ಪೀಡಿತ ಪ್ರದೇಶವಾದ ಚಿಕ್ಕನಕೋಡ್ ಹಡಿನಬಾಳ ಭಾಗದಲ್ಲಿ ಭೇಟಿ ನೀಡಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚೀವರು ಪ್ರಕೃತಿ ವಿಕೋಪವನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದರಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ನಾವೆಲ್ಲರೂ ಶ್ರಮವಹಿಸಬೇಕಿದೆ. ಕೊರೋನಾ ಮಧ್ಯೆ ನೆರೆ ಉಂಟಾಗಿರುವುದು ಕಷ್ಟಕರವಾದ ಸನ್ನಿವೇಶವಾದರೂ, ಕಷ್ಟವನ್ನು ಎದುರಿಸಲು ಅಧಿಕಾರಿಗಳು ಸಜ್ಜಾಗಬೇಕು. ಯಾವುದೇ ಅಧಿಕಾರಿಗಳು ರಜೆಯ ಮೇಲೆ ತೆರಳಬಾರದು. ಹಾನಿಗೊಳಗಾದ ಬೆಳೆಯ ಬಗ್ಗೆ ಸರ್ವೆ ಮಾಡಿ ವರದಿ ನೀಡಿದರೆ ಕೇಂದ್ರ ಸರ್ಕಾರದಿಂದ ಪರಿಹಾರ ಒದಗಿಸಲು ಸಾಧ್ಯವಿದೆ. ಕೃಷಿ ಅನುದಾನ ನೇರವಾಗಿ ರೈತರ ಫಲಾನುಭವಿಗಳಿಗೆ ಹೋಗುವದರಿಂದ ಯಾವುದೇ ಅವ್ಯವಹಾರ ಸಂಭವಿಸುದಿಲ್ಲ. ಕಾಳಜಿ ಕೇಂದ್ರ ಸಮಪರ್ಕವಾಗಿಲ್ಲ ಎನ್ನುವುದನ್ನು ಇಂದು ನಾನು ಅರಿತಿದ್ದು, ಸೂಕ್ತ ರೀತಿಯ ಬೆಡ್ ಹಾಗೂ ಆಹಾರದ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಸಾಕಷ್ಟು ಹಣ ನೀಡುತ್ತದೆ. ಆ ಹಣ ನಮ್ಮದಲ್ಲ ಸಾರ್ವಜನಿಕರ ತೆರಿಗೆ ಹಣವಾಗಿದೆ. ನಿಜವಾದ ಬಡವರು ಕಷ್ಟದಿಂದ ಆಶ್ರಯಕೆಂದ್ರಕ್ಕೆ ಬಂದಾಗ ಊಟ ವಸತಿಯ ವಿಷಯದಲ್ಲಿ ಜಿಪುಣತನ ತೋರಿಸಬೇಡಿ, ಮುಂದೆ ಇಂತಹ ಘಟನೆ ಮರುಕಳಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಚೀವ ಶಿವರಾಮ ಹೆಬ್ಬಾರ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡಿ ೬ ನದಿಗಳು ಜಿಲ್ಲೆಯಲ್ಲಿ ಹರಿಯುತ್ತಿದ್ದು ಮಳೆಗಾಲದಲ್ಲಿ ಹಲವು ವರ್ಷಗಳಿಂದ ನೆರೆಯ ಭೀತಿ ಎದುರಿಸುತ್ತಿದೆ, ಈ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್, ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ರೋಶನ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜು ಉಪಸ್ಥಿತರಿದ್ದರು.

ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್

ಹೆಚ್ಚಿನ ಮಾಹಿತಿಗಾಗಿ ಭಾವನ ಟಿವಿ ವೀಕ್ಷಸಿ

error: