April 27, 2024

Bhavana Tv

Its Your Channel

ಗಣೇಶನ ಆರಾಧನೆಯನ್ನು ಯಾವುದೇ ಕಾಲದಲ್ಲಿ ನಡೆಸಬಹುದು – ಕಟ್ಟೆ ಶಂಕರ ಭಟ್

ಹೊನ್ನಾವರ : ಎಲ್ಲ ಶುಭಕಾರ್ಯಕ್ರಮದಲ್ಲೂ, ವಿಶೇಷ ಕಾರ್ಯಕ್ರಮಗಳಲ್ಲೂ ಪ್ರಥಮ ವಂದಿತನಾಗುವ ಗಣಪತಿಯ ಆರಾಧನೆಯನ್ನು ವಿಶೇಷವಾಗಿ ಗಣೇಶ ಚತುರ್ಥಿಯ ದಿನ ಆಚರಿಸುತ್ತ ಬಂದಿರುವುದು ನಮ್ಮ ಧಾರ್ಮಿಕ ಪರಂಪರೆ. ಆ ಪುಣ್ಯದಿನದಂದು ಗಣೇಶಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ, ಆರಾಧಿಸುವುದು ಸಾಧ್ಯವಿಲ್ಲವಾದಾಗ ನವರಾತ್ರಿಯಲ್ಲಿ ಅಥವಾ ಮಾಘಚೌತಿಯಲ್ಲಿ ಗಣಪತಿಯ ವಿಶೇಷ ಉತ್ಸವವನ್ನು ಮಾಡುತ್ತ ಬರಲಾಗಿದೆ.
ಇಲ್ಲಿ ಗಣೇಶನ ಪೂಜೆ ಆರಾಧನೆ ಮುಖ್ಯವೇ ವಿನಃ ದಿನ ಅಷ್ಟು ಮುಖ್ಯವಾಗುವುದಿಲ್ಲ. ಸರ್ಕಾರದ ಆದೇಶದಂತೆ ಈ ಬಾರಿ ಗಣೇಶೋತ್ಸವವನ್ನು ಆಚರಿಸುವುದು ಎಲ್ಲರ ದೃಷ್ಠಿಯಿಂದಲೂ ಅನಿವರ‍್ಯವಾಗಿದೆ. ಈ ನಿಯಮಾವಳಿಯ ಕಟ್ಟುಪಾಡುಗಳು ಬೇಡ ಎಂದಿದ್ದವರು ಮಾಘದಲ್ಲಿ ಗಣೇಶ ಚೌತಿಯನ್ನು ಆಚರಿಸಬಹುದು. ಅಂದು ಧುಂಡಿರಾಜವೃತ ಅಂದರೆ ಗಣೇಶನ ಆರಾಧನೆ ಮಾಡುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಸಹಜ ದಿನಗಳಲ್ಲೂ ಸೂತಕ, ಇತ್ಯಾದಿ ಬಂದಾಗ ಚೌತಿ ತಪ್ಪಿದರೆ ನವರಾತ್ರಿ ಚೌತಿ ಅಥವಾ ಮಾಘಶುದ್ಧ ಚೌತಿಯಂದು ಗಣಪತಿ ತಂದು ಕೂರಿಸಿ ಪೂಜೆ ಮಾಡುತ್ತಾರೆ. ಈ ಎಲ್ಲ ದಿನಗಳು, ಎಲ್ಲ ಶುಭಸಂಕಲ್ಪಗಳು ಗಣೇಶನ ಆರಾಧನೆಗೆ ಯೋಗ್ಯವೇ ಆಗಿದೆ. ಅನಿವರ‍್ಯ ಕಾರಣದಿಂದ ಗಣೇಶ ಚೌತಿತಪ್ಪಿದರೆ ಯಾವ ದೋಷವೂ ಇಲ್ಲ ಎಂದು ಹೆಸರಾಂತ ತಂತ್ರಾಗಮ ಪಂಡಿತ ಶಂಕರ ಭಟ್ ಕಟ್ಟೆ ಹೇಳಿದ್ದಾರೆ. ಯಾವತ್ತೂ ಹೋಮ, ಹವನ, ದೇವತಾರಾಧನೆಗಳಲ್ಲಿ ಸತ್‌ಸಂಕಲ್ಪ, ಸದುದ್ದೇಶ, ಶ್ರದ್ಧಾಭಕ್ತಿ ಇವು ಮುಖ್ಯವೇ ವಿನಃ ಇತರ ಸಂಗತಿಗಳಲ್ಲ. ಶಾಸ್ತçದಲ್ಲಿ ಈ ವಿಷಯಗಳಿಗೆ ಹೆಚ್ಚು ಮಹತ್ವಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ತಂತ್ರಾಗಮ ಪಾಂಡಿತ್ಯ ಪ್ರಸಿದ್ಧವಾದ ಕಟ್ಟೆ ಕುಟುಂಬದಲ್ಲಿ ಜನಿಸಿದ ಶಂಕರ ಪರಮೇಶ್ವರ ಭಟ್ಟ ಕಟ್ಟೆ ಇವರು ದೇವಾಲಯ ಸ್ಥಾಪನೆ, ಪುನಃಪ್ರತಿಷ್ಠೆ, ವರ್ಧಂತಿ, ಜಾತ್ರಾ ಮಹೋತ್ಸವ ಮೊದಲಾದ ಆಗಮಶಾಸ್ತçದ ಧಾರ್ಮಿಕ ಕಾರ್ಯಕ್ರಮ ನಡೆಸುವಲ್ಲಿ ಸಿದ್ಧಹಸ್ತರು. ಇವರಿಂದ ಹಾಗೂ ಇವರ ತಂದೆಯವರಿAದ ಸಾವಿರಾರು ದೇವಾಲಯಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಷ್ಠಾಪಿಸಲ್ಪಟ್ಟಿದೆ. ಗಣೇಶ ಚತುರ್ಥಿಯನ್ನು ಭಾದ್ರಪದ ಮಾಸದಲ್ಲಿ ಆಚರಿಸಬೇಕು ಅಥವಾ ಅನಿವರ‍್ಯ ಸಂದರ್ಭದಲ್ಲಿ ನವರಾತ್ರಿ ಮತ್ತು ಮಾಘಮಾಸದಲ್ಲಿ ಚೌತಿ ಆಚರಿಸುವ ಪರಂಪರೆ ಇರುವುದರಿಂದ ಈಗ ಸರ್ಕಾರದ ಪರವಾನಿಗೆ ದೊರೆಯದಿದ್ದರೆ ನಂತರ ಆಚರಿಸುವುದರ ಲಾಭಹಾನಿಗಳೇನು ಎಂಬ ಕುರಿತು ಸಾರ್ವಜನಿಕರಲ್ಲಿ ತೀವ್ರ ಕುತೂಹಲವಿದೆ. ಇದಕ್ಕೆ ಕಟ್ಟೆ ಶಂಕರ ಭಟ್ ಅವರು ಮೇಲಿನ ವಿವರಣೆ ನೀಡಿದ್ದಾರೆ.

error: