May 19, 2024

Bhavana Tv

Its Your Channel

ಗಾಂಜಾ ಮಾರಾಟ ಮಾಡುತ್ತಿದ್ದ ಧಾರವಾಡ ಮೂಲದ ಯುವಕನ ಬಂಧಿಸಿದ ಶಿರಸಿ ಪೊಲೀಸರು

ಶಿರಸಿ: ಶಿರಸಿ ನಗರದಲ್ಲಿ ಅಕ್ರಮ ವಾಗಿ ಕೇವಲ ೨೦ ವರ್ಷದ ಯುವಕ ಸುಮಾರು ೨.೭ ಕೆಜಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ ಘಟನೆ ಇಲ್ಲಿನ ಕಲ್ಕುಣಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಗಣೇಶಪೇಟೆ ಶೆಟ್ರ ಓಣಿಯ ೨ ನೇ ಕ್ರಾಸಿನ ಸುನೀಲ್ ಶ್ರೀನಿವಾಸ ಬಳ್ಳಾರಿ (೨೦) ಬಂಧಿತ ಯುವಕನಾಗಿದ್ದಾನೆ. ಈತನು ಧಾರವಾಡದಿಂದ ಬಂದು ಇಲ್ಲಿಯ ಅರಣ್ಯ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದಾಗ ಅಂದಾಜು ೨೫.೫೦೦ ರೂ. ಗಳ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.ಕಳೆದ ಕೆಲ ದಿನಗಳಿಂದ ಗಾಂಜಾ ವ್ಯಾಪಾರ ಕಡಿಮೆಯಾಗಿತ್ತು. ಆದರೆ ಈಗ ಮತ್ತೇ ಗಾಂಜಾ ಪ್ರಕರಣ ದಾಖಲಾಗಿದ್ದು, ಶಿರಸಿಯಗರನ್ನು ಬೆಚ್ಚಿ ಬೀಳಿಸಿದೆ. ನಗರ ಠಾಣೆ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದ್ದು,ಈ ಪ್ರಕರಣದಲ್ಲಿ ಉ.ಕ ಜಿಲ್ಲೆ ಪೊಲೀಸ್ ಅಧೀಕ್ಷಕರಾಧ ಶಿವಪ್ರಕಾಶ ದೇವರಾಜು,ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಭದ್ರಿನಾಥ, ಶಿರಸಿ ಉಪ ವಿಭಾಗದ‌‌ ಡಿ.ಎಸ್.ಪಿ ಗೋಪಾಲಕೃಷ್ಣ ಟಿ. ನಾಯಕ, ಮಾರ್ಗದರ್ಶನದಲ್ಲಿ ಕಾರ್ಯಚರಣೆ ಯಲ್ಲಿ ಶಿರಶಿ ವೃತ್ತ ನಿರೀಕ್ಷಕರಾಧ ಬಿ.ಯು.ಪ್ರದೀಪ,ಶಿರಸಿ ನಗರ ಠಾಣೆ ಪಿ.ಎಸ್.ಐ ಶಿವಾನಂದ ನಾವದಗಿ,ಅಪರಾಧ ವಿಭಾಗದ ಪಿ.ಎಸ್.ಐ ಉಮೇಶ ಗುತ್ಯಾ ಪಾವಸ್ಕರ,ಎ.ಎಸ್.ಐ ಚೂಡಾಮಣಿ ನಾಯ್ಕ ,ವಿ ಜಿ ರಾಜೇಶ್ ,ಸಿಬ್ಬಂದಿಗಳಾದ ಸಂತೋಷ ಕಮಟಗೇರಿ. ಗಣಪತಿ ಪಟಗಾರ, ಕೊಟೇಶ ನಾಗರವಳ್ಳಿ, ಪ್ರವೀಣ ಎನ್, ಈ ಪ್ರಕರಣದಲ್ಲಿ ಅರೋಪಿಯನ್ನು ಬಂಧಿಸುವಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

error: