May 19, 2024

Bhavana Tv

Its Your Channel

ಗೋ ಕಳ್ಳತನ ಮಾಡುತ್ತಿದ್ದ ದ್ರಶ್ಯ ದೇವಸ್ಥಾನದ ಸಿ.ಸಿ ಟಿವಿಯಲ್ಲಿ ಸೆರೆ.

ಭಟ್ಕಳ: ತಾಲೂಕಿನ ವಿ.ವಿ ರೊಡನಲ್ಲಿ ರಾತ್ರಿ ವೇಳೆ ಕಾರಿನಲ್ಲಿ ಬಂದು ಗೋ ಕಳ್ಳತನ ಮಾಡುತ್ತಿದ್ದ ದ್ರಶ್ಯ ಇಲ್ಲಿನ ವಡೇರ ಮಠ ದೇವಸ್ಥಾನದ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ.

ಆ.28 ರ ಮುಂಜಾನೆ 4.30 ಗಂಟೆಯ ಸುಮಾರಿಗೆ ನಂಬರ ಪ್ಲೇಟ್ ಇಲ್ಲದ ಬಿಳಿ ಬಣ್ಣದ ಕಾರಿನಲ್ಲಿ ನಾಲ್ವರು ಗೋ ಕಳ್ಳರು ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ದನವನ್ನು ಕೈಕಾಲು ಕಟ್ಟಿ ಕಾರಿನ ಹಿಂಬದಿಯಲ್ಲಿ ತುಂಬುತ್ತಿರುವ ದ್ರಶ್ಯ ಇಲ್ಲಿನ ವಡೇರ ಮಠ ದೇವಸ್ಥಾನದ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ.

ಮುಂಜಾನೆ 4.30 ರಿಂದ 4.45 ಗೋ ಕಳ್ಳತನದ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು . ಕಳ್ಳತನ ಮಾಡುತ್ತಿರುವ ಸಮಯದಲ್ಲಿ ಬೈಕನಲ್ಲಿ ಹಾಲು ಮಾರಾಟ ಮಾಡಲು ಹೋಗುತ್ತಿದ್ದ ವ್ಯಕ್ತಿ ಅದೇ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಆತನನ್ನು ಮಾರಕಾಸ್ತ್ರ ತೋರಿಸಿ ಹೆದರಿಸಿ ಓಡಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಬಗ್ಗೆ ಹಾಲು ಮಾರಾಟ ಮಾಡಲು ಹೋಗುತ್ತಿದ್ದ (ಪ್ರತ್ಯಕ್ಷದರ್ಶಿ) ವ್ಯಕ್ತಿ ಅಲ್ಲಿನ ಅಕ್ಕಪಕ್ಕದವರಿಗೆ ತಿಳಿಸಿದಾಗ ದೇವಸ್ಥಾನದಲ್ಲಿ ಸಿಸಿಟಿವಿ ಇರುವದನ್ನು ಗಮನಿಸಿದ ಸ್ಥಳೀಯರು ಸಿಸಿಟಿವಿ ಪರಿಶೀಲಿಸಿದಾಗ ಗೋ ಕಳ್ಳತನ ಮಾಡುತ್ತಿರುವ ದ್ರಶ್ಯ ಸೆರೆಯಾಗಿದೆ.

error: