May 19, 2024

Bhavana Tv

Its Your Channel

ಅಧಿಕಾರಿಗಳಾಗಿ ಎಲ್ಲದಕ್ಕೂ ಸ್ಪಷ್ಟಿಕರಣ ಕೊಡುವ ಅಧಿಕಾರ ನಮಗೆ ಇಲ್ಲಾ. ಜಿಲ್ಲಾಧಿಕಾರಿ ಹರೀಶ್ ಕುಮಾರ್

ಭಟ್ಕಳ ;ಸಾವಿರ ಜನ ಸಾವಿರ ಬಗೆಯಲ್ಲಿ ಕೋವಿಡ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹೇಳಿಕೊಳ್ಳುತ್ತಿದ್ದರೆ ಅಧಿಕಾರಿಗಳಾಗಿ ಎಲ್ಲದಕ್ಕೂ ಸ್ಪಷ್ಟಿಕರಣ ಕೊಡುವ ಅಧಿಕಾರ ನಮಗೆ ಇಲ್ಲಾ. ಜಿಲ್ಲಾಧಿಕಾರಿ ಹರೀಶ್ ಕುಮಾರ್ ತಿಳಿಸಿದರು.

ಕೋವಿಡ್ ಕಾಯಿಲೆಯೂ ಮಾರ್ಚನಿಂದ ಶುರುವಾದಾಗಿನಿಂದ ಜುಲೈ ಮೊದಲ ವಾರದವರೆಗೆ, 213 ರೋಗಿಗಳಿದ್ದು,1 ಸಾವಾಗಿತ್ತು. ಜುಲೈ 1 ರಿಂದ ಜುಲೈ 15 ರವರೆಗೆ 561 ರೋಗಿಗಳು, 9 ಸಾವು, ಶೇಕಡಾವಾರು ಸಾವು 1.6%, ಜುಲೈ 16 ರಿಂದ 31ರವರೆಗೆ 1345 ರೋಗಿಗಳು, 16 ಸಾವು, ಶೇಕಡಾವಾರು ಸಾವು 1.2%, ಆಗಸ್ಟ್ 1 ರಿಂದ 15 ರ ತನಕ 1101 ರೋಗಿಗಳು, 8 ಸಾವು, ಶೇಕಡಾವಾರು ಸಾವು 0.7%, ಆಗಸ್ಟ್ 16 ರಿಂದ ಆಗಸ್ಟ್ 30 ರ ವರೆಗೆ 1398 ರೋಗಿಗಳು, 18 ಸಾವು, ಶೇಕಡಾವಾರು ಸಾವು 1.3% ಒಟ್ಟೂ 4618 ರೋಗಿಗಳಲ್ಲಿ 51 ಸಾವುಗಳಾಗಿದ್ದು ಶೇಕಡಾವಾರು ಸಾವು 1.1% ರಷ್ಟು ಆಗಿದೆ‌ ಎಂದು ಕೋವಿಡ್ ಪ್ರಕರಣಗಳ ಬಗ್ಗೆ ವಿವರಿಸಿದರು.

ಉಸಿರಾಟ ತೊಂದರೆ ಇರುವಂತಹ ಕೋವಿಡ್ ರೋಗಿಗಳು ಹೆಚ್ಚಳವಾಗುತ್ತಿರುವುದರಿಂದ ಇದೊಂದು ಗಂಭೀರ ಕಾಯಿಲೆ ಎಂದು ನಾವು ಭಯಪಡಿಸುತ್ತಿಲ್ಲ, ಆದರೆ ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಪಡುವುದು ನಮ್ಮ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಪಾಸಿಟಿವ್ ಬಂದಲ್ಲಿ ಮನೆಯಲ್ಲೇ ಚಿಕಿತ್ಸೆ ಕೊಡಿಸಲು ನಮ್ಮ ಆಯಾ ತಾಲೂಕಾಡಳಿತ ಬದ್ದವಿದೆ ಎಂದು ತಿಳಿಸಿದರು.

ಕಳೆದ ತಿಂಗಳಲ್ಲಿ 1800 ಪರೀಕ್ಷೆ ಮಾಡಲಾಗುತ್ತಿದ್ದು, ಅದಕ್ಕೆ ಹೋಲಿಸಿದರೆ ಒಂದು ವಾರದಿಂದ ಜನರ ಅಸಮಾಧಾನ ಹಾಗೂ ಅಸಹಕಾರದಿಂದ 1000 ಪರೀಕ್ಷೆಗೆ ಬಂದು ಇಳಿದಿದೆ. ಪ್ರತಿ ತಾಲೂಕಿನಲ್ಲಿ ಕೂಡ 50 ಸೆಂಟ್ರಲಾಯೈಸ್ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿದ್ದೇವೆ. ಹಾಗೂ ಅತ್ಯಾಧುನಿಕ ಔಷಧಿ ತರಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ.

ಸರಕಾರ ಮಟ್ಟದ ಅಧಿಕಾರಿಗಳು ಕೋವಿಡ್ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುತ್ತಾ ಕೆಲಸ ಮಾಡುತ್ತಿದ್ದರೆ ಜನಪ್ರತಿನಿಧಿಗಳು ಗಂಭೀರ ಕಾಯಿಲೆ ಅಲ್ಲ ಎಂದು ಜನರಲ್ಲಿ ಹೇಳುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳ ಹೇಳಿಕೆ ಅವರ ವೈಯಕ್ತಿಕ ಹಾಗೂ ಅವರ ಪಕ್ಷದ ಕಾರ್ಯಕ್ರಮದಲ್ಲಿ ಹೇಳಿದ್ದರ ಹಿನ್ನೆಲೆ ಜಿಲ್ಲಾಧಿಕಾರಿಯಾಗಿ ಎಲ್ಲದಕ್ಕು ನಾನು ಉತ್ತರಿಸಬೇಕೆಂದಿಲ್ಲ ಎಂದ ಅವರು ಒಬ್ಬೊಬ್ಬರಿಂದ ಒಂದೊಂದು ಹೇಳಿಕೆ ಬರುವುದು ಸಾಮಾನ್ಯವಾಗಿದೆ ಎಂದ ಅವರು ಜನರಲ್ಲಿ ಕೋರೊನಾ ಬಗ್ಗೆ ಸಮರ್ಪಕ ಮಾಹಿತಿ ಜಾಗ್ರತಿ ಮೂಡಿಸುವ ಕೆಲಸ ಮಾಡಬೇಕು ಇದು ಎಲ್ಲರ ಜವಾಬ್ದಾರಿ ಸಹ ಆಗಿದೆ ಎಂದರು.

ಆಡಳಿತದ ಮೇಲೆ ಜನರಲ್ಲಿ ತಪ್ಪು ಕಲ್ಪನೆ ಮೂಡಿರುವ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿಗಳು ನಮಗೆ ಕೋವಿಡ್ ಪರೀಕ್ಷೆಯಲ್ಲಿ ದಿನಕ್ಕೆ ನಿಗದಿತ ಪರೀಕ್ಷೆ ಮಾಡಿಸುವ ಯಾವುದೇ ಟಾರ್ಗೆಟ್ ಇಲ್ಲವಾಗಿದೆ ಅವೆಲ್ಲವೂ ಶುದ್ದ ಸುಳ್ಳು. ಇನ್ನು ಓರ್ವ ಸೋಂಕಿತನಿಗೆ ಸರಕಾರದಿಂದ ನಿಗದಿತ ಹಣ ಬರಲಿದೆ ಇದು ಸಹ ಸುಳ್ಳು ಆಗಿದೆ ಎಂದು ಸ್ಪಷ್ಟಪಡಿಸಿದರು.

ಶೈಲೇಶ್ ವೈದ್ಯ ಮುರ್ಡೇಶ್ವರ

error: