May 19, 2024

Bhavana Tv

Its Your Channel

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಹೊಸದಾಗಿ ನಿರ್ಮಾಣವಾದ ಮಿನಿ ವಿಧಾನಸೌಧವನ್ನು ಜನರಿಗೆ ಅನುಕೂಲವಾಗುವಂತೆ ಅತಿಜರೂರಾಗಿ ಲೋಕಾರ್ಪಣೆ ಮಾಡಿ.

ಹೊನ್ನಾವರ ; ಕಳೆದ ಹಿಂದಿನ ಸರಕಾರ ಮಂಜೂರಿ ಮಾಡಿದ್ದ ಮಿನಿ ವಿಧಾನಸೌಧ ಕಾಮಗಾರಿ ಪೂರ್ಣಗೊಂಡಿದ್ದು ಸಮಾಧಾನದ ಸಂಗತಿ. ಹಿಂದಿನ ತಾಲೂಕು ಕಛೇರಿ ಕಟ್ಟಡದಲ್ಲಿ ಸಬ್ ಟ್ರಜರಿ ಕಛೇರಿ, ಪೋಲೀಸ್ ಸ್ಟೇಶನ್ ಇದ್ದಿದ್ದವು. ಈಗ ಪೋಲೀಸ್ ಸ್ಟೇಶನ್ ಸ್ವಂತ ಕಟ್ಟಡ ಹೊಂದಿ ಹೊರಗಿದೆ. ಸರಕಾರದ ಆರ್ಥಿಕ ಭದ್ರತೆಯ ಮೂಲವಾದ ಸಬ್ ರಜಿಸ್ಟಾçರ್ (ನೋಂದಣಿ) ಕಛೇರಿ ಖಾಸಗಿ ಕಟ್ಟಡದ ಮೊದಲ ಮಹಡಿಯಲ್ಲಿದ್ದು ಅದು ಕಛೇರಿ ಸಿಬ್ಬಂದಿಗಳಿಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲದ ಬೆಳಕು ಮತ್ತು ಗಾಳಿಗಳಿಂದ ದೂರವಾದ ಇಕ್ಕಟ್ಟಾದ ಸ್ಥಳ. ಅಲ್ಲದೆ ಕಛೇರಿಗೆ ಹೋಗಿ ಬರುವ ವ್ರದ್ಧರಿಗೆ ಗರ್ಭಿಣಿ ಮಹಿಳೆಯರಿಗೆ ಅಂಗವಿಕಲರಿಗೆ, ಅನಾರೋಗ್ಯ ಪೀಡಿತರಿಗೆ ಕಷ್ಟ ಸಾಧ್ಯ ಸ್ಥಿತಿಯಲ್ಲಿದೆ. ಸಾರ್ವಜನಿಕರ ದಿನ ನಿತ್ಯದ ಕೆಲಸಗಳಾದ ಇ.ಸಿ, ಸಾಲಗಾರರಿಗೆ ಬ್ಯಾಂಕಿನ ಭೋಜಾ ದಾಖಲೆ, ರಜಿಸ್ಟೆçÃಶನ್, ಭೂಮಿ ಖರೀದಿಸುವವರಿಗೆ ಮತ್ತು ಮಾರಾಟ ಮಾಡುವವರಿಗೆ ಇನ್ನಿತರ ಹಲವು ದಿನ ನಿತ್ಯದ ಕೆಲಸ ಕಾರ್ಯಗಳಿಗೆ ನೂರಾರು ಜನ ಭೇಟಿ ನೀಡುತ್ತಾರೆ. ಕೋವಿಡ್-೧೯ ರ ಈ ಸಂದರ್ಭದಲ್ಲಿ ಚಿಕ್ಕ ಸ್ಥಳವಾದದ್ದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಅಲ್ಲಿ ಕಚೇರಿ ಪ್ರಾರಂಭಿಸಿದAದಿನಿAದ ಮತ್ತು ಹಳೆಯ ಇಲಾಖೆಯ ಎಲ್ಲ ದಾಖಲೆಗಳನ್ನು ಭದ್ರತಾ ಕೊಠಡಿಗಳಿಲ್ಲದೆ ಎಲ್ಲವು ತೆರೆದುಕೊಂಡು ಬಿದ್ದಿವೆ. ಇವೆಲ್ಲ ಆಕಸ್ಮಿಕವಾಗಿ ಶಾರ್ಟಸರ್ಕೀಟ್ ಇಲ್ಲವೆ ಬೆಂಕಿ ಅನಾಹುತಗಳಿಂದ ನಾಶವಾಗುವ ಸಾಧ್ಯತೆಯಿದೆ. ಗಾಳಿ, ಬೆಳಕು ಮತ್ತು ಮೂಲ ಸೌಕರ್ಯಗಳಿಲ್ಲ. ಹೊಸದಾಗಿ ನಿರ್ಮಾಣವಾದ ಮಿನಿವಿಧಾನಸೌಧದಲ್ಲಿ ಸದರಿ ಕಛೇರಿಯನ್ನು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಭೂ ದಾಖಲೆ(ಸರ್ವೆ) ಕಛೇರಿ ಬಹು ಕಾಲದಿಂದ ಖಾಸಗಿ ಕಟ್ಟಡದಲ್ಲಿ ಇದ್ದು ಆ ಕಟ್ಟಡವೂ ಜೀರ್ಣಾವಸ್ಥೆಗೆ ಬಂದಿದ್ದು ಮಳೆಗಾಲದಲ್ಲಿ ಸೋರುತ್ತದೆ ಮತ್ತು ಅಲ್ಲಿಯೂ ಬೆಳಕು ಗಾಳಿಯ ಸರಿಯಾದ ವ್ಯವಸ್ಥೆಯಿಲ್ಲ. ಈ ತಾಲೂಕಿನಲ್ಲಿ ಒಂದು ಲಕ್ಷಕ್ಕಿಂತಲೂ ಚಿಕ್ಕ ಹಿಡುವಳಿ ರೈತರಿದ್ದು ಮತ್ತು ಉಳಿದ ರೈತರೆಲ್ಲರಿಗೂ ಭೂಮಿ ಖರೀದಿ ಮತ್ತು ಮಾರಾಟ ಮಾಡುವಾಗ, ಪೋಡಿ ಪ್ರಕರಣಗಳು, ಬಿನ್ ಶೇತಕಿ, ಆಕಾರ ಬಂಧು, ಕೆಡಿಪಿ. ಕೆಜಿಪಿ ಪ್ರಕರಣಗಳು ಸರ್ವೆ ಕಚೇರಿಯ ಅಧಿಕಾರಿಗಳ ನಕ್ಷೆ ಯಾವಾಗಲೂ ಅತಿ ಅಗತ್ಯವಾಗಿದೆ. ಆದ್ದರಿಂದ ಹೊಸದಾಗಿ ನಿರ್ಮಾಣವಾದ ಮಿನಿವಿಧಾನಸೌಧದಲ್ಲಿ ಸದರಿ ಕಛೇರಿಯನ್ನು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಆರ್ಥಿಕತೆಯ ಬೆನ್ನೆಲುಬಾದ ಕಾರ್ಮಿಕರ ಕಛೇರಿ ಖಾಸಗಿ ಕಟ್ಟಡದಲ್ಲಿದ್ದು ಅದರ ಮಹತ್ವ ಮತ್ತು ಉಪಯೋಗ ಕಾರ್ಮಿಕರಿಗೆ ಈ ವರೆಗೂ ತಿಳಿದಿರುವುದೇ ಇಲ್ಲ. ಈ ತಾಲೂಕಿನಲ್ಲಿ ಅಂದಾಜು ಕೃಷಿ ಕೂಲಿ, ಮೀನಗಾರಿಕೆ ಕೂಲಿ, ಸಣ್ಣ ಕೈಗಾರಿಕೆಗಳಲ್ಲಿಯ ಕೂಲಿ ಕಾರ್ಮಿಕರು, ಮರಳುಗಾರಿಗೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮುಂತಾಗಿ ಸುಮಾರು ೭೦ ರಿಂದ ೮೦ ಸಾವಿರ ಕಾರ್ಮಿಕರಿದ್ದಾರೆ. ಕಾರ್ಮಿಕ ಸೇವಾ ಸಿಂಧು ತಂತ್ರಾAಶ ದಾಖಲೆ ಆಗದೆ ಇರುವುದರಿಂದ ಬಹುಕಾರ್ಮಿಕರು ಪಿಂಚಣಿ ಸೌಲಭ್ಯ, ಮದುವೆ ಸಹಾಯಧನ, ಕಲಿಕಾ ಭಾಗ್ಯ,, ಆರೋಗ್ಯ ಹಾಗೂ ಚಿಕಿತ್ಸಾ ಭಾಗ್ಯ ಈ ಯಾವ ಸೌಲಭ್ಯಗಳೂ ಕಾರ್ಮಿಕರಿಗೆ ಸಿಕ್ಕುತ್ತಿಲ್ಲ. ಹಾಗೂ ಅಲ್ಲಿ ಇಂಟರ್‌ನೆಟ್ ಸೌಲಭ್ಯ ಸರಿಯಾಗಿಲ್ಲದ ಕಾರಣ ಕಾರ್ಮಿಕರು ವೃಥಾ ಅಲೆದಾಡುವ ಪರಿಸ್ಥಿತಿ ಇದೆ. ಬಹು ಜನರು ಅನಕ್ಷರಸ್ಥರಿದ್ದು ಅವರಿಗೆ ಈವರೆಗೂ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಸಿಕ್ಕಿರುವುದಿಲ್ಲ. ಈ ಎಲ್ಲ ಸೌಲಭ್ಯಗಳನ್ನು ಕೂಲಿ ಕಾರ್ಮಿಕರು ಸರಿಯಾಗಿ ಪಡೆದುಕೊಳ್ಳಬೇಕಾದರೆ ಹೊಸದಾಗಿ ನಿರ್ಮಾಣವಾದ ಮಿನಿವಿಧಾನಸೌಧದಲ್ಲಿ ಸದರಿ ಕಛೇರಿಯನ್ನು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಚಾರಿತ್ರಿಕವಾಗಿ ಒಂದು ಕಾಲಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಜಿಲ್ಲಾ ಕೇಂದ್ರವಾಗಿದ್ದರೂ ಇಂದು ಇದು ಇಲ್ಲಿಯ ಎಲ್ಲ ಸಮಸ್ಯೆಗಳಿಗೆ ಉತ್ತರ ಕಾಣದ ತಾಲೂಕಾಗಿದೆ. ಇದಕ್ಕೆ ಕಾರಣ ಈ ತಾಲೂಕನ್ನು ಒಡೆದು ಆಳುತ್ತಿರುವ ವಿಧಾನಸಭಾ ಕ್ಷೇತ್ರ. ಇದು ೨೮ ಗ್ರಾಮ ಪಂಚಾಯತ ಮತ್ತು ಒಂದು ಪಟ್ಟಣ ಪಂಚಾಯತ ಹೊಂದಿ ಸುಮಾರು ಮೂರುವರೆ ಲಕ್ಷ ಮತದಾರರನ್ನು ಹೊಂದಿದೆ. ಇಲ್ಲಿ ನದಿ, ಹಳ್ಳ ಕೊಳ್ಳ ಗುಡ್ಡಗಾಡು, ಕಾಡು ಪ್ರದೇಶವನ್ನು ಹೊಂದಿದ್ದು, ಇಲ್ಲಿ ಶೋಷಿತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಮೀನುಗಾರರು, ಕೂಲಿ ಕಾರ್ಮಿಕರು, ಕೃಷಿಕಾರ್ಮಿಕರು, ಮೀನುಗಾರಿಕೆ ವೃತ್ತಿ ಅವಲಂಬಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮುಂತಾದವರು ವಾಸಿಸುವ ಆರ್ಥಿಕವಾಗಿ ಹಿಂದುಳಿದ ತಾಲೂಕಾಗಿದೆ.. ಇಲ್ಲಿಯ ತಾಲೂಕು ಕೇಂದ್ರವು ಕೆಲವು ಗ್ರಾಮೀಣ ಪ್ರದೇಶದಿಂದ ೧೦೦ ಕೀಮಿ. ಅಂತರದಲ್ಲಿದೆ. ಗ್ರಾಮೀಣ ಭಾಗದಿಂದ ದಿನ ನಿತ್ಯ ಕಛೇರಿಯ ಕೆಲಸ ಕಾರ್ಯಗಳಿಗೆ ವ್ರದ್ಧರು, ಅಂಗವಿಕಲರು, ಗರ್ಭಿಣಿಯರು, ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಮುಂತಾದವರು ಈಗ ಇರುವ ಕಚೇರಿಗಳ ಗೋಂದಲಗಳಿAದ ಸಮಯ ಮತ್ತು ಹಣ ವ್ಯಯ ಮಾಡಿಕೊಳ್ಳುತ್ತಿದ್ದಾರೆ.
ಕಾರಣ ಸಮರ್ಥ ಮಾನ್ಯ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ತಾವು ಹೊನ್ನಾವರದಲ್ಲಿ ಹೊಸದಾಗಿ ನಿರ್ಮಾಣವಾದ ಮಿನಿ ವಿಧಾನಸೌಧವನ್ನು ಕೂಡಲೇ ಲೋಕಾರ್ಪಣೆ ಮಾಡಿ, ಬೇರೆ ಬೇರೆ ಕಡೆ ಖಾಸಗಿ ಕಟ್ಟಡಗಳಲ್ಲಿ ವ್ಯವಸ್ಥೆ ಸಮರ್ಪಕವಾಗಿ ಇರದಿರುವ ಸಬ್ ರಜಿಷ್ಟಾçರ್ (ನೋಂದಣಿ) ಕಛೇರಿ, ಭೂ ದಾಖಲೆ (ಸರ್ವೇ) ಕಛೇರಿ ಮತ್ತು ಕಾರ್ಮಿಕ ಇಲಾಖೆ ಕಛೇರಿಗಳನ್ನು ಮಿನಿ ವಿಧಾನಸೌಧದಲ್ಲಿಯೇ ಪ್ರಾರಂಭಿಸಲು ಕ್ರಮ ಕೈಕೊಂಡು ಸದರ ನಮ್ಮ ಮೇಲಿನ ಬೇಡಿಕೆಗಳನ್ನು ಈಡೇರಿಸಿಕೊಟ್ಟು ಇನ್ನು ಮುಂದಾದರೂ ಜನರಿಗೆ ಒಂದೇ ಕಡೆ ಸರಕಾರದ ಎಲ್ಲ ಸೌಲಭ್ಯಗಳು ಒಂದೆಡೆಗೇ ಸಿಗುವಂತೆ ಜೆಡಿಎಸ್ ಪಕ್ಷದ ವತಿಯಿಂದ ಕೋರುತ್ತೇವೆ ಎಂದು ಟಿ.ಟಿ.ನಾಯ್ಕ ಮೂಡ್ಕಣಿ ಮತ್ತು ಜಿ.ಎನ್.ಗೌಡ ಕೊಡಾಣಿ ಮಾದ್ಯಮಕ್ಕೆ ತಿಳಿಸಿದ್ದಾರೆ.

error: