May 20, 2024

Bhavana Tv

Its Your Channel

ಪ್ರತಿ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸುವುದೇ ಆರೋಗ್ಯ ಹಸ್ತ ಕಾರ್ಯಕ್ರಮ – ಧ್ರುವನಾರಾಯಣ್ .

ಕುಮಟಾ: ಪಕ್ಷದಿಂದ ಪ್ರತಿ ನಗರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ಕೊಡಿಸಿ ಅಗತ್ಯ ಆರೋಗ್ಯ ಕಿಟ್​ಗಳನ್ನು ವಿತರಿಸಲಾಗುತ್ತಿದೆ. ರಾಜ್ಯಾದ್ಯಂತ ಈಗಾಗಲೇ ೮೫೦೦ ಕಿಟ್​ಗಳನ್ನು ವಿತರಿಸಲಾಗಿದೆ. ಜನರಲ್ಲಿ ಕರೊನಾ ಕುರಿತ ಭಯಮುಕ್ತ ವಾತಾವರಣ ನಿರ್ಮಿಸುವುದು ಹಾಗೂ ಜಾಗೃತಿ ಮೂಡಿಸುವುದೇ ಕಾಂಗ್ರೆಸ್​ನ ಆರೋಗ್ಯ ಹಸ್ತ ಕಾರ್ಯಕ್ರಮದ ಗುರಿಎಂದು ಕಾಂಗ್ರೆಸ್ ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷ ಧ್ರುವನಾರಾಯಣ್ ತಿಳಿಸಿದರು.

ಕೆನರಾ ಲೋಕಸಭಾ ಕ್ಷೇತ್ರದಿಂದ ೭ ಬಾರಿ ಆಯ್ಕೆಯಾಗಿರುವ ಸಂಸದ ಅನಂತಕುಮಾರ ಹೆಗಡೆಯವರ ಕ್ಷೇತ್ರದ ಅಭಿವೃದ್ಧಿಗೆ ಈವರೆಗಿನ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದ ಧ್ರುವನಾರಾಯಣ್, ಚುನಾವಣೆಯಲ್ಲಿ ಮೋದಿಯವರ ಮುಖ ತೋರಿಸಿ ಗೆಲುವು ಸಾಽಸಿದ ಫೇಸ್​ಲೆಸ್ ಪೀಸ್ ಎಂದು ಟೀಕಿಸಿದರು. ಕರೊನಾ ಸಂಕಟ ಕಾಲದಲ್ಲಿ ರಾಜ್ಯಕ್ಕೆ ಅಗತ್ಯ ನೆರವನ್ನು ತರಬಹುದಿತ್ತು. ಆದರೆ ಎಲ್ಲಿಯಾದರೂ ಸಣ್ಣ ಕೋಮು ಸಂಘರ್ಷಗಳಾದರೆ ವಿಪರೀತದ ಹೇಳಿಕೆ ಕೊಡುತ್ತಾರೆ. ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಶೂನ್ಯಸಾಧಕರು ಎಂದರು.

ಮಾಜಿ ಸಚಿವ ಅಜಯ್​ಕುಮಾರ ಸರ್​ನಾಯಕ್, ಸದಾನಂದ ಡಂಗಣ್ಣನವರ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಬ್ಲಾಕ್ ಅಧ್ಯಕ್ಷ ವಿ.ಎಲ್.ನಾಯ್ಕ, ರವಿಕುಮಾರ ಶೆಟ್ಟಿ, ಹೊನ್ನಪ್ಪ ನಾಯಕ ಇನ್ನಿತರರು ಇದ್ದರು.

error: