May 15, 2024

Bhavana Tv

Its Your Channel

ಕಾಯಕಲ್ಪದಲ್ಲಿ ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಉತ್ತಮ ಅಂಕ

ಹೊನ್ನಾವರ ; ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ಸದಾ ಮುಂದಿರುವ ಹೊನ್ನಾವರ ತಾಲೂಕಾ ಆಸ್ಪತ್ರೆ ೯೦ ಕ್ಕೂ ಹೆಚ್ಚಿನ ಅಂಕ ಪಡೆದು ಉತ್ತರ ಕನ್ನಡಜಿಲ್ಲೆಯ ತಾಲೂಕ ಆಸ್ಪತ್ರೆಗಳ ವಿಭಾಗದಲ್ಲಿ ಉತ್ತಮ ಸ್ಥಾನ ಪಡೆಯುವದರ ಮೂಲಕ ೨೦೧೯-೨೦ ಸಾಲಿನ ಕಾಯಕಲ್ಪದಲ್ಲಿ ಮುಂಚೂಣಿಯಲ್ಲಿದೆ.
ಕಳೆದ ಐದು ವರ್ಷಗಳಿಂದ ಕಾಯಕಲ್ಪ ರ‍್ಯಾಂಕಿAಗ್‌ನಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುತ್ತಿರುವುದು ವಿಶೇಷವಾಗಿದೆ. ಕಾಯಕಲ್ಪ ಪ್ರಶಸ್ತಿಯು ಆಸ್ಪತ್ರೆಯ ಸ್ವಚ್ಛತೆ, ತಾಜ್ಯ ನಿರ್ವಹಣೆ, ಆರೋಗ್ಯ ಸೇವೆ ನೀಡುವಿಕೆ, ದಾಖಲೆ ನಿರ್ವಹಣೆ ಹೀಗೆ ವಿವಿಧ ವಿಭಾಗಗಳನ್ನು ರಾಜ್ಯ ಮಟ್ಟದ ತಂಡ ಬಂದು ಪರಿಶೀಲಿಸಿ ನೀಡುವ ಅಂಕವಾಗಿದೆ. ತಾಲೂಕಾ ಆಸ್ಪತ್ರೆಯ ಸ್ವಚ್ಛತೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಖಾಸಿಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಉತ್ತಮ ಸೇವೆ ನೀಡುತ್ತಿದೆ. ಆಸ್ಪತ್ರೆಯ ಪರಿಸರವು ಹಸಿರಿನಿಂದ ಕಂಗೊಳಿಸುತ್ತಿದ್ದು, ವಾಹನಗಳಿಗೆ ಪಾರ್ಕಿಂಗ ವ್ಯವಸ್ಥೆ ಕಲ್ಪಿಸಲಾಗಿದೆ. ಆಸ್ಪತ್ರೆಯ ಹಿಂಭಾಗದಲ್ಲಿ ಗಾರ್ಡನಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಉತ್ತಮ ಆರೋಗ್ಯ ಸೇವೆಯ ಹಿಂದೆ ಆಸ್ಪತ್ರೆಯ ಎಲ್ಲ ವೈದ್ಯಾಧಿಕಾರಿಗಳ, ಮತ್ತು ಸಿಬ್ಬಂಧಿಗಳ ಸೇವೆ ಎದ್ದುಕಾಣುತ್ತಿದೆ.
ಲಭ್ಯವಿರುವ ಸೇವೆಗಳು:
ಆಸ್ಪತ್ರೆಯಲ್ಲಿ ಗರ್ಭೀಣಿ, ಮಕ್ಕಳ, ಕಿವಿ ಮತ್ತು ಗಂಟಲು ಮೂಗು, ಚರ್ಮ, ಎಲಬು ಮತ್ತು ಕೀಲು, ಶಸ್ತçಚಿಕಿತ್ಸೆ, ದಂತ, ಹೃದಯ ಮತ್ತು ಸಾಮನ್ಯ ಖಾಯಿಲೆ,ಅರವಳಿಕೆ ವಿಭಾಗಳಲ್ಲಿ ತಜ್ಞ ವೈದ್ಯರುಗಳು ಸೇವೆ ನೀಡುತ್ತಿದ್ದಾರೆ. ಆಯ್ಯುಷ ವಿಭಾಗದಲ್ಲಿ ಇಬ್ಬರು ವೈದ್ಯರುಗಳು ಸೇವೆಗೆ ಲಭ್ಯರಿದ್ದಾರೆ.ಎಕ್ಸ್ರೇ, ರಕ್ತ ಪರೀಕ್ಷೆ, ಐ.ಸಿ,ಟಿ.ಸಿ/ಲಿಂಕ್‌ಎ.ಆರ್.ಟಿ ವಿಭಾಗ,ಇಸಿಜಿ ಪರೀಕ್ಷೆ, ರಕ್ತ ಸಂಗ್ರಹಣಾ ಕೇಂದ್ರಗಳು ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯವಿದೆ. ಕ್ಷಯರೋಗ ಪತ್ತೆ ಮಾಡುವ ಉನ್ನತ ತಂತ್ರಜ್ಞಾನದ ಸಿ.ಬಿ.ನ್ಯಾಟ್‌ಯಂತ್ರ ಸಹ ಹೊಸದಾಗಿಕ್ಷಯ ವಿಭಾಗಕ್ಕೆ ಬಂದಿದ್ದು ಇನ್ನು ಮುಂದಿನ ದಿನಗಳಲ್ಲಿ ಕ್ಷಯರೋಗ ಪತ್ತೆಗಾಗಿ ಕಪ್ ಮಾದರಿಗಳನ್ನು ಕಾರವಾರಕ್ಕೆ ಕಳುಹಿಸಿಕೊಡುವ ಅವಶ್ಯಕತೆ ಬರುವದಿಲ್ಲ. ಡಯಾಲಿಸಿಸ್ ವಿಭಾಗವಿದ್ದು ಡಯಾಲಿಸಿಸ್ ರೋಗಿಗಳಿಗೆ ಉಚಿತವಾಗಿರುತ್ತದೆ.
ಆಯಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನದಲ್ಲಿಯೂ ಮುಂಚುಣಿಯಲ್ಲಿದೆ.
ಮಾರ್ಚ ೨೦೧೮ ರಿಂದ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಪ್ರಾರಂಭವಾಗಿದ್ದು ಇಲ್ಲಿಯವರೆಗೆ ಸುಮಾರೂ ಮೂರು ಸಾವಿರಕ್ಕೂ ಹೆಚ್ಚಿನ ರೋಗಿಗಳು ಇದರ ಅಡಿಯಲ್ಲಿ ಪಲಾನುಭವಿಗಳಾಗಿ ವಿವಿಧ ರೀತಿಯ ಚಿಕಿತ್ಸೆಗಳನ್ನು ಉಚಿತವಾಗಿ ಪಡೆದುಕೊಂಡಿದ್ದಾರೆ. ಕರ್ನಾಟಕದ ತಾಲೂಕಾ ಆಸ್ಪತ್ರೆಗಳ ವಿಭಾಗದಲ್ಲಿ ಹೊನ್ನಾವರ ಆಸ್ಪತ್ರೆಯು ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯ ಯಶಸ್ವಿ ಅನುಷ್ಟಾನದಲ್ಲಿ ಮೂರನೆ ಸ್ಥಾನದಲ್ಲಿರುವುದು ಜಿಲ್ಲೆಗೆ ಹೊನ್ನಾವರಕ್ಕೆ ಹೆಮ್ಮೆ ಪಡುವ ವಿಷಯವಾಗಿದೆ.ಇಲ್ಲಿಯವರೆಗೆ ಒಂದು ಸಾವಿರದ ನಾಲ್ಕೂನೂರಕ್ಕು ಹೆಚ್ಚಿನ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ (ಮೂರನೆ ಹಂತದಚಿಕಿತ್ಸೆ)ಉನ್ನತ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಕರ್ನಾಟಕ ಅಡಿಯಲ್ಲಿ ರೆಫರ್ ಮಾಡಲಾಗಿದೆ.
ಕೋವಿಡ್‌ಚಿಕಿತ್ಸೆ:
ಮೂವತ್ತು ಬೆಡ್‌ಗಳ ಪ್ರತ್ಯೆಕ ವಾರ್ಡನ್ನು ಕರೋನಾ ಸೊಂಕಿತರಿಗಾಗಿ ಮೀಸಲಿಡಲಾಗಿದೆ. ಕಳೆದ ಮೂರು ತಿಂಗಳಿನಿAದ ಇನ್ನೂರ ಐವತ್ತಕ್ಕೂ ಹೆಚ್ಚು ಸೊಂಕಿತರು ಇಲ್ಲಿ ಚಿಕಿತ್ಸೆ ಪಡೆದು ಕೊಂಡು ಗುಣಮುಖರಾಗಿ ಹೋಗಿದ್ದಾರೆ. ಆರು ಬೆಡ್‌ಗಳ ಐ.ಸಿ.ಯು ಕೋಣೆಯನ್ನು ತೀವೃತರ ಕರೋನಾ ಸೊಂಕಿನಿAದ ಬಳಲುತ್ತಿರುವವರಿಗೆ ಕಾಯ್ದಿರಿಸಲಾಗಿದೆ. ಕರೋನಾ ವಾರ್ಡಿನಲ್ಲಿ ಸ್ವಚ್ಛತೆಗೆ ವಿಶೇಷ ಕಾಳಜಿ ವಹಿಸಲಾಗಿದೆ. ರೋಗಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಸದಾ ಲಭ್ಯವಿರುತ್ತದೆ. ಸೊಂಕಿತರಿಗೆ ಚಿಕಿತ್ಸೆಗೆ ಅನುಗುಣವಾಗಿ ರಕ್ತ ಪರೀಕ್ಷೆ, ಎಕ್ಷ್ರೆ, ಓಕ್ಸಿಜನ್ ವ್ಯವಸ್ಥೆ, ಇಸಿಜಿ ಪರೀಕ್ಷೆಯ ಸೇವೆ ಲಭ್ಯವಿದ್ದುಎಲ್ಲ ಸೇವೆಗಳು ಸಂಪೂರ್ಣ ಉಚಿತವಾಗಿರುತ್ತದೆ.
ಆಡಳಿತ ವೈದ್ಯಾಧಿಕಾರಿಡಾ|| ರಾಜೇಶಕಿಣಿ:
ಆಸ್ಪತ್ರೆಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಬಂದಿರುವದಕ್ಕೆ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶಕಿಣಿ ಸಂತೋಷ ವ್ಯಕ್ತ ಪಡಿಸುತ ಈ ಸ್ಥಾನಕ್ಕೆ ಬರಲು ನಮ್ಮ ಆಸ್ಪತ್ರೆಯ ನಾನ್ ಕ್ಲಿನಿಕಲ್ ಸಿಬ್ಬಂದಿಗಳ ಪರಿಶ್ರಮವನ್ನು ಮರೆಯುವಂತಿಲ್ಲ. ಅಂತೆಯೇ ಆಸ್ಪತ್ರೆಯ ಎಲ್ಲ ಸಿಬ್ಬಂಧಿಗಳು ಮತ್ತು ಸಹದ್ಯೋಗಿ ವೈದ್ಯಾಧಿಕಾರಿಗಳ ಕರ್ತವ್ಯ ಬದ್ದತೆ ನಾವು ಇವತ್ತು ಈ ಸ್ಥಾನದಲ್ಲಿ ಇರಲು ಕಾರಣವಾಗಿದೆ. ಅದೇ ರೀತಿ ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರವು ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಜಾಗದಕೊರತೆ ಇದ್ದು ಪ್ರತ್ಯೇಕ ಓ.ಪಿ.ಡಿ ಬ್ಲಾಕ್‌ನ ಅವಶ್ಯಕತೆ ಎದ್ದು ಕಾಣುತ್ತಿದ್ದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇರೀತಿ ಶೀತಿಲ ವ್ಯವಸ್ಥೆ ತಲುಪಿರುವ ಆಸ್ಪತ್ರೆ ಸಿಬ್ಬಂಧಿಗಳ ವಸತಿಗೃಹ, ಆಸ್ಪತ್ರೆಯ ಹಂಚಿನ ಮೆಲ್ಚಾವಣಿಗೆ ತಗಡಿನ ಹೊದಿಕೆ ಮಾಡುವ ಕುರಿತು ಸರಕಾರಕ್ಕೆ ಪ್ರಸ್ತವಾನೆ ಸಲ್ಲಿಸಲಾಗಿದೆ. ಕೊಲ್ಡ ಸ್ಟೋರೆಜ್ ಆಗುವದರ ಮೂಲಕ ಶವಗಾರ ಉನ್ನತೀಕರಿಸಬೇಕಾಗಿದೆ. ಮೇಲ್ಚಾವಣಿಯಲ್ಲಿ ಇನ್ನಷು ಅಭಿವೃದ್ದಿ ಆಗಬೇಕಿದೆ. ದಾನಿಗಳು ಮುಂದೆ ಬಂದು ಆಸ್ಪತ್ರೆಯ ಅಭಿವೃದ್ದಿಯಲ್ಲಿ ಕೈಜೊಡಿಸಿದ್ದಲ್ಲಿ ಹೆಚ್ಚಿನ ಆರೋಗ್ಯ ಸೇವೆ ನೀಡಲು ಸಾದ್ಯ. ಈ ನಿಟ್ಟಿನಲ್ಲಿ ದಾನಿಗಳು ಮುಂದೆ ಬಂದು ಸಹಾಯ ಮಾಡಬೇಕು ಎಂದು ಡಾ|| ರಾಜೇಶಕಿಣಿ ವಿನಂತಿಸಿಕೊAಡಿದ್ದಾರೆ.

error: