May 15, 2024

Bhavana Tv

Its Your Channel

ಭಟ್ಕಳ ತಾಲೂಕಿನ ೧೬ ಗ್ರಾಮ ಪಂಚಾಯತ್ ಚುನಾವಣೆಗೆ ಮೊದಲ ದಿನ ೧೪ ನಾಮ ಪತ್ರ ಸಲ್ಲಿಕೆ

ಭಟ್ಕಳ ; ತಾಲೂಕಿನ ೧೬ ಗ್ರಾಮ ಪಂಚಾಯತಿ ಚುನಾವಣೆಗೆ ನಾಮ ಪತ್ರ ಸಲ್ಲಿಸುವ ಕಾರ್ಯ ಡಿ.೭ರಂದು ಆರಂಭವಾಗಿದ್ದು ಒಟ್ಟೂ ೧೬ ಗ್ರಾಮ ಪಂಚಾಯತಿಗಳಲ್ಲಿ ೨೮೪ ಸ್ಥಾನಗಳಿದ್ದು ಮೊದಲನೇ ದಿನ ಒಟ್ಟೂ ೧೪ ನಾಮಪತ್ರ ಸಲ್ಲಿಕೆಯಾಗಿದೆ. ದಿನ
ನಾಮ ಪತ್ರ ಸಲ್ಲಿಕೆಯಾದ ಗ್ರಾಮ ಪಂಚಾಯತಿಗಳೆAದರೆ ಶಿರಾಲಿ ಗ್ರಾಮ ಪಂಚಾಯತಕ್ಕೆ ಬಿದ್ರಕೋಡ ಹಾಗೂ ಚಿತ್ರಾಪುರಕ್ಕೆ ತಲಾ ಒಂದು, ಮುಂಡಳ್ಳಿ ಗ್ರಾಮ ಪಂಚಾಯತಕ್ಕೆ ಚೌಥನಿ ಎರಡು, ಮೊಗೇರಕೇರಿ ಒಂದು, ನೀರಗದ್ದೆ ಒಂದು, ಮುಠ್ಠಳ್ಳಿ ಗ್ರಾಮ ಪಂಚಾಯತ್ ಮುಠ್ಠಳ್ಳಿ ಕ್ಷೇತ್ರಕ್ಕೆ ಎರಡು, ಮಾವಳ್ಳಿ-೨ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಡವರಕೇರಿ, ಚಂದ್ರಹಿತ್ಲು ತಲಾ ಒಂದು, ಚಂದ್ರಹಿತಲು ಎರಡು, ಕಾಯ್ಕಿಣಿ ಗ್ರಾಮ ಪಂಚಾಯತ್ ಸಬಾತಿ, ಜನತಾ ಕಾಲೋನಿ ತಲಾ ಒಂದು, ಬೈಲುರು ಗ್ರಾಮ ಪಂಚಾಯತ್ ಮಡಿಕೇರಿ ವಾರ್ಡಿಗೆ ಒಂದು ನಾಮ ಪತ್ರ ಸಲ್ಲಿಕೆಯಾಗಿದೆ. ಉಳಿದಂತೆ ಮಾವಳ್ಳಿ-೧, ಕೊಪ್ಪ, ಬೆಂಗ್ರೆ, ಹೆಬಳೆ, ಮಾವಿನಕುರ್ವೆ, ಕೋಣಾರ, ಹಾಡುವಳ್ಳಿ, ಮಾರುಕೇರಿ, ಯಲ್ವಡಿಕವೂರು, ಬೆಳಕೆ ಗ್ರಾಮ ಪಂಚಾಯತ್‌ಗಳಿಗೆ ಯಾವುದೇ ನಾಮ ಪತ್ರ ಸಲ್ಲಿಕೆಯಾಗಿರುವುದಿಲ್ಲ.

error: