May 18, 2024

Bhavana Tv

Its Your Channel

ಅರಣ್ಯವಾಸಿಗಳ ಸಮಸ್ಯೆಗಳಿಗೆ ಸಂಘರ್ಷದ ವರ್ಷ – ೨೦೨೦

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅರಣ್ಯವಾಸಿಗಳ ಸಮಸ್ಯೆಗೆ ೨೦೨೦ ನೇಸಾಲಿನ ವರ್ಷವನ್ನು ಸಂಘರ್ಷಗಳ ವರ್ಷವನ್ನಾಗಿ ಎದುರಿಸಿ ಈ ವರ್ಷವೇ ಹೋರಾಟಕ್ಕೆ ೩೦ ನೇ ವಷ಼ðಕ್ಕೆ ಪಾದಾರ್ಪಣೆ ಮಾಡಿ, ಅರಣ್ಯ ವಾಸಿಗಳ ಪರವಾಗಿ ಸಂಘಟಿಸಿದ ೨೦೨೦ನೇ ವರ್ಷದಲ್ಲಿ ಸಂಘಟಿಸಿದ ಕಾರ್ಯಕ್ರಮವು ಹೋರಾಟದ ಇತಿಹಾಸ ಪುಟಕ್ಕೆ ಸೇರ್ಪಡೆಗೊಂಡಿರುವುದು ಹೋರಾಟಗಾರರ ವೇದಿಕೆಯ ೨೦೨೦ ನೇ ವರ್ಷದ ವಿಶೇಷ.

ಜಿಲ್ಲೆಯ ಸಾಮಾಜಿಕ ಸಮಸ್ಯೆಗಳಲ್ಲಿ ಒಂದಾದ ಅರಣ್ಯ ಅತಿಕರಮಣದಾರರ ಸಮಸ್ಯೆಗೆ ನಿರಂತರ, ಸಂಘಟನಾತ್ಮಕ ಮತ್ತು ಕಾನೂನಾತ್ಮಕವಾಗಿ ೨೯ ವರ್ಷದಿಂದ ಸ್ಪಂದಿಸುತ್ತಿರುವ ವೇದಿಕೆಗೆ ೨೦೨೦ನೇ ವರ್ಷ ಕೋವಿಡ್-೧೯ ರಿಂದ ಉಂಟಾದ ಆರ್ಥಿಕ ಆರೋಗ್ಯ ಸಮಸ್ಯೆಗಳೊಂದಿಗೆ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯ ಎದುರಿಸುವುದು ಸವಾಲ್ ಆಗಿತ್ತು.
ಕೋವಿಡ್-೧೯ ರ ಸಂದರ್ಭದಲ್ಲಿ ಸರಕಾರ ಹಮ್ಮಿಕೊಂಡ ಸೌಲಭ್ಯವನ್ನು ಅರಣ್ಯವಾಸಿಗಳಿಗೆ ಜಾಗೃತಿ ಮಾಡುವುದರೊಂದಿಗೆ ಸಮರ್ಪಕವಾಗಿ ತಲುಪಿಸುವಂತೆ, ರೇಶನ್ ಸಾಮಗ್ರಿ , ಆರೋಗ್ಯ ಚಿಕಿತ್ಸೆ, ಮುಂಜಾಗೃತಾ ಕ್ರಮ, ನೇರವಾಗಿ ಮತ್ತು ಪೋನಿನ ಮೂಲಕ ಸಮಾರು ೨೦೦೦೦ ಕುಟುಂಬಕ್ಕೆ ಸಂಪರ್ಕಿಸಿದ್ದು ವಿಶೇಷ . ಕುಗ್ರಾಮದಲ್ಲಿ ಇರುವ ಅರಣ್ಯವಾಸಿಗಳಿಗೆ ಆಹಾರ ಕಿಟ್ ಪೂರೈಕೆ ಮಾಡಿರುವುದು ಶ್ಲಾಘನೀಯ ಕಾರ್ಯ. ಜಿಲ್ಲಾಧಿಕಾರಿಗಳೊಂದಿಗೆ ನೇರ ಸಂಪರ್ಕದ ಮೂಲಕ ಸಮಸ್ಯೆಗಳ ಪರಿಹಾರ ಕಂಡುಕೊoಡಿದ್ದು ಇದಕ್ಕೆ ಜಿಲ್ಲಾಧಿಕಾರಿಗಳ ತುರ್ತು ಸ್ಪಂದಿಸಿರುವುದು ಗಮನಾರ್ಹ.
ಹಿಂದಿನ ವರ್ಷದಂತೆ ಅರಣ್ಯವಾಸಿಗಳ ಕಿರುಕುಳ,ದೌರ್ಜನ್ಯ ಸಂಘಟನಾತ್ಮಕವಾಗಿ ಹೋರಾಟದ ಮೂಲಕ ಸ್ಪಂದನೆ ಸವೋಚ್ಚ ನ್ಯಾಯಾಲಯ, ನ್ಯೂಡೆಲ್ಲಿ ಮತ್ತು ಉಚ್ಚ ನ್ಯಾಯಾಲಯ ಬೆಂಗಳೂರಿನಲ್ಲಿ ಅರಣ್ಯವಾಸಿಗಳ ಹಕ್ಕಿಗೆ ಸಂಬoಧಿಸಿ ತೊಡಕಾದ ಕಾನೂನಾತ್ಮಕ ಹೋರಾಟದ ಮುಂದುವರಿಕೆ ೨೦೨೦ ನೇ ವರ್ಷದಲ್ಲಿಯೂ ಮುಂದುವರಿಸಿದ್ದು ವಿಶೇಷ . ಈ ಪ್ರಕ್ರಿಯೆಯಲ್ಲಿ ಹಿರಿಯ ಸಾಮಾಜಿಕ ಚಿಂತಕ ಕಾಗೋಡು ತಿಮ್ಮಪ್ಪ ಮತ್ತು ವಿಶ್ರಾಂತ ಉಚ್ಚನ್ಯಾಯಾಲಯಯ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಅವರ ಮಾರ್ಗದರ್ಶನ ಪ್ರಶಂಸನೀಯ.
ಗ್ರಾಮ ಸ್ವರಾಜ್ಯದ ನೆಲಗಟ್ಟಾದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಪಕ್ಷಾತೀತವಾಗಿ ೧೦೦೦ ಕ್ಕಿಂತ ಹೆಚ್ಚು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಮುಖರು, ಕಾರ್ಯಕತರು ಹಾಗೂ ಅತಿಕ್ರಮಣದಾರರನ್ನು ಸ್ಪರ್ಧಿಸಲು ಕಾರ್ಯಯೋಜನೆ ಹಮ್ಮಿಕೊಂಡಿರುವುದು ೨೦೨೦ ರ ಪ್ರಮುಖ ಅಂಶವಾಗಿದೆ.
ಪರಿಹಾರಕ್ಕೆ ಕಂಕಣ ಬದ್ಧ:- ನಿರಂತರ ೩೦ನೇ ವರ್ಷಕ್ಕೆ ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತ, ೨೦೨೦ ನೇ ವರ್ಷದಲ್ಲಿಯೂ ಸಂಘಟನಾತ್ಮಕವಾಗಿ ಕಾರ್ಯಸಾಧನೆ ಮಾಡಿದ್ದು, ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬAಧಿಸಿ ಹೋರಾಟಗಾರರ ವೇದಿಕೆಯು ಕಂಕಣಬದ್ಧವಾಗಿದೆ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ

error: