May 16, 2024

Bhavana Tv

Its Your Channel

ನಾಮಧಾರಿ ಸಂಘದಿoದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕುಮಟಾ : ತಾಲೂಕು ಆರ್ಯ ಈಡಿನ ನಾಮಧಾರಿ ಸಂಘ, ನಾಮಧಾರಿ ಮಹಿಳಾ ಸಂಘ, ಯುವ ನಾಮಧಾರಿ ಸಂಘ, ನಾಮಧಾರಿ ನೌಕರರ ಸಂಘ ಹಾಗೂ ಶ್ರೀರಾಮ ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಶುಕ್ರವಾರ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು

ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತರಾದ ಉಜಿರೆ ರಾಮಕ್ಷೇತ್ರದ ಸ್ವಾಮಿಜಿಗಳಾದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಅಶೀರ್ವದಿಸಿದರು.
ಮುಖ್ಯ ಅತಿಥಿಯಾಗಿ ಶಿರಸಿಯ ಡಿವೈಎಸ್‌ಪಿ ರವಿ ಡಿ. ನಾಯ್ಕ ಉಪಸ್ಥಿತರಿದ್ದು ಮಾತನಾಡಿ ಜೀವನ ಉನ್ನತಿಗಾಗಿ ಶಿಕ್ಷಣ ಬೇಕು. ಗುರಿಯೆಡೆಗೆ ಸಾಗಲು ಶಿಸ್ತು, ಪ್ರಾಮಾಣಿಕತೆ, ವಿನಯ ಇರಬೇಕು. ಸಾಧನೆಗೆ ಅಡ್ಡಿಗಳು ಹೊರಗಡೆ ಎಲ್ಲೂ ಇಲ್ಲ. ನಮ್ಮೊಳಗೆ ಇರುವ ಕೊರತೆಗಳನ್ನು ನೀಗಿಸಿಕೊಂಡರೆ ಯಶಸ್ಸು ಖಚಿತ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಗಣೇಶ ಟಿ. ನಾಯ್ಕ ಮಾತನಾಡಿ, ಸಮಾಜ ಸಂಘಟನೆಯಿAದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಲಿ ಎಂದರು.

ಪ್ರತಿಭಾ ಪುರಸ್ಕಾರದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಕಾರ್ತಿಕ್ ನಾಯ್ಕ, ಅಕ್ಷಯ್ ನಾಯ್ಕ, ಪ್ರಣವ ಎಸ್., ಪ್ರಗತಿ ನಾಯ್ಕ, ಅಕಾಂಕ್ಷಾ ಎಂ. ಹಾಗೂ ೯೦% ಕ್ಕಿಂತ ಹೆಚ್ಚು ಅಂಕಗಳಿಸಿದ ೨೦ ಮಂದಿಗೆ ಪುರಸ್ಕರಿಸಲಾಯಿತು. ವಿವಿಧ ಕ್ಷೇತ್ರದ ಸಾಧನೆಗಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ರಾಜು ಆರ್. ನಾಯ್ಕ, ಭಾಸ್ಕರ ಜಿ. ನಾಯ್ಕ, ಸಾಹಿತಿ ಸಂಧ್ಯಾ ವಿ. ನಾಯ್ಕ, ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದ ಸಂಪ್ರೀತ್ ಎಸ್.ನಾಯ್ಕರನ್ನು ಸನ್ಮಾನಿಸಲಾಯಿತು.

ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಆರ್.ಜಿ.ನಾಯ್ಕ, ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಎನ್. ಆರ್. ನಾಯ್ಕ, ಯುವ ನಾಮಧಾರಿ ಸಂಘದ ಉಪಾಧ್ಯಕ್ಷ ಸಂತೋಷ ನಾಯ್ಕ ಇನ್ನಿತರರು ಇದ್ದರು. ಶಿಕ್ಷಕ ಮಂಜುನಾಥ ನಾಯ್ಕ ನಿರ್ವಹಿಸಿದರು.

error: