May 16, 2024

Bhavana Tv

Its Your Channel

ಬ್ಯಾಂಕುಗಳಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಬೇಕು ಹಾಗೂ ಎ.ಟಿ.ಎಂ.ಗಳಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು.

ಕುಮಟಾ: ಬ್ಯಾಂಕುಗಳಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಬೇಕು ಹಾಗೂ ಎ.ಟಿ.ಎಂ.ಗಳಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು ಎಂದು ಕನ್ನಡ ಜಾಗೃತಿ ಸಮಿತಿ ಕುಮಟಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಲಾಯಿತು.

ಬ್ಯಾಂಕುಗಳಲ್ಲಿ ಕನ್ನಡ ಕನ್ನಡಕ್ಕೆ ಪ್ರಾದ್ಯಾನ್ಯತೆ ನೀಡುವ ಉದ್ದೇಶದಿಂದ ಬ್ಯಾಂಕಿನ ಜಾಲತಾಣಗಳು ಎಟಿಎಂ ವ್ಯವಹಾರಗಳು ಎಲ್ಲವೂ ಕನ್ನಡದಲ್ಲಿರಬೇಕು. ಸೂಚನಾ ಫಲಕಗಳು ಸೇರಿದಂತೆ ಪ್ರದರ್ಶನ ಪತ್ರಗಳು ಕನ್ನಡದಲ್ಲಿಯೇ ಇರಬೇಕು. ಗ್ರಾಹಕರು ಚೆಕ್ ಚಲನ್ ಗಳನ್ನು ಕನ್ನಡದಲ್ಲಿ ಭರ್ತಿಮಾಡಲು ಬ್ಯಾಂಕ್ ಗಳು ಕೂಡ ಪ್ರೋತ್ಸಾಹಿಸಬೇಕು, ನಿತ್ಯ ವ್ಯವಹಾರದ ಅಗತ್ಯದ ಪದಗಳನ್ನು ಸಿದ್ಧಪಡಿಸಿ ಅದನ್ನು ಗ್ರಾಹಕರಿಗೆ ದೊರಕುವಂತೆ ಮಾಡಬೇಕು. ಗ್ರಾಹಕರ ಅನುಕೂಲಕ್ಕಾಗಿ ಕನ್ನಡ ಬಲ್ಲವರನ್ನು ಕನ್ನಡ ಸಂಪರ್ಕಾಧಿಕಾರಿಯಾಗಿ ನೇಮಿಸಿ ಪರಿಣಾಮಕಾರಿಯಾಗಿ ಕನ್ನಡವನ್ನು ಅನುಷ್ಠಾನಗೊಳಿಸಬೇಕು. ಬ್ಯಾಂಕ್ ಸಿಬ್ಬಂದಿಗಳಿಗೆ ವಾರಕ್ಕೊಮ್ಮೆಯಾದರೂ ಕನ್ನಡ ಸ್ಪರ್ಧೆಗಳನ್ನು ಏರ್ಪಡಿಸಿಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

 ಈ ಸಂದರ್ಭದಲ್ಲಿ ಸದಸ್ಯರಾದ ಮಂಜುನಾಥ್ ನಾಯ್ಕ, ಭಂಡಾರಿ, ಗಣೇಶ್ ಜೋಶಿ, ಶೈಲಾ ಗುನಗಿ,ಕನ್ನಡ ಜಾಗೃತ ಸಮಿತಿಯ ಶಾಂತಾ ಭಟ್, ರಾಜು ಶೇಟ್ ,ನಿತ್ಯಾನಂದ ನಾಯ್ಕ, ಲಲಿತಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
error: