April 27, 2024

Bhavana Tv

Its Your Channel

ಭಟ್ಕಳ ನಗರ ಠಾಣೆಗೆ ನೂತನ ಪಿ.ಎಸ್.ಐ ಸುಮಾ ಆಚಾರ್ಯ ನೇಮಕ

ಭಟ್ಕಳ: ಇಲ್ಲಿನ ನಗರ ಠಾಣೆಯ ಕಾನೂನು ಹಾಗೂ ಸುವ್ಯವಸ್ಥೆ-1 ವಿಭಾಗದ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಗುರುವಾರದಂದು ನಗರ ಠಾಣೆಗೆ ನೂತನ ಪಿ.ಎಸ್.ಐ ಆಗಿ ಚಿಕ್ಕಮಗಳೂರು ಮೂಡುಗೆರೆ ಮೂಲದ ಸುಮಾ ಆಚಾರ್ಯ ನೇಮಕಗೊಂಡಿದ್ದಾರೆ.ಈ ಹಿಂದಿನ ಪಿ.ಎಸ್.ಐ ಭರತ ಕುಮಾರ್ ಅವರು ಭಟ್ಕಳ ಗ್ರಾಮಿಣ ಠಾಣೆಗೆ ವರ್ಗಾವಣೆ ಗೊಂಡಿದ್ದು ಈ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
ಇವರು ಈ ಹಿಂದೆ ಉಡುಪಿ ಹೆಬ್ರಿ ಪೋಲಿಸ್ ಠಾಣೆ ಯಲ್ಲಿ 9 ತಿಂಗಳ ಪಿಎಸೈ ಆಗಿ ಕಾರ್ಯನಿರ್ವಹಿಸಿದ್ದು ಈಗ ಭಟ್ಕಳಕ್ಕೆ ನೂತನವಾಗಿ ನೇಮಕವಾಗಿದ್ದಾರೆ.
ಇಂದೇ ಭಟ್ಕಳಕ್ಕೆ ನೇಮಕಗೊಂಡಿದ್ದು,ಮುಂದಿನ ದಿನದಲ್ಲಿ ನಗರ ವ್ಯಾಪ್ಯಿಯ ಬಗ್ಗೆ ಮಾಹಿತಿ ಪಡೆದು ಕಾನೂನು ಸುವ್ಯವಸ್ಥೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕಾರ್ಯ ಮಾಡಲಿದ್ದೇವೆ.ನಗರ ಠಾಣೆಯ ಕಾನೂನು- ಸುವ್ಯವಸ್ಥೆ-1 ವಿಭಾಗದ ಪಿಎಸೈ ಸುಮಾ ಆಚಾರ್ಯ ಹೇಳಿದರು.

error: