April 26, 2024

Bhavana Tv

Its Your Channel

ಸಂತೆ ಮಾರುಕಟ್ಟೆಯಲ್ಲಿ ಮಾಸ್ಕ ಧರಿಸದೇ ಖರೀದಿಗೆ ಬಂದಿದ್ದ ಸಾರ್ವಜನಿಕರಿಗೆ ದಂಡ

ಭಟ್ಕಳ : ರಾಜ್ಯದಲ್ಲಿ ಕರೋನಾ ಅಲೆ ಹೆಚ್ಚಾಗುತ್ತೀರುವ ಹಿನ್ನೆಲೆಯಲ್ಲಿ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ರವಿವಾರ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸಂತೆ ಮಾರುಕಟ್ಟೆಯಲ್ಲಿ ಮಾಸ್ಕ ಧರಿಸದೇ ಖರೀದಿಗೆ ಬಂದಿದ್ದ ಸಾರ್ವಜನಿಕರಿಗೆ ದಂಡ ವಿಧಿಸಿದರು.

ಕೋವಿಡ್ ಮಾರ್ಗಸೂಚಿ ಪಾಲಿಸಿ ಕಡ್ಡಾಯ ಮಾಸ್ಕ ಧಾರಣೆಗೆ ಸೂಚಿಸಿದರೂ ಭಟ್ಕಳದಲ್ಲಿ ಅದು ಪಾಲನೆಯಾಗುತ್ತಿಲ್ಲ. ಇತ್ತ ಬೆಂಗಳೂರಿನಲ್ಲಿ ಕರೋನಾ ಜಾಸ್ತಿಯಾದ ಕಾರಣ ಬೆಂಗಳೂರಿನಲ್ಲಿ ವಾಸಿಯಾದ ಭಟ್ಕಳಿಗರು ಊರ ಕಡೆ ಮುಖ ಮಾಡುತ್ತೀರುವ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಕರೋನಾ ಮಾರ್ಗಸೂಚಿ ಪಾಲಿಸದವರಿಗೆ ದಂಡ, ಗಂಟಲು ದ್ರವ ಪರೀಕ್ಷೆಗೆ ಮುಂದಾಗಿದೆ. ರವಿವಾರ ಸಂತೆ ಮಾರುಕಟ್ಟೆಯಲ್ಲಿ ಮಾಸ್ಕ ಧರಿಸದೇ ಓಡಾಡುತ್ತಿದ್ದ ೬೮ ಸಾರ್ವಜನಿಕರಿಂದ ರೂಪಾಯಿ ೬೮೦೦/- ದಂಡ ವಸೂಲಿ ಮಾಡಲಾಗಿದೆ. ಪುರಸಭೆ ಮುಖ್ಯಾಧಿಕಾರಿ. ದೇವರಾಜು, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ,
ಆರೋಗ್ಯ ನಿರೀಕ್ಷಕ ವಿನಾಯಕ ನಾಯ್ಕ, ಕಚೇರಿ ಸಿಬ್ಬಂದಿ ಇಸ್ಮಾಯಿಲ್ ಗುಬ್ಬಿ, ಅನ್ವರ್ ಬಾಳೂರ, ಪೌರಕಾರ್ಮಿಕರಾದ ಸತೀಶ ಕೃಷ್ಣ, ಕೃಷ್ಣಾ ಅಣ್ಣಾಮಲೈ, ಮುರುಘ, ನಾಗರಾಜ, ವಾಹನ ಚಾಲಕ ಶಂಕರ ನಾಯ್ಕ, ಸಿಬ್ಬಂದಿ ಸಣ್ಣುಗೊಂಡ, ರವಿಚಂದ್ರ ಮುಂತಾದವರು ಭಾಗವಹಿಸಿದ್ದರು.

error: