May 2, 2024

Bhavana Tv

Its Your Channel

ಅತಿ ಸರಳವಾಗಿ ಸಂಪನ್ನಗೊoಡ ಚನ್ನಪಟ್ಟಣದ ಹನುಮಂತ ದೇವರ ಬ್ರಹ್ಮರಥೋತ್ಸವ

ಭಟ್ಕಳ: ಕೋವಿಡ್ ೧೯ ವೈರಸ್‌ನ ಕಾರಣ ಭಟ್ಕಳ ಪಟ್ಟಣದ ಚನ್ನಪಟ್ಟಣದ ಹನುಮಂತ ದೇವರ ಬ್ರಹ್ಮರಥೋತ್ಸವವು ಕೇವಲ ಧಾರ್ಮಿಕ ಆಚರಣೆಗ ಮಾತ್ರ ಸೀಮಿತವಾಗಿದ್ದು ಅತಿ ಸರಳ ಸಂಪ್ರದಾಯಿಕವಾಗಿ ಸಂಪನ್ನಗೊAಡಿತ್ತು.

ಭಟ್ಕಳದ ಗೊರ್ಟೆಯಿಂದ ವೆಂಕಟಾಪುರ ತನಕ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಿಗೂ ಚನ್ನಪಟ್ಟಣದ ಹನುಮಂತ ದೇವರು ಗ್ರಾಮ ದೇವರಾದ ಕಾರಣ ಬ್ರಹ್ಮರಥೋತ್ಸವ ದಿನ ಇಲ್ಲಿ ರಥಕಾಣಿಕೆ ಸಲ್ಲಿಸಲು ಸಾವಿರಕ್ಕೂ ಹೆಚ್ಚೂ ಜನ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಸಂಜೆ ನಡೆಯುವ ರಥೋತ್ಸವದಲ್ಲಿ ೫ ರಿಂದ ೧೦ ಸಾವಿರ ಜನ ಭಾಗಿಯಾಗುತ್ತಿದ್ದರು.
ಆದರೆ ಈ ಬಾರಿ ಜಿಲ್ಲಾಧಿಕಾರಿಗಳು ರಥೋತ್ಸವಕ್ಕೆ ಪರವಾನಿಗೆ ನೀಡದ ಕಾರಣ ಹಬ್ಬದ ವಾತಾವರಣ ಸಂಪೂರ್ಣ ಕಳೆಗುಂದಿಹೋಗಿತ್ತು. ಪೊಲೀಸರು ಕೂಡ ಸಾರ್ವಜನಿಕರಿಗೆ ಸ್ಥಳದಲ್ಲಿ ನಿಲ್ಲಲು ಅವಕಾಶ ನೀಡಲಿಲ್ಲ. ಧಾರ್ಮಿಕ ಆಚರಣೆಯನ್ನು ಪೂರ್ಣಗೊಳಿಸಿ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಹೊರತಂದು ಶಾಸ್ತ್ರಾನುಸಾರ ರಥದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿದರು.
ಸಾರ್ವಜನಿಕರಿಗೆ ರಥಕಾಣಿಕೆ ಮಾಡಲು ಅವಕಾಶವಿರದ ಕಾರಣ ಆಡಳಿತ ಸಮಿತಿಯ ರಥಕಾಣಿಕೆ ಮಾತ್ರ ಅರ್ಪಿಸಲಾಯಿತು. ರಥ ಎಳೆಯಲು ಪೊಲೀಸರು ಅವಕಾಶ ನೀಡದ ಕಾರಣ ರಥದ ಒಂದು ಚಕ್ರ ಮಾತ್ರ ಎಳೆದು ಬೀಡಲಾಯಿತು. ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ, ಸಿಪಿಐ ದಿವಾಕರ ಸ್ಥಳದಲ್ಲಿದ್ದು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸದAತೆ ನೋಡಿಕೊಂಡರು.
ಭಟ್ಕಳ ಶಾಸಕ ಸುನೀಲ್ ನಾಯ್ಕ, ಆಡಳಿತ ಸಮಿತಿಯ ಅಧ್ಯಕ್ಷ ಶ್ರೀಧರ ಮೊಗೇರ, ಸುರೇಂದ್ರ ಭಟ್ಕಳ, ಶ್ರೀಪಾದ ಕಂಚುಗಾರ, ಶಾಂತರಾಮ ಭಟ್ಕಳ, ನಾಗೇಶ ಪೈ ಇದ್ದರು.

error: