May 17, 2024

Bhavana Tv

Its Your Channel

ಹೊನ್ನಾವರ ಲಯನ್ಸ್ ಕ್ಲಬ್‌ಗೆ ಲಯನ್ ಡಿಸ್ಟಿಕ್ಟ್ 317B ಗವರ್ನರ್ ಅಧಿಕೃತ ಭೇಟಿ


ಹೊನ್ನಾವರ: ಹೊನ್ನಾವರ ಲಯನ್ಸ್ ಕ್ಲಬ್‌ಗೆ ಡಿಸ್ಟಿಕ್ಟ್ 317Bಯ ಗವರ್ನರ್ MJF ಲಯನ್ ಡಾ|| ಗಿರೀಶ ಕುಚಿನಾಡರವರ ಅಧಿಕೃತ ಬೇಟಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ MJF ಲಯನ್ ಡಾ|| ಗಿರೀಶ ಕುಚಿನಾಡರವರು ಮಾತಾನಾಡಿ ಈ ವರ್ಷದ ಲಯನ್ ವರ್ಷ ಕರೋನಾ ವರ್ಷ ಎಂದು ಹೇಳಬಹುದು. ಇಡೀ ವರ್ಷ ಕರೋನಾ ಭಯದಿಂದ ನಮ್ಮ ಅನೇಕ ಸೇವಾ ಚಟಿವಟಿಕೆಗಳಿಗೆ ತುಂಬಾ ತೊಂದರೆಯಾಯಿತು. ಆದರು ಜಗತ್ತಿನಾದ್ಯಂತ ಲಯನ್ ಸಂಸ್ಥೆ ಕರೋನಾ ವಿರುದ್ಧ ಜಾಗೃತಿ ಕಾರ್ಯಕ್ರಮ, ಪರಿಹಾರ ಕಾರ್ಯಕ್ರಮ ಹಮ್ಮಿಕೊಂಡು ಜಗತ್ತಿನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಹೊನ್ನಾವರ ಲಯನ್ಸ್ ಕ್ಲಬ್ ಈ ವೇಳೆಯಲ್ಲಿ ಅನೇಕ ಕರೋನಾ ಜನ ಜಾಗೃತಿ ಕಾರ್ಯಕ್ರಮ ಮತ್ತು ಕರೋನಾ ವೇಳೆಯಲ್ಲಿ ತೊಂದರೆಗೀಡಾದವರಿಗೆ ಸಹಾಯ ಹಸ್ತ ಅಷ್ಟೇ ಅಲ್ಲದೆ LCIF ಸಂಸ್ಥೆ ಸುಮಾರು ೩ ಲಕ್ಷ ರೂ ಗಿಂತಲೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಸರ್ಕಾರಿ ಆಸ್ಪತ್ರೆ ಮತ್ತು ವಿವಿಧ ಕ್ಷೇತ್ರಗಳಿಗೆ ಹಂಚಿಕೆ ಮಾಡಿದೆ. ಹಾಗು ನೆರ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಹಾಗೂ ಕರೋನಾ ವಾರಿಯರ್ಸಗೆ ನೆರವು ಒದಗಿಸಲು ವಿಶೇಷ ಕೆಲಸ ಮಾಡಿದೆ. ಈ ಕೆಲಸ ಕಾರ್ಯಗಳಲ್ಲಿ ವಿಶೇಷ ಸಾಧನೆ ಮಾಡಿದ ಹೊನ್ನಾವರ ಲಯನ್ಸ್ ಕ್ಲಬ್‌ನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಅಷ್ಟೆ ಅಲ್ಲದೇ ಅನಾಥಾಶ್ರಮಗಳಿಗೆ, ಬಡವರಿಗೆ ಹಾಗೂ ಕಿಡ್ನಿ ರೋಗದಿಂದ ಬಳಲುವವರಿಗೆ ಡಯಾಲಿಸಸ್ ಮಾಡುವಲ್ಲಿ, ಬಡ ರೋಗಿಗಳಿಗೆ ವಿಶೇಷವಾಗಿ ಆರ್ಥಿಕವಾಗಿ ಹಿಂದಿದುಳಿದವರಿಗೆ, ಮುತುವರ್ಜಿವಹಿಸಿ ಸಹಾಯಹಸ್ತ ನೀಡಿದೆ. ಅಷ್ಟೇ ಅಲ್ಲದೆ ಪರಿಸರ ಕಾಳಜಿ, ಕನ್ನಡ ನಾಡನುಡಿಗೆ ಬಗ್ಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದರ ಮೂಲಕ ಜನ ಮೆಚ್ಚುಗೆÀಗೆ ಪಾತ್ರವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಮೊಬೈಲ್ ಡಯಾಬಿಟಿಕ್ ಸೆಂಟರನ್ನು ಪ್ರಾರಂಬಿಸುವುದು ಮತ್ತು ಆರೋಗ್ಯ ಕೇಂದ್ರಗಳನ್ನು ಹೊನ್ನಾವರದಲ್ಲಿ ತೆರೆಯುವ ಬಗ್ಗೆ ಅಂತರಾಷ್ಟಿçÃಯ ಸಂಸ್ಥೆಯಿAದ ಸಹಾಯ ಧನ ಒದಗಿಸುತ್ತೇನೆ ಎಂದು ಭರವಸೆ ನೀಡಿದರು. ತನ್ನ ಲಯನ್ ಡಿಸ್ಟಿçಕ್‌ನಲ್ಲಿ ಹೊನ್ನಾವರ ಲಯನ್ಸ್ ಕ್ಲಬ್ ಬಗ್ಗೆ ವಿಶೇಷ ಪ್ರೀತಿ ಯಾಕಂದರೆ ಹೊನ್ನಾವರ ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿಯೇ ತನ್ನ ಸೇವಾ ಚಟುವಟಿಕೆಗಳ ಮುಖಾಂತರ ಹೆಸರುವಾಸಿಯಾಗಿದೆ. ಇಂಥ ಕರೋನಾ ಸಂಧರ್ಬದಲ್ಲಿಯೂ ಕೂಡ ಹೆದರದೆ ಅನೇಕ ಬಡವರಿಗೆ ಅನುಕೂಲವಾಗು ಸೇವಾ ಚಟುವಟಿಕೆಗಳನ್ನು ಮಾಡಿದೆ ಎಂದು ಪ್ರಶಂಸಿದರು.
ಈ ಸಂಧರ್ಬದಲ್ಲಿ ಉಪಸ್ಥಿತಿರಿದ್ದ ಲಯನ್ ಕ್ಯಾಬಿನೆಟ್ ಕೋಡಿನೇಟರ್ MJF ಲಯನ್ ಎಸ್. ಜೆ ಕೈರನ್ನ ಮಾತಾನಾಡಿ ಹೊನ್ನಾವರ ಲಯನ್ಸ್ ಕ್ಲಬ್‌ನ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಶಿಸಿ ಮಾತಗಳನ್ನಾಡಿ ಲಯನ್ ಸದಸ್ಯನಾಗಿರುವುದೇ ಹೆಮ್ಮೆ ಎಂದು ಹೇಳಿದರು.
ಇದೇ ವೇಳೆಯಲ್ಲಿ ರಿಝನಲ್ ಚೇರ್‌ಪರ್ಸನ್ MJF ಲಯನ್ ಡಾ|| ಸುರೇಶ ಎಸ್, Z.C  ಲಯನ್ ಎನ್ ಜಿ. ಭಟ್ಟ್ ಕ್ಲಬ್ ನ ಕಾರ್ಯವನ್ನು ಪ್ರಶಂಸಿ ಮಾತನಾಡಿದರು.
ಪ್ರಾರಂಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಪ್ರದೀಪ ಶೆಟ್ಟಿ ಸರ್ವರನ್ನು ಸ್ವಾಗತಿಸಿ ಕ್ಲಬ್‌ನ ಕಾರ್ಯ ಚಟುವಟಿಕೆಗಳ ಬಗ್ಗೆ ಮತಾನಾಡಿದರು.
೨೦೨೦-೨೧ ನೇ ಸಾಲಿನ ಕ್ಲಬ್‌ನ ವಾರ್ಷಿಕ ವರದಿಯನ್ನು ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಎಂ.ಜಿ. ನಾಯ್ಕ ಮಂಡಿಸಿದರು. ಲಿಯೋ ಕ್ಲಬ್ ಕಾರ್ಯದರ್ಶಿ ಸ್ವಾತಿ ಶೆೆಟ್ಟಿ ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಅತ್ಯಂತ ಬಡ ಮಹಿಳೆ ಉಷಾ ನಾಯ್ಕ ಇವರಿಗೆ ಹೋಲಿಗೆ ಯಂತ್ರವನ್ನು ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವಿಸಲಾಯಿತು. ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ ಎಂ.ಟಿ. ಗೌಡ, ಶ್ರೀ ಜಿ. ಟಿ. ನಾಯ್ಕ, ಶ್ರೀಮತಿ ಭಾಗಿರಥಿ ಹೆಗಡೆ ಹಾಗೂ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಹವಲ್ದಾರ ಶ್ರೀ ಲೊಕೇಶ.ಎ. ಅತ್ಯುತ್ತಮ ಪ್ರಾಮಾಣಿಕ ನೌಕರ ಹೆಸ್ಕಾಂನ ಪವರ್ ಮ್ಯಾನ ರವಿಚಂದ್ರ ಗುಂಜಲೂಡ್ ಮತ್ತು ಪ್ರಾಮಾಣಿಕ ಹಾಗೂ ಅನೇಕ ಬಡರೋಗಿಗಳಿಗೆ ಸಮಯಕ್ಕೆ ಸೇರಿಯಾಗಿ ತಲುಪಿಸಿ ಜನ ಮೆಚ್ಚುಗೆಗೆ ಪಾತ್ರರಾದ ಹೊನ್ನಾವರದ ಶ್ರೀದೇವಿ ಅಂಬ್ಬುಲೆನ್ಸ್ ಚಾಲಕ ಗಣೇಶ ಶೇಜವಾಡಕರ ಇವರನ್ನು ಸನ್ಮಾನಿಸಲಾಯಿತು.
೨೦೧೯-೨೦೨೧ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ೯೯.೨% ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಜಯಂತ ರಾಜೇಂದ್ರ ಹಬ್ಬು ಮತ್ತು ಕರ್ನಾಟಕ ವಿಶ್ವವಿದ್ಯಾಲಯಕ್ಕೆ BSC ಯಲ್ಲಿ ೯೭.೦೮% ಅಂಕ ಪಡೆದು ತೃತೀಯ ರ‍್ಯಾಂಕ ಪಡೆದ ವಿದ್ಯಾರ್ಥಿನಿ ರಾಜೇಶ್ವರಿ ಮಂಜುನಾಥ ನಾಯ್ಕ ರವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಹೊನ್ನಾವರ ಲಯನ್ ಸಂಸ್ಥೆಯಲ್ಲಿ ವಿಶೇಷ ಸೇವೆಗೈದ MJF ಲಯನ್ ವಸಂತ ಪ್ರಭು, MJF ಲಯನ್ ಎಸ್.ಜೆ.ಕೈರನ್, MJF ಲಯನ್ ಎಸ್.ಟಿ. ನಾಯ್ಕ, MJF ಜೀವೋತ್ತಮ , MJF ಲಯನ್ ಡಾ|| ಸುರೇಶ ಎಸ್.,ರವನ್ನು ಕ್ಲಬ್ ಪರವಾಗಿ ಸನ್ಮಾನಿಸಲಾಯಿತು.
ವಿಶೇಷ ಕಾರ್ಯ ಮಾಡಿದ ಗವರ್ನರ MJFಲಯನ್ ಡಾ|| ಗೀರಿಶ ಕುಚಿನಾಡ ರವರನ್ನು ಕ್ಲಬ್ ಸನ್ಮಾನಿಸಲಾಯಿತು. ಲಯನ್ ರಾಜೇಶ ಸಾಲೇಹಿತ್ತಲ್ ಪರಿಚಯ ಮಾಡಿದರು. ವೇದಿಕೆಯಲ್ಲಿ ಲಿಯೋ ಕ್ಲಬ್‌ನ ಅಧ್ಯಕ್ಷರು ಧನ್ಯ ಭಟ್ಟ ಮತ್ತು ಲಯನ್ಸ್ ಕ್ಲಬ್‌ನ ನಿಕಟ ಪೂರ್ವ ಅಧ್ಯಕ್ಷರಾದ ಲಯನ್ ಎಸ್.ಆರ್.ಹೆಗಡೆ ಹಿತ್ತಲ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಲಯನ್ ಸರಿತಾ ಮೇಸ್ತ ಮತ್ತು ಪ್ರಾರ್ಥಿಸಿದರು. ಲಯನ್ ಶಾಮತಾರಾಮ ನಾಯ್ಕರವರು ದ್ವಜ ವಂದನೆ ಮಾಡಿದರು ಲಯನ್ ಎಸ್. ಟಿ. ನಾಯ್ಕ ವಂದಿಸಿದರು. ಲಯನ್ ಉದಯ ನಾಯ್ಕ ಹಾಗೂ ಲಯನ್ ಸವಿತಾ ಶಿವಪ್ರಸಾದ ಕಾರ್ಯಕ್ರಮ ನಿರೂಪಿಸಿದರು.

error: