April 23, 2024

Bhavana Tv

Its Your Channel

ಹೊನ್ನಾವರದಲ್ಲಿ ಸಾರ್ವಜನಿಕರು ಸದಾ ಎಚ್ಚರದಿಂದಿರಬೇಕಾಗಿದೆ ಎಂದು ಅಧಿಕಾರಿಗಳಿಂದ ಸೂಚನೆ

ಹೊನ್ನಾವರ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮಂಗಳವಾರ ಒಟ್ಟು ೨೧ ಸೊಂಕಿತರು ಗುರುತಿಸಲ್ಟಟ್ಟಿದ್ದು ಸಕ್ರೀಯ ಸೊಂಕಿತರ ಸಂಖ್ಯೆ ೨೬೩ಕ್ಕೆ ಎರಿದೆ. ತಾಲ್ಲೂಕ ಆಸ್ಪತ್ರೆಯಲ್ಲಿ ೨೩ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದು ೭ ಮಂದಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಮಂಗಳವಾರ ೮ಮಂದಿ ಸೊಂಕಿತರು ಹೊನ್ನಾವರ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದು ಮನೆಯಲ್ಲಿಯೇ ಹೋಮ ಆಯ್ಸೋಲೇಶಗೊಳಗಾದವರು ೧೦ ಮಂದಿ ಯಾವದೇ ಲಕ್ಷಣಗಳಿಲ್ಲದೇ ಮನೆಯಲ್ಲಿಯೇ ಚೇತರಿಸಿಕೊಂಡಿದ್ದಾರೆ.

     ಪ್ರತಿನಿತ್ಯವು ಹೊನ್ನಾವರ ಪಟ್ಟಣದಲ್ಲಿ ಬೆಳಿಗ್ಗೆ ೬ ಗಂಟೆಯಿAದ ೧೨ ಗಂಟೆಯವರೆಗೆ   ದಿನಸಿ  ಸಾಮಗ್ರಿಗಳನ್ನು ಮಾರಾಟ ಮಾಡಲು ಕಿರಾಣಿ ವ್ಯಾಪಾರಿಗಳಿಗೆ  ಅವಕಾಶ ಮಾಡಿಕೊಡಲಾಗಿದ್ದು  ಬುಧವಾರ ಖಡ್ಡಾಯವಾಗಿ  ತರಕಾರಿ ಹಾಗೂ ಹಣ್ಣುಗಳನ್ನು  ಮನೆ ಮನೆಗೆ ತೆರಳಿ  ಮಾರಾಟ ಮಾಡಲು  ಅಧಿಕಾರಿಗಳು ಎಚ್ಚರಿಸಿದ್ದಾರೆ.  ಒಂದೊಮ್ಮೆ ತರಕಾರಿಗಳನ್ನು ಅಂಗಡಿಯಲ್ಲಿ ಮಾರಾಟ ಮಾಡಿದರೆ  ಅಂತವರ ವಿರುದ್ದ ದೂರು ದಾಖಲಿಸುವುದಾಗಿ ಪೋಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ  ೬ಗಂಟೆಯಿAದ ೧ಂಟೆಯವರೆ ಮೀನು ಮಾರಾಟ ಮಾಡಲು  ಅವಕಾಶ ನೀಡಿದ್ದು ಜನರು ಮೀನು ಖರೀದಿಮಾಡಲು ಗುಂಪು ಗುಂಪಾಗಿ ಸೇರಿದ್ದರೆ  ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರರವರು ತಿಳಿಸಿದ್ದಾರೆ.

   ಗ್ರಾಮೀಣ ಭಾಗದಲ್ಲಿ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಗರ ಪ್ರದೇಶದಿಂದ ಊರಿಗೆ ಮರಳಿದವರಿಂದಲೇ ರೋಗ ಹರಡುತ್ತಿದೆ  ಎಂದು ಹಲವರ ಆತಂಕವಾಗಿದೆ. ಕೆಲವೊಂದು ಕಡೆಗಳಲ್ಲಿ ಜನರು ೧೨ ಗಂಟೆಯವರೆಗೂ ಬೇಕಾಬಿಟ್ಟಿಯಾಗಿ  ಒಡಾಡುತ್ತಿದ್ದು ಪೋಲಿಸ ಆಧಿಕಾರಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. 

  ತಾಲ್ಲೂಕಿನ  ಮಂಕಿ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ  ಅಂಗಡಿ ಮಾಲೀಕರ ವಿರುದ್ದ ಎರಡು ಕೇಸುಗಳು ದಾಖಲಾಗಿದೆ ಎಂದು ಮಂಕಿ ಪೋಲೀಸ್ ಠಾಣೆಯ ಪಿ ಎಸ್ ಐ  ಕಣ್ಣನ್ನೂರವರು ತಿಳಿಸಿದ್ದಾರೆ. ಮಂಕಿಯ ನವಾಯತ ಕೇರಿಯ ಕಿರಾಣಿ ವ್ಯಾಪಾರಿ  ನಸರುಲ್ಲಾ  ಅಹಮ್ಮದ್ ಪಕರ್ಧಿ ಹಾಗೂ ಮಂಕಿ ಸುಪರ ಬಜಾರಿನ  ಹಾರ್ಡವೇರ ಆಂಗಡಿಯ ಮಾಲೀರಾದ  ಲಿಯಾಂವ್ ಲೂಯಿಸ್ ಗೊನ್ಸಾಲ್ವೀಸರವರ ಮೇಲೆ ದೂರು ದಾಖಲಾಗಿದೆ.


  ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ  ೫೦ ಕರೋನಾ ಸೋಂಕಿತರಿಗೆ ಮಾತ್ರ ಆಕ್ಸಿಜನ್   ಸಮೇತ ಚಿಕಿತ್ಸೆ ನೀಡಬಹುದಾಗಿದೆ. ಹೊನ್ನಾವರದ ಪ್ರಭಾತನಗರದ  ಎರಡು ವಿದ್ಯಾರ್ಥಿ ನಿಲಯಗಳಲ್ಲಿ  ಹಾಗೂ ಮಂಕಿಯಲ್ಲಿ  ಕರೋನಾ ವಾರ್ಡ ನಿರ್ಮಿಸಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಕರೋನಾ ಎರಡನೇ ಅಲೆಯಿಂದ  ಬಚಾವಾಗಬೇಕೆಂದರೆ ಮನೆಯಿಂದ ಹೊರಬೀಳದಿರುವುದೊಂದೆ ಉತ್ತಮ ಮಾರ್ಗ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಸದಾ ಎಚ್ಚರದಿಂದಿರಬೇಕಾಗಿದೆ.
ವರದಿ ವೆಂಕಟೇಸ ಮೇಸ್ತ ಹೊನ್ನಾವರ
error: