June 22, 2021

Bhavana Tv

Its Your Channel

“ಕೊರೋನಾ ಕಷ್ಟದಲ್ಲಿರುವ ಜನರೊಂದಿಗೆ ನಾನಿದ್ದೇನೆ: ಶಾಸಕ ಸುನೀಲ ನಾಯ್ಕ

ಭಟ್ಕಳ : “ಕೊರೊನಾ ಎಂಬ ಹೆಮ್ಮಾರಿ ಎಲ್ಲರನ್ನೂ ಬಿಡದೇ ಕಾಡುತ್ತಿದ್ದು, ಕೊರೊನಾ ವೈರಸ್‌ನಿಂದಾಗಿ ಯಾವುದೇ ಸಂಕಷ್ಟದಲ್ಲಿರುವ ಕ್ಷೇತ್ರದ ಜನರೊಂದಿಗೆ ಯಾವ ಸಮಯದಲ್ಲಿ ನಾನಿದ್ದೇನೆ’ ಎಂದು ಶಾಸಕ ಸುನೀಲ ನಾಯ್ಕ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಕೊರೊನಾ ಒ೦ದನೇ ಅಲೆಯನ್ನು ಹಿಮ್ಮೆಟ್ಟಿಸಿದಂತೆ, ಸ್ವಲ್ಪ ಪ್ರಭಾವ ಹೆಚ್ಚಾಗೇ ಇರುವ 2ನೇ ಆಲೆಯನ್ನು ಎಲ್ಲರೂ ಸೇರಿ ತಡೆಯಬೇಕಾಗಿದೆ. ಕೊರೊನಾ ಹರಡದಂತೆ ಸರ್ಕಾರ ಜಾರಿ ಮಾಡಿರುವ ಕರ್ಫ್ಯೂನಿಂದಾಗಿ ಆಟೋ ಚಾಲಕರು, ಕೂಲಿ ಕಾರ್ಮಿಕರು ಸೇರಿದಂತೆ ದಿನನಿತ್ಯ ದುಡಿದು ಜೀವನ ಸಾಗಿಸುವ ವರ್ಗಗಳು ಸಂಕಷ್ಟಕ್ಕೀಡಾಗಿರುವು ದನ್ನು ಮನಗಂಡಿದ್ದೇನೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿನ ಬಡಜನರು ಕೊರೊನಾದಿಂದ ಉಂಟಾಗಿರುವ ಸಂಕಷ್ಟಕ್ಕೆ ಹೆದರುವ ಅಗತ್ಯವಿಲ್ಲ, ಬಡ ವರ್ಗಗಳಿಗೆ ಸರ್ಕಾರದಿಂದ ದೊರಕುವ ಪ್ಯಾಕೇಜನ್ನು ಒದಗಿಸಿಕೊಡುವುದರ ಜೊತೆಗೆ, ನನ್ನಿಂದ ಆಗುವ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲಿದ್ದೇನೆ’ ಎಂದರು.


‘ಅಲ್ಲದೇ ಕೊರೊನಾ ಚಿಕಿತ್ಸೆಗಾಗಿ ಭಟ್ಕಳ ಕ್ಷೇತ್ರದಲ್ಲಿ ಬೆಡ್, ಆಕ್ಸಿಜನ್ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ ಕೊರೊನಾಕ್ಕೆ ಯಾರೂ ಹೆದರುವ ಅಗತ್ಯವಿಲ್ಲ.ಸರ್ಕಾರದ ಮಾರ್ಗಸೂಚಿಯನ್ನು ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸಬೇಕು. ಕ್ಷೇತ್ರದ ಶಾಸಕನಾದ ನನ್ನಿಂದ ಏನೇ ಸಹಾಯ, ಸಹಕಾರ ಬೇಕಾದಲ್ಲಿ ಯಾವುದೇ ಸಮಯದಲ್ಲಿ ನನ್ನನ್ನು ಸಂಪರ್ಕಿಸಬಹುದು’ಶಾಸಕರು ತಿಳಿಸಿದ್ದಾರೆ.

error: