May 3, 2024

Bhavana Tv

Its Your Channel

ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ಮಾಹಿತಿ ಕೇಂದ್ರಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ

ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ ದಂಪತಿಗಳ ಸಹಾಯಹಸ್ತದಿಂದ ನಿರ್ಮಾಣವಾದ ಕೋವಿಡ್ ಮಾಹಿತಿ ಕೇಂದ್ರವನ್ನು ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.

ನಂತರ ಮಾತನಾಡಿ ಸುಬ್ರಮಣ್ಯ ಶಾಸ್ತಿç ದಂಪತಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಒಂದು ಉತ್ತಮ ಸಮಾಜಮುಖಿ ಕಾರ್ಯವನ್ನು ಮಾಡಿದ್ದು ಜಿಲ್ಲೆಯ ಬೇರೆ ಆಸ್ಪತ್ರೆಯಲ್ಲಿಯೂ ಅಲ್ಲಿಯ ಕುಂದುಕೊರತೆ ಆಲಿಸಿ ದಾನಿಗಳು ಸಮಸ್ಯೆ ಬಗೆಹರಿಸಿದರೆ ಸಾರ್ವಜನಿಕರಿಗೆ ಇನ್ನು ಹೆಚ್ಚಿನ ಅನೂಕೂಲವಾಗಲಿದೆ. ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಉತ್ತಮ ರೀತಿಯಲ್ಲಿ ನೀಡಲಾಗುತ್ತಿದೆ ಎಂದು ತಿಳಿದಿದ್ದೇನೆ, ವೈದ್ಯರು, ವೈದ್ಯಕೀಯತೆರ ಸಿಬ್ಬಂದಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಎಂದು ಕ್ಷೇತ್ರದ ಸಾರ್ವಜನಿಕರ ಪರವಾಗಿ ಅಭಿನಂದಿಸಿದರು.

ಶ್ರೀಕಲಾ ಶಾಸ್ರಿö್ತÃ ಮಾತನಾಡಿ ಜಾಗತಿಕ ಮಟ್ಟದಲ್ಲಿ ಆರೋಗ್ಯ ಸಮಸೈ ಇದ್ದು ನಮ್ಮ ದೇಶ ಆರೋಗ್ಯದ ಸಮಸೈಯಲ್ಲಿ ತತ್ತಾರಿಸಿ ಹೋಗುತ್ತಾ ಇದೆ. ಕರೋನಾ ೨ ಅಲೆ ಭೀಕರವಾಗಿದೆ.ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ಕರೋನಾ ರೋಗಿಗಳು ಬಂದಾಗ ಅವರು ಎಲ್ಲಿ ಹೋಗಬೇಕೆಂದು ಗೊತ್ತಾಗದೆ ಓಡಾಡುತ್ತಾರೆ ಇದರಿಂದ ಅರೋಗ್ಯವಂತರಿಗೂ ಸೊಂಕು ತಗಲುವಂತಹ ಅಪಾಯವಿರುತ್ತದೆ. ಇದರಿಂದ ತಾಲೂಕಾಸ್ಪತ್ರೆಯಲ್ಲಿ ಕರೋನಾ ಸೋಕಿತರಿಗಾಗಿ ಮಾಹಿತಿ ಕೇಂದ್ರ ಸ್ಥಾಪನೆ ಮಾಡಿದ್ದು ಅದನ್ನು ನಮ್ಮ ಸ್ವಂತ ಖಚಿನಿಂದ ಮಾಡಿಕೊಟ್ಟಿರುತ್ತೇವೆ. ಅಪಾಯ ಇದ್ದವರಿಗೆ ತರ್ತಾಗಿ ಆಕ್ಸಿಜನ್ ಬೇಕಾದರೆ ಅಂತವರಿಗೆ ಕೋವಿಡ್ ಮಾಹಿತಿ ಕೇಂದ್ರದಲ್ಲಿ ಆಕ್ಸಿಜನ್ ವ್ಯವಸ್ಥೆವಿರುತ್ತದೆ ಅತ್ಯಂತ ಉತ್ತಮ ಸೇವೆಯನ್ನು ಹೊನ್ನಾವರ ತಾಲಾಕಾ ಆಸ್ಪತ್ರೆ ನೀಡುತ್ತಾ ಇದ್ದು ಸೋಂಕಿತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಇವತ್ತಿನಿಂದ ೧೪ ದಿನಗಳ ಕಾಲ ಲಾಕ್ ಡಾನ್ ಇದ್ದು ಎಲ್ಲರೂ ಮನೆಯಲ್ಲಿ ಇದ್ದು ತಮ್ಮ ಆರೋಗ್ಯ ಮತ್ತು ಮನೆಯವರ ಆರೋಗ್ಯವನ್ನು ಕಾಪಾಡೋಣಾ ಅನಗತ್ಯ ಓಡಾಟ ಮಾಡಿ ಸರ್ಕಾರದ ಲಾಕ್ ಡೌನ್ ಉದ್ದೇಶವನ್ನು ನಾವು ಹಾಳು ಮಾಡುವುದು ಬೇಡ ಎಂದರು. ಆರೊಗ್ಯಧಿಕಾರಿ ಡಾ. ರಾಜೇಶ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಸ್ತಿç ದಂಪತಿಗಳಿಗೆ ಧನ್ಯವಾದ ಅರ್ಪಿಸಿ ತಾಲೂಕಾಸ್ಪತ್ರೆಯಲ್ಲಿ ಇನ್ನು ಆಗಬೇಕಾದ ಕೆಲವು ತುರ್ತು ಕೆಲಸಗಳ ಬಗ್ಗೆ ಶಾಸಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸುಬ್ರಮಣ್ಯ ಶಾಸ್ತ್ರಿ, ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ಭಂಡಾರಿ, ಆರೊಗ್ಯಧಿಕಾರಿ ಡಾ. ರಾಜೇಶ ಕಿಣಿ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.

error: