May 12, 2024

Bhavana Tv

Its Your Channel

ಲಾಕಡೌನ್ ಎರಡನೇ ದಿನವಾದ ಮಂಗಳವಾರ ಠುಸ್ ಪಟಾಕಿ

ಭಟ್ಕಳ : ತಾಲ್ಲೂಕಿನಲ್ಲಿ ಪ್ರಥಮ ದಿನದಲ್ಲಿ ಯಶಸ್ಸು ಕಂಡಿದ್ದ ಬಿಗಿ ಲಾಕಡೌನ್ ಎರಡನೇ ದಿನವಾದ ಮಂಗಳವಾರ ಠುಸ್ ಪಟಾಕಿಯಾಗಿತ್ತು. ವಾಹನಗಳು ಎಂದಿನAತೆ ರಸ್ತೆಯಲ್ಲಿ ಓಡಾಡುತ್ತಿದ್ದವು. ಅಗತ್ಯ ವಸ್ತುಗಳ ಖರೀದಿಯ ಅಂಗಡಿಗಳ ಮುಂದೆ ಜನಸಂಚಾರ ಕಂಡುಬAದವು. ಬೈಕುಗಳು ರೋಡಿಗಿಳಿಯುತ್ತಿದ್ದಂತಯೇ ಆಟೋ ರಿಕ್ಷಾಗಳು ಸಂಚಾರ ಆರಂಭಿಸಿತು. ಸರ್ಕಾರದ ದಿನಕ್ಕೊಂದು ಮಾರ್ಗಸೂಚಿಯಿಂದ ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದಾರೆ. ಭಟ್ಕಳದಲ್ಲಿ ಸೋಮವಾರದ ಲಾಕಡೌನ್ ನೋಡಿ ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದರು. ಎಲ್ಲಾ ಕಡೆ ಬ್ಯಾರಿಕೇಡ್ ಹಾಕಿರುವ ಕಾರಣ ಅವಶ್ಯಕತೆ ಉಳ್ಳವರು ಮಾತ್ರ ಮಾರುಕಟ್ಟೆಗೆ ಬಂದು ಖರೀದಿ ಮಾಡಿ ಹೋಗುತ್ತಿದ್ದರು. ಇದರಿಂದ ತಾಲ್ಲೂಕಿನಲ್ಲಿ ಕರೋನಾ ನಿಯಂತ್ರಣಕ್ಕೆ ಬರಲಿದೆ ಎಂದು ನಂಬಿದ್ದರು. ಆದರೆ ಮಂಗಳವಾರ ಪುನಃ ವಾಹನ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟರು. ಇದರಿಂದ ಮಾರುಕಟ್ಟೆಯಲ್ಲಿ ವಾಹನ ಸಂಚಾರ, ಜನಜಂಗುಳಿ ತುಂಬಿತ್ತು.

error: