April 28, 2024

Bhavana Tv

Its Your Channel

ಅವೈಜ್ಞಾನಿಕ ಗಟಾರ, ಪುರಸಭಾ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಹಾರಿಕೆ ಉತ್ತರ, ಸ್ಥಳೀಯರಿಂದ ಆಕ್ರೋಶ

ಕುಮಟಾ: ಪಟ್ಟಣದ ಹೆರವಟ್ಟಾದ ಸಾಣಿಯಮ್ಮ ದೇವಸ್ಥಾನದ ಸಮೀಪದ ಅವೈಜ್ಞಾನಿಕ ಗಟಾರ ನಿರ್ಮಿಸಿದ್ದರಿಂದ ಮಳೆ ನೀರು ಕೆಲ ಮನೆಯೊಳಗಡೆ ನುಗ್ಗಿ ಅಪಾರ ಹಾನಿಯುಂಟು ಮಾಡಿದ್ದು, ಈ ಬಗ್ಗೆ ಪುರಸಭಾ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಹೆರವಟ್ಟಾದ ಸಾಣಿಯಮ್ಮ ದೇವಸ್ಥಾನದ ಕೆಳಭಾಗದ ಗದ್ದೆಗಳಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಲ್ಲದೇ, ನೀರು ಹರಿಯುವಿಕೆಯ ಕಾಲುವೆಯನ್ನು ಅತಿಕ್ರಮಿಸಿ, ಮುಚ್ಚಿ ಹಾಕಿರುವ ಪರಿಣಾಮ ಮಳೆ ನೀರು ಗಟಾರದಲ್ಲಿ ಸರಾಗವಾಗಿ ಹರಿಯದೇ ಸಾಣಿಯಮ್ಮ ದೇವಸ್ಥಾನಕ್ಕೆ ಹಾಗೂ ಅಲ್ಲಿನ ಸುತ್ತಮುತ್ತಲಿನ ಬಡ ಕುಟುಂಬಗಳ ಮನೆಗಳಿಗೆ ಬುಧವಾರ ರಾತ್ರಿ ಸುರಿದ ಮಳೆಯ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಈ ಬಗ್ಗೆ ಪುರಸಭೆಗೆ ಮಾಹಿತಿ ನೀಡಿದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಆಗಮಿಸಿಲ್ಲ. ಸಾರ್ವಜನಿಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಸಹ ಅಧಿಕಾರಿಗಳು ನೀಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

ದೇವಸ್ಥಾನದ ಎದುರಿನ ರಸ್ತೆಗೆ ಸಿಮೆಂಟ್ ಗಟಾರ ನಿರ್ಮಿಸಲು ರಸ್ತೆ ಅಗೆದು ಕಾಮಗಾರಿ ಆರಂಭಿಸಿ ಹಲವು ದಿನಗಳು ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಅಪಾಯದ ಸೂಚನಾ ಫಲಕವನ್ನೂ ಅಳವಡಿಸಿಲ್ಲ. ರಾತ್ರಿ ಸಮಯದಲ್ಲಿ ಬೈಕ್ ಸವಾರರಿಗೆ ಹಾಗೂ ಪಾದಚಾರಿಗಳಿಗೆ ರಸ್ತೆ ಅಗೆದಿರುವುದು ಗೋಚರಿಸುವುದಿಲ್ಲ. ಇದರಿಂದ ಅಪಾಯ ಉಂಟಾಗುವ ಸಾಧ್ಯತೆ ಅಧಿಕವಾಗಿದ್ದು, ಸರಿಯಾಗಿ ಗೋಚರಿಸುವ ಸೂಚನಾ ಫಲಕವನ್ನು ಅಳವಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮೌನ ವಹಿಸಿದ ವಾರ್ಡ್ ಸದಸ್ಯರು:
ಈ ಪ್ರದೇಶ ಪುರಸಭಾ ಸದಸ್ಯರಾದ ಸುಶೀಲಾ ನಾಯ್ಕ ಹಾಗೂ ಪಲ್ಲವಿ ಮಡಿವಾಳ ವ್ಯಾಪ್ತಿಗೆ ಬರುತ್ತದೆ. ಪ್ರತಿವರ್ಷ ಮಳೆ ನೀರು ನುಗ್ಗಿ ಹಾನಿಯಾಗುತ್ತಿದೆ ಎಂಬುದು ಇಬ್ಬರಿಗೂ ತಿಳಿದಿದೆ. ನಮ್ಮ ಸಮಸ್ಯೆಗೆ ಪರಿಹಾರ ನೀಡುವಂತೆ ಸದಸ್ಯರಿಬ್ಬರಿಗೂ ವಿನಂತಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ತಮಗೆ ಇಷ್ಟಬಂದAತೆ ನಡೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವಾರ್ಡ್ ಸದಸ್ಯರ ವಿರುದ್ಧ ಸ್ಥಳೀಯರು ಸಿಟ್ಟಿಗೆದಿದ್ದಾರೆ.
ಈ ಕುರಿತು ಸ್ಥಳೀಯ ನಿವಾಸಿ ದೇವಿ ಗೌಡ ಮಾತನಾಡಿ, ಕಳೆದ ೪ ವರ್ಷಗಳಿಂದ ಮನೆಗಳಿಗೆ ಮಳೆ ನೀರು ನುಗ್ಗುತ್ತಿದೆ. ವ್ಯವಸ್ಥೆ ಸರಿಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ವಿನಂತಿಸಿಕೊAಡರೆ ಬಾಯಿಗೆ ಬಂದAತೆ ಮಾತನಾಡುತ್ತಾರೆ. ೪೫ ವರ್ಷದಿಂದಲೂ ಸರಿಯಾಗಿ ನೀರು ಸರಾಗವಾಗಿ ಹರಿಯುತ್ತಿತ್ತು. ೪ ವರ್ಷದಿಂದ ದೇವಸ್ಥಾನಕ್ಕೆ ಹಾಗೂ ಸುತ್ತಮುತ್ತಲಿನ ಮನೆಗಳಿಗೆ ನೀರು ತುಂಬುತ್ತಿದೆ. ವ್ಯವಸ್ಥೆ ಸರಿಪಡಿಸಿದ್ದರೆ ಸಹಾಯಕ ಆಯುಕ್ತರ ಕಚೇರಿ ಹಾಗೂ ಪುರಸಭೆಯ ಎದುರು ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ವರದಿ ; ನಟರಾಜ ಗದ್ದೆಮನೆ, ಕುಮಟಾ

error: