April 28, 2024

Bhavana Tv

Its Your Channel

ಬೆಳ್ಳಂಬೆಳಿಗ್ಗೆ ಫೀಲ್ಡಿಗಿಳಿದ ಕುಮಟಾ ಪೊಲೀಸರು ಅನಗತ್ಯವಾಗಿ ಪಟ್ಟಣದಲ್ಲಿ ಸಂಚಾರ ಮಾಡುತ್ತಿದ್ದ ೨೯ ಬೈಕ್ ಸಿಜ್.

ಕುಮಟಾ: ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿದ್ದು, ಬೆಳ್ಳಂಬೆಳಿಗ್ಗೆ ಫೀಲ್ಡಿಗಿಳಿದ ಕುಮಟಾ ಪೊಲೀಸರು ಅನಗತ್ಯವಾಗಿ ಪಟ್ಟಣದಲ್ಲಿ ಸಂಚಾರ ಮಾಡುತ್ತಿದ್ದ
೨೯ ಬೈಕ್ ಸಿಜ್ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ,

ರಾಜ್ಯದಲ್ಲಿ ಕೊರೊನಾ ಎರಡನೆಯ ಅಲೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸಲು ಸರ್ಕಾರ ಕೆಲದಿನಗಳ ಕಾಲ ಕಟ್ಟುನಿಟ್ಟಿನ ಲಾಕ್‌ಡೌನ್ ಘೋಷಣೆ ಮಾಡಿದೆ. ಆದರೂ ಕುಮಟಾ ಪಟ್ಟಣದಲ್ಲಿ ಕೊರೊನಾ ಭಯವಿಲ್ಲದೆ ಲಾಕ್‌ಡೌನ್ ಸಮಯದಲ್ಲೂ ಕೆಲವರು ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸದೇ ರಸ್ತೆಗಿಳಿದಿದ್ದಾರೆ. ಅನಗತ್ಯ ಸಂಚಾರಕ್ಕೆ ತಡೆಯೊಡ್ಡಲು ಬೆಳಿಗ್ಗೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಕುಮಟಾ ಪಟ್ಟಣದ ರಾಷ್ಟಿçÃಯ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಿದ ಪಿ.ಎಸ್.ಐ ರವಿ ಗುಡ್ಡಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಅನಗತ್ಯ ಸಂಚಾರ ಮಾಡುತ್ತಿರುವ ಸುಮಾರು ೨೯ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆಲವರು ಜೌಷಧಿ ಚೀಟಿ ಮತ್ತಿತರರ ಕಾರಣಗಳನ್ನು ಹೇಳಿ ಸಂಚಾರ ಮಾಡಲು ಪ್ರಯತ್ನಿಸಿದರು. ಅವರನ್ನು ವಿಚಾರಣೆ ನಡೆಸಿ, ಅನಗತ್ಯವಾಗಿ ಓಡಾಟ ಮಾಡುತ್ತಿರುವ ಸವಾರರಿಗೆ ದಂಡ ವಿಧಿಸಿ, ಮುಂದಿನ ದಿನಗಳಲ್ಲಿ ವಾಹನಗಳನ್ನು ಜಫ್ತು ಮಾಡುವ ಎಚ್ಚರಿಕೆ ನೀಡಿದ್ದಾರೆ.
ಹೊರಭಾಗದಿಂದ ಕಾರಿನ ಮೂಲಕ ಆಗಮಿಸಿದ್ದು, ಅವರನ್ನು ತಡೆದು ವಿಚಾರಿಸಿ, ಕೆಲ ಸಮಯ ಅವರ ವಿಳಾಸ ಸೇರಿದಂತೆ ಮತ್ತಿತರರ ವಿಷಯದ ಕುರಿತು ಮಾಹಿತಿ ಪಡೆದು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕು. ಮತ್ತೊಬ್ಬರಿಗೆ ರೋಗ ಹರಡಬಾರದು ಎಂದು ಬುದ್ಧಿಮಾತು ಹೇಳಿದರಲ್ಲದೇ, ಕೊರೊನಾದ ಕುರಿತು ಭಯ ಬೇಡ, ಪ್ರತಿಯೊಬ್ಬರೂ ಕೊರೊನಾದ ಕುರಿತು ಜಾಗೃತಿ ವಹಿಸಬೇಕು ಎಂದು ಸಾರ್ವಜನಿಕರಿಗೆ ಪಿ.ಎಸ್.ಐ ರವಿ ಗುಡ್ಡಿ ಹಾಗೂ ಎ.ಎಸ್.ಐ ನಾಗರಾಜ ಜಾಗೃತಿ ಮೂಡಿಸಿ ಕಳುಹಿಸಿದ್ದಾರೆ.
ವರದಿ ; ನಟರಾಜ ಗದ್ದೆಮನೆ. ಕುಮಟಾ

error: