May 11, 2024

Bhavana Tv

Its Your Channel

ಕೊರೊನಾ ನಿಯಂತ್ರಿಸಲು ಜೂ.7 ರವರೆಗೆ ತಾಲೂಕಿನಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿ-ನ್ಯಾಯವಾದಿ ಆರ್.ಜಿ.ನಾಯ್ಕ

ಕುಮಟಾ: ಕೊರೊನಾ ನಿಯಂತ್ರಿಸಲು ಜೂ.7 ರವರೆಗೆ ತಾಲೂಕಿನಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಮುಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ಆರ್.ಜಿ.ನಾಯ್ಕ ಆಗ್ರಹಿಸಿದ್ದಾರೆ.

 ಅವರು ಗುರುವಾರ ಪಟ್ಟಣದ ಖಾಸಗಿ ಹೊಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಮ್ಮ ಜಿಲ್ಲೆ ಹಾಗೂ ತಾಲೂಕಿನಲ್ಲಿ ಕೊವಿಡ್-19 ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಒಂದು ವಾರಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡುವುದರಿಂದ ಜೈನ್ ಬ್ರೇಕ್ ಮಾಡಲು ಸಾಧ್ಯ. ಕಳೆದ ವರ್ಷ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ ಕೊರೊನಾ ನಿಯಂತ್ರಿಸಲು ಸಹಕಾರಿಯಾಗಿತ್ತು. ಹಿಂದಿನ ವರ್ಷ ಶ್ರಮಿಕರಿಗೆ, ವ್ಯಾಪಾರಸ್ಥರಿಗೆ, ಹೊಟೆಲ್ ಉದ್ಯಮಗಳಿಗೆ ತೊಂದರೆಯಾಗದAತೆ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಈ ವರ್ಷ ಸರ್ಕಾರದ ತಪ್ಪು ನಿರ್ಧಾರದಿಂದ ಮಂಗಳವಾರ ಮತ್ತು ಶುಕ್ರವಾರ ವಾರದ 2 ದಿನಗಳ ಕಾಲ ಬೆಳಿಗ್ಗೆ 6 ರಿಂದ 10 ಘಂಟೆಯವರೆಗೆ ಅಂಗಡಿಗಳ ಬಾಗಿಲು ತೆರೆಯಲು ಅವಕಾಶ ನೀಡಿದ್ದರಿಂದ ಪಟ್ಟಣ ಪ್ರದೇಶಗಳಲ್ಲಿ ಜನಜಂಗುಳಿ ಉಂಟಾಗಿ, ಕೊರೊನಾ ಹರಡಲು ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ನಿರ್ಧಾರ ಕೈಗೊಳ್ಳಲು ಎಡವಿದ್ದರಿಂದ ಕೊರೊನಾ ಹೆಚ್ಚಾಗಲು ಕಾರಣವಾಗಿದೆ. ಈ ಬಗ್ಗೆ ಅಧಿಕಾರಿಗಳು ಪುನರ್ ಪರಿಶೀಲನೆ ಕೈಗೊಳ್ಳುವುದರ ಮೂಲಕ ಒಂದು ವಾರಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಬೇಕು. ಜನಸಾಮಾನ್ಯರು ಸಹಕರಿಸುತ್ತಾರೆ ಎಂದರು.
ಗ್ರಾಮೀಣ ಭಾಗದಿಂದ ಜನರು ಪಟ್ಟಣಗಳಿಗೆ ಅಗತ್ಯ ವಸ್ತುಗಳ ಖರೀದಿಗೆ ಆಗಮಿಸಲು ಅವಕಾಶ ನೀಡದೇ, ಗ್ರಾಮೀಣ ಭಾಗಗಳಲ್ಲಿ ಕಿರಾಣಿ, ತರಕಾರಿ, ಮೀನು, ಮಾಂಸ ಸೇರಿದಂತೆ ವೈದ್ಯಕೀಯ ಸೇವೆ ನೀಡಲು ಕ್ರಮ ಕೈಗೊಳ್ಳಬೇಕು. ಇದರಿಂದ ಗ್ರಾಮೀಣ ಭಾಗಗಳಲ್ಲಿ ಸೋಂಕು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಪಟ್ಟಣ ಪ್ರದೇಶಗಳ ಪ್ರತಿ ವಾರ್ಡಿಗೂ ಮನೆ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಸಲು ಪುರಸಭೆ ಕ್ರಮ ಕೈಗೊಂಡರೆ ಕೊರೊನಾ ನಿಯಂತ್ರಿಸಲು ಸಾಧ್ಯ ಎಂದ ಅವರು, 2020 ನೆಯ ಸಾಲಿನಲ್ಲಿ ಅಧಿಕಾರಿಗಳ ದಿಟ್ಟಕ್ರಮದಿಂದ ಸೋಂಕು ನಿಯಂತ್ರಿಸಲು ಸಹಕಾರಿಯಾಗಿತ್ತು. ಈ ವರ್ಷವೂ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವುದರ ಮೂಲಕ ಸೋಂಕು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 1,200 ಕೋಟಿ ಪ್ಯಾಕೇಜ್ ಘೋಷಣೆ ಮಾಡಿರುವುದು ಇದುವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ನಮಗೆ ಹಣದ ಲೆಕ್ಕ ಬೇಡ, ವ್ಯವಸ್ಥೆ ಸರಿಪಡಿಸಲು ಆಡಳಿತ ವ್ಯವಸ್ಥೆ ಕಾರ್ಯಪ್ರವೃತ್ತರಾಗಬೇಕು ಎಂದರು
ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಜಿಲ್ಲೆಯಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಅಧಿವಾಗುತ್ತಿದೆ. ಇದರಿಂದ ಹಳ್ಳಿಗಳಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು, ಗ್ರಾಮೀಣ ಭಾಗಗಳ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಸೂಕ್ತ ಕ್ರಮ ಕೈಗೊಂಡು, ಸಂಪೂರ್ಣ ಲಾಕ್‌ಡೌನ್ ಘೋಷಿಸಬೇಕು ಎಂದು ಆಗ್ರಹಿಸಿದ ಅವರು, ಸೋಂಕಿತ ಮನೆಗೆ ದಿನಸಿ ವಸ್ತುಗಳನ್ನು ತಾಲೂಕಾಡಳಿತ ಪೂರೈಸಬೇಕು. ಇಲ್ಲವಾದಲ್ಲಿ ಸೋಂಕಿತರ ಸಂಪರ್ಕ ಬಂದವರು ಹೊರಗಡೆ ತಿರುಗಾಡುತ್ತಾರೆ. ಇದರಿಂದ ಸೋಂಕು ಜಾಸ್ತಿಯಾಗಲು ಕಾರಣವಾಗುತ್ತದೆ ಎಂದರು. ಬೆಂಗಳೂರಿನಿAದ ಆಗಮಿಸುವವರನ್ನು ತಾಲೂಕಾಡಳಿತವೇ ಕ್ವಾರಂಟೈನ್‌ಗೆ ಒಳಪಡಿಸಬೇಕು. ಕೆಲವರು ಹೋಮ್ ಕ್ವಾರಂಟೈನ್ ಪಡೆದು ಕಂಡಕAಡಲ್ಲಿ ತಿರುಗಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಸೋಂಕು ಹೆಚ್ಚಾಗಲು ಕಾರಣವಾಗಿದೆ. ಈ ಕುರಿತು ಗಂಭೀರ ಚಿಂತನೆ ಮಾಡಬೇಕಿದೆ ಎಂದರು.

ವರದಿ ; ನಟರಾಜ ಗದ್ದೆಮನೆ, ಕುಮಟಾ

error: