July 26, 2021

Bhavana Tv

Its Your Channel

ಪಿಯುಸಿ ಫಲಿತಾಂಶ: ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ

ಟ್ಕಳ: ಕೋವಿಡ್-೧೯ ನಿಮಿತ್ತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯದೇ ಎಸ್.ಎಸ್.ಎಲ್.ಸಿ ಮತ್ತು ಪ್ರಥಮ ಪಿಯು ಅಂಕಗಳ ಆಧಾರದ ಮೇಲೆ ಪ್ರಕಟಿಸಲ್ಪಟ್ಟ ಫಲಿತಾಂಶದಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆಗೆ ಹಾಜರಾದ ೨೬೪ ವಿದ್ಯಾರ್ಥಿಗಳಲ್ಲಿ ೫೪ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರೆ, ೧೬೯ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಮೊನಿ಼ಷಾ ವೆಂಕಟೇಶ ನಾಯ್ಕ ೧೦೦% ನೊಂದಿಗೆ ಪ್ರಥಮ, ರಕ್ಷಾ ಪೈ ೯೯.೮೩% ನೊಂದಿಗೆ ದ್ವಿತೀಯಮತ್ತು ರಮ್ಯಾ ಪ್ರದೀಪ ಶೆಟ್ಟಿ ೯೮.೮೩% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಅಕ್ಷಯ ನಾಯಕ ಮತ್ತು ಮೇಘನಾ ಶೇಟ್ ೧೦೦% ನೊಂದಿಗೆ ಪ್ರಥಮ, ಎನ್. ಜೆ ದರ್ಶನ ೯೮.೮೩% ನೊಂದಿಗೆ ದ್ವಿತೀಯ ಮತ್ತು ಐಶ್ವರ್ಯ ಜನ್ನು ೯೬.೬೭% ನೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಕಲಾ ವಿಭಾಗದಲ್ಲಿ ಪೂರ್ಣಿಮಾ ಬಲೀಂದ್ರ ನಾಯ್ಕ ೯೪.೮% ನೊಂದಿಗೆ ಪ್ರಥಮ, ಲಾವಣ್ಯ ಮಾದೇವ ನಾಯ್ಕ ೯೨% ನೊಂದಿಗೆ ದ್ವಿತೀಯ ಮತ್ತು ಮಂಗಳಗೌರಿ ಭಟ್ ೮೯.೮೩% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಕನ್ನಡದಲ್ಲಿ ೨೪, ಇಂಗ್ಲೀಷನಲ್ಲಿ ೧೫, ಹಿಂದಿಯಲ್ಲಿ ೦೬, ಭೌತಶಾಸ್ತ್ರದಲ್ಲಿ ೦೩, ರಸಾಯನಶಾಸ್ತ್ರದಲ್ಲಿ ೦೩, ಗಣಿತದಲ್ಲಿ ೦೩, ಗಣಕವಿಜ್ಞಾನದಲ್ಲಿ ೦೨, ಅರ್ಥಶಾಸ್ತ್ರದಲ್ಲಿ ೦೨, ವ್ಯವಹಾರ ಅಧ್ಯಯನದಲ್ಲಿ ೦೧, ಲೆಕ್ಕಶಾಸ್ತ್ರದಲ್ಲಿ ೦೨ ಮತ್ತು ಸಂಖ್ಯಾಶಾಸ್ತ್ರದಲ್ಲಿ ೦೩ ಹೀಗೆ ಒಟ್ಟೂ ೬೪ ವಿದ್ಯಾರ್ಥಿಗಳು ೧೦೦/೧೦೦ ಅಂಕಗಳನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುರೇಶ ನಾಯಕ್, ಟ್ರಸ್ಟಿ ಮೆನೇಜರ್ ಶ್ರೀ ರಾಜೇಶ ನಾಯಕ್ ಹಾಗೂ ಪ್ರಾಂಶುಪಾಲರಾದ ವಿರೇಂದ್ರ ಶ್ಯಾನಭಾಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

error: