April 29, 2024

Bhavana Tv

Its Your Channel

ನೂರಾರು ವಿದ್ಯಾರ್ಥಿಗಳಿಂದ ಭಟ್ಕಳಕ್ಕೆ ತೆರಳುವ ಬಸ್ ತಡೆದು ಪ್ರತಿಭಟನೆ

ಭಟ್ಕಳ: ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರೂ ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ದ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಗುರುವಾರ ಭಟ್ಕಳಕ್ಕೆ ತೆರಳುವ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಭಟ್ಕಳ ತಾಲೂಕಿನ ಶಾಸಕರ ಮನೆಯ ಪಕ್ಕದ ಗ್ರಾಮವಾದ ಉಳ್ಮಣ್ ಬೇಂಗ್ರೆ, ಮಾವಿನಕಟ್ಟೆ ಪ್ರದೇಶದಿಂದ ಪ್ರತಿದಿನ ಬೆಳಿಗ್ಗೆ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಭಟ್ಕಳ ಕಾಲೇಜಿಗೆ ಬರುತ್ತಾರೆ. ಸ್ಥಳೀಯ ಪಂಚಾಯಿತಿ ಈ ಕುರಿತು ಠರಾವು ಮಾಡಿ ಬೆಳಗ್ಗಿನ ಸಮಯದಲ್ಲಿ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸುವಂತೆ ಡೀಪೊ ವ್ಯವಸ್ಥಾಪಕರಿಗೆ ಮನವಿಯನ್ನು ನೀಡಿತ್ತು. ವಿದ್ಯಾರ್ಥಿಗಳ ಸಮಸ್ಯೆಯ ಕುರಿತು ಶಾಸಕ ಸುನೀಲ ನಾಯ್ಕ ಅವರ ಗಮನಕ್ಕೆ ತಂದರೂ ಪ್ರಯೋಜನಾಗಿಲ್ಲ.

ಸಾರಿಗೆ ಸಂಸ್ಥೆ ಬೇಂಗ್ರೆಯೊAದರಲ್ಲೇ ೨೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪಾಸ್ ನೀಡಿದೆ. ಆದರೆ ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಆದರೆ ಇದ್ಯಾವುದಕ್ಕೂ ಅಧಿಕಾರಿಗಳು ಕ್ಯಾರೆ ಎನ್ನಲಿಲ್ಲ. ಪ್ರತಿದಿನ ವಿದ್ಯಾರ್ಥಿಗಳು ಹರಸಾಹಸ ಪಟ್ಟು ಕಾಲೇಜಗೆ ತೆರಳಬೇಕಿತ್ತು. ಇದರಿಂದ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಬೇಂಗ್ರೆಯಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಟೆಂಪೋ ವ್ಯವಸ್ಥೆ ಕಲ್ಪಿಸಿದ ಮಾಜಿ ಶಾಸಕ ಮಂಕಾಳ ವೈದ್ಯ:
ಮಾರ್ನಿಂಗ್ ವಾಕ್ ನಡೆಸಿ ಮನೆಗೆ ಮರಳುತ್ತಿದ್ದ ಮಾಜಿ ಶಾಸಕ ಮಂಕಾಳು ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ ನೋಡಿ ಸ್ಥಳಕ್ಕೆ ತೆರಳಿದ್ದಾರೆ. ವಿದ್ಯಾರ್ಥಿಗಳು ತಡೆದ ಬಸ್‌ನಲ್ಲಿ ನೂರಕ್ಕೂ ಅಧಿಕ ಪ್ರಯಾಣಿಕರಿದ್ದು ಬಸ್ ಬಿಡುವಂತೆ ಮನವಿ ಮಾಡಿದ್ದಾರೆ. ಅದರಲ್ಲಿ ಕಚೇರಿಗೆ, ಆಸ್ಪತ್ರೆಗೆ, ಶಾಲಾ ಕಾಲೇಜುಗಳಿಗೆ ತೆರಳುವವರು ಇರುತ್ತಾರೆ ಅವರಿಗೆ ತೊಂದರೆ ನೀಡಬೇಡಿ ಎಂದು ಮನವೊಲಿಸಿದ್ದಾರೆ. ನಿಮಗೆ ಕಾಲೇಜಿಗೆ ತೆರಳಲು ವಾಹನದ ವ್ಯವಸ್ಥೆಯನ್ನು ತಾನು ಕಲ್ಪಿಸುತ್ತೇನೆ ಎಂದು ಟೆಂಪೋವೊAದನ್ನು ಕರೆಯಿಸಿ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಕಳುಹಿಸಿದ್ದಾರೆ. ಅಲ್ಲದೆ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದು ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟಿದ್ದಾರೆ.

ಭಟ್ಕಳ ಬಸ್ ಡಿಪೋಗೆ ಮಾಜಿ ಶಾಸಕ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ ಘಟಕ ವ್ಯವಸ್ಥಾಪರೊಂದಿಗೆ ಚರ್ಚೆ ನಡೆಸಿದ್ದಾರೆ. ಒಂದು ವೇಳೆ ನಿಮಗೆ ಬಸ್ ನೀಡಲು ಆಗದೆ ಇದ್ದರೆ ತಿಳಿಸಿ, ತಾನು ತನ್ನ ಕ್ಷೇತ್ರದಲ್ಲಿ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಸಿದ್ದನಿದ್ದೇನೆ. ಯಾವೊಬ್ಬ ವಿದ್ಯಾರ್ಥಿಯೂ ಬಸ್ ಸಮಸ್ಯೆಯಿಂದ ತರಗತಿಯಿಂದ ಹೊರಗುಳಿಯಬಾರದು ಎಂದಿದ್ದಾರೆ. ನಂತರ ಘಟಕ ವ್ಯವಸ್ಥಾಪಕ ಎಸ್ ದಿವಾಕರ ಶುಕ್ರವಾರದಿಂದಲೇ ಬೆಳಗಿನ ೮ ಗಂಟೆಗೆ ಅಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗದAತೆ ಮತ್ತೊಂದು ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಜು ನಾಯ್ಕ, ಬೇಂಗ್ರೆ ಪಂಚಾಯಿತಿ ಸದಸ್ಯ ಮಾರುತಿ ದೇವಾಡಿಗ, ಬೈಂದೂರು ಮತ್ತು ಭಟ್ಕಳಕ್ಕೆ ತೆರಳುವ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ತನ್ನ ಅವಧಿಯಲ್ಲಿ ಭಟ್ಕಳ ಹೊನ್ನಾವರಕ್ಕೆಂದು ಪ್ರತಿದಿನ ೨೦ ಬಸ್ ವ್ಯವಸ್ಥೆ ಮಾಡಿದ್ದೆ. ಅದನ್ನು ಈಗ ಕುಮಟಾ ಡೀಪೋಗೆ ಕೊಡಲಾಗಿದೆ. ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಿಸಿದರೂ ಅದಕ್ಕೆ ಈಗ ಸ್ವಲ್ಪ ಅನುದಾನ ತಂದು ಎದುರಿನ ಹೊಂಡ ತುಂಬಿಸುವ ಕಾರ್ಯವನ್ನು ಈಗಿನ ಶಾಸಕರು ಮಾಡಿಲ್ಲ. ತನ್ನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲೆ ತೊಂದರೆಯಾದರು ತಾನು ಉಚಿತ ಬಸ್ ವ್ಯವಸ್ಥೆ ಕಲ್ಪಿಸುತ್ತೇನೆ. ಎಂದು ಮಾಜಿ ಶಾಸಕರ ಮಂಕಾಳ ಎಸ್ ವೈದ್ಯ,ಹೇಳಿದ್ದಾರೆ.

error: