April 29, 2024

Bhavana Tv

Its Your Channel

ಚರಂಡಿ ಸ್ವಚ್ಛಗೊಳಿಸದ ಪುರಸಭೆಯಿಂದಾಗಿ ಕೆಸರಿನ ನೀರಿನಲ್ಲಿ ನಡೆಯಿತು ವೈಕುಂಠ ಸಮಾರಾಧನೆ

ಭಟ್ಕಳ: ಪುರಸಭೆಯ ಬೇಜವಾಬ್ದಾರಿಯಿಂದ ಚರಂಡಿಯನ್ನು ಸ್ವಚ್ಚಗೊಳಿಸದ ಪರಿಣಾಮವಾಗಿ ಮನೆಯಂಗಳದಲ್ಲಿ ನೀರು ನಿಂತಿದ್ದು ಮನೆಯಲ್ಲಿ ತಾಯಿಯ 14ನೇ ದಿನದ ವೈಕುಂಠ ಸಮಾರಾಧನೆ ಕಾರ್ಯಕ್ಕೆ ಮಳೆಯ ನೀರಿನಲ್ಲಿ ಕುಳಿತು ಊಟ ಮಾಡುವಂತಹ ಪರಿಸ್ಥಿತಿಯು ಭಟ್ಕಳ ಪುರಸಭೆ ವ್ಯಾಪ್ತಿಯ ವಾರ್ಡ ನಂ: 7 ನಾಗಪ್ಪ ನಾಯ್ಕ ರಸ್ತೆಯ ಎರಡನೇ ಕ್ರಾಸನ ರಂಗಿನಕಟ್ಟೆಯ ಮನೆಯೊಂದರಲ್ಲಿ ನಡೆದಿದೆ.

ಭಟ್ಕಳದ ನಾಗಪ್ಪ ನಾಯ್ಕ ರಸ್ತೆಯ ಎರಡನೇ ಕ್ರಾಸನ ರಂಗಿನಕಟ್ಟೆಯ ಮೋಹನ ಹನುಮಂತ ದೇವಡಿಗ ಎಂಬುವವರ ಮನೆಯಲ್ಲಿ ಚರಂಡಿ ನೀರು ನುಗ್ಗಿರುವಂತಹದ್ದು.

ಕಳೆದ ನಾಲ್ಕೂ ವರ್ಷಗಳಿಂದ ಇಲ್ಲಿನ ಚರಂಡಿಯಲ್ಲಿನ ಕಸವನ್ನು ಸಮರ್ಪಕವಾಗಿ ಸ್ವಚ್ಚಗೊಳಿಸದೇ ಹಾಗೇ ಬಿಟ್ಟಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಸಹ ಈ ಭಾಗದ ಮನೆಯಲ್ಲಿ ಚರಂಡಿ ನೀರು ಮನೆಗೆ ನುಗ್ಗುತ್ತಲಿವೆ. ಈ ಬಗ್ಗೆ ಪುರಸಭೆಗೆ ಸಾಕಷ್ಟು ಬಾರಿಗೆ ದೂರು ನೀಡಿದರು ಏನೂ ಪ್ರಯೋಜನೆವಾಗಿಲ್ಲವಾಗಿದ್ದು, ಸಮಸ್ಯೆಗೆ ಪರಿಹಾರ ಸಿಗದೇ ನಿವಾಸಿಗಳು ಪರಿತಪಿಸುತ್ತಿದ್ದರು.

ಈ ವರ್ಷದ ಅಬ್ಬರದ ಮಳೆಯಿಂದಾಗಿ ನಿತ್ಯವೂ ಸುರಿಯುತ್ತಿರುವ ಮಳೆಯಿಂದಾಗಿ ಪ್ರತಿ ದಿನ ನೀರಿನಲ್ಲಿಯೇ ಜೀವನ ಕಳೆಯುವಂತಾಗಿದೆ. ಮೋಹನ ದೇವಾಡಿಗ ಅವರ ತಾಯಿಯು ದೈವಾಧೀನರಾಗಿದ್ದು 14 ನೇ ದಿನದ ವೈಕುಂಠ ಸಮಾರಾಧನೆ ಕಾರ್ಯಕ್ರಮಕ್ಕೆ ಈ ಚರಂಡಿಯ ನೀರು ಭಾರಿ ಸಮಸ್ಯೆ ತಂದೊಡ್ಡಿತ್ತು. ಮನೆಗೆ ಹಿರಿಯರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬದವರು ಬಂದಿದ್ದರು ಅತ್ತ ಮಳೆಯಿಂದಾಗಿ ಚರಂಡಿಯು ತುಂಬಿ ಮನೆಯಂಗಳ ಸೇರಿ ಮನೆಯೊಳಗೆ ಕೆಸರಿನಿಂದಾವ್ರತವಾಗಿತ್ತು. ಇದರ ಪರಿಣಾಮವಾಗಿ ನೆಲದ ಮೇಲೆ ನಡೆಯಬೇಕಾದ ಎಲ್ಲಾ ವಿಧಿ ವಿಧಾನಗಳಿಗೆ ಸಮಸ್ಯೆಗಳಾದವು. ಇನ್ನು ಬಂದAತಹ ಕುಟುಂಬಸ್ಥರು ಹಾಗೂ ಸಂಬAಧಿಕರು ಮನೆಯ ನೀರಿನಲ್ಲಿ ಕುಳಿತು ಊಟ ಮಾಡುವಂತಾಗಿದೆ.
ಈ ಸಮಸ್ಯೆಗೆ ಮೂಲ ಮಾಜಿ ಶಾಸಕ ಡಾ. ಚಿತ್ತರಂಜನ್ ಅವರ ಮನೆಯ ರಸ್ತೆಯ ಎರಡು ಕಡೆಗಳಲ್ಲಿನ ಚರಂಡಿಯನ್ನು ನಾಲ್ಕು ವರ್ಷಗಳಿಂದ ಸ್ವಚ್ಛಗೊಳಿದೇ ಇರುವ ಹಿನ್ನೆಲೆಯಲ್ಲಿ ಅಲ್ಲಿನ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗುತ್ತಿವೆ. ಮೊದಲು ಇಲ್ಲಿನ ಚರಂಡಿಯನ್ನು ಸ್ವಚ್ಛಗೊಳಿಸಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡದ್ದಲ್ಲಿ ಮಾತ್ರ ನಿವಾಸಿಗರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ನಿವಾಸಿಗರು ಆಗ್ರಹಿಸಿದ್ದಾರೆ.
ನಾಲ್ಕು ಚರಂಡಿಯ ಸ್ವಚ್ಛಗೊಳಿಸದ ಹಿನ್ನೆಲೆ ಇಲ್ಲಿನ ನಿವಾಸಿಗಳು ಸಮಸ್ಯೆ ಅನುಭವಿಸುತ್ತಿರುವುದು ಪುರಸಭೆ ಅಧಿಕಾರಿಗಳಿಗೆ ಗೊತ್ತಿದ್ದು ಸಹ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎನ್ನುವುದು ಇಲ್ಲಿನ ನಿವಾಸಿಗರ ಆಕ್ರೋಶವಾಗಿದೆ. ಈಗಂತೂ ಯುಜಿಡಿಯಿಂದ ಮತ್ತಷ್ಟು ತೊಂದರೆ ಯಿಂಟಾಗಿದ್ದು, ವಾರ್ಡನಲ್ಲಿ ಅರ್ದಂಬರ್ಧವಾಗಿ ನಡೆಯುತ್ತಿರುವ ಯುಜಿಡಿಯಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಹೊಂಡದಿAದ ಕೂಡಿದ್ದು ಸಮರ್ಪಕ ಸಂಚಾರಕ್ಕು ಕಷ್ಟವಾಗಿದೆ.
ಅತ್ತ ಚರಂಡಿ ಇತ್ತ ಯುಜಿಡಿಯಿಂದಾಗಿ ನಿವಾಸಿಗರು ಮಾತ್ರ ಮಳೆಯ ನೀರು ಚರಂಡಿ ಸೇರಿ ಮನೆಯೊಳಗೆ ನೀರು ನುಗ್ಗಿ ಫಜೀತಿ ಅನುಭವಿಸಬೇಕಾಗಿದೆ.

‘ನಾಲ್ಕು ವರ್ಷದಿಂದ ಪುರಸಭೆಯ ಗಮನಕ್ಕೆ ತರಲಾಗಿದ್ದರು ಸಹ ಯಾವುದೇ ಸ್ಪಂದನೆ ನೀಡಿಲ್ಲ. ಬದಲಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ತಾತ್ಕಾಲಿಕವಾಗಿ ನೀರಿನ ಪ್ರಮಾಣ ಕಡಿಮೆ ನುಗ್ಗುವಂತೆ ಮನೆಯ ಎದುರಿಗೆ ಮಣ್ಣಿನ ಕಟ್ಟೆಯನ್ನು ಮಾಡಲಾಗಿದ್ದು, ಅದು ವಿಪರೀತ ಮಳೆಯಾದಲ್ಲಿ ನೀರು ಮನೆಯೊಳಗೆ ಸೇರಲಿದೆ.
ಈ ಬಗ್ಗೆ ಪುರಸಭೆ ಅಧಿಕಾರಿಗಳು ಗಮನ ಹರಿಸಲಿದ್ದಲ್ಲಿ ಮನೆಯು ನೀರಿನಿಂದಾವ್ರತವಾಗಲಿದೆ ಎಂದು ಮೋಹನ ದೇವಾಡಿಗ ಮನೆಯ ಮಾಲಿಕ ತಮ್ಮ ಅಳಲು ತೋಡಿಕೊಂಡರು.

error: