April 28, 2024

Bhavana Tv

Its Your Channel

ಜಾತಿ ಬೇಧ ಮರೆತು ಮನುಷ್ಯರೆಂಬ ನೆಲೆಯಲ್ಲಿ ಒಂದಾಗಬೇಕು – ಸಹಾಯಕ ಆಯುಕ್ತೆ ಮಮತಾದೇವಿ

ಭಟ್ಕಳ ಸದ್ಭಾವನಾ ಮಂಚ್ ನಿಂದ ಸಾರ್ವಜನಿಕ ಸದ್ಭಾವನಾ ಪ್ರತಿಜ್ಞಾ ಸ್ವೀಕಾರ.

ಭಟ್ಕಳ: ಸದ್ಭಾವನಾ ಮಂಚ್ ಭಟ್ಕಳವು ಸದ್ಭಾವನಾ ದಿನದ ಅಂಗವಾಗಿ ಗುರುವಾರದಂದು ಭಟ್ಕಳ ಶಮ್ಸುದ್ದೀನ್ ವೃತ್ತದ ಬಳಿ ಸಾರ್ವಜನಿಕ ಸದ್ಭಾವನಾ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಪ್ರತಿಜ್ಞಾ ಸ್ವೀಕರಿಸಿ ಮಾತನಾಡಿದ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾದೇವಿ, ಕೋಮು ಸೌಹಾರ್ದತೆ ಮತ್ತು ಶಾಂತಿಯನ್ನು ಪ್ರಚಾರಗೊಳಿಸುವಲ್ಲಿ ಭಟ್ಕಳದ ಸದ್ಭಾವನಾ ಮಂಚ್ ಸಕ್ರೀಯವಾಗಿದ್ದುಇಂತಹ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿಉತ್ತಮ ಸಂದೇಶವನ್ನು ನೀಡುತ್ತಿದೆಎಂದರು.
ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಸದ್ಭಾವನಾ ಮಂಚ್‌ಅಧ್ಯಕ್ಷ ಸತೀಶ್‌ಕುಮಾರ್, ದೇಶದಲ್ಲಿಇಂದು ಕೋಮುದಳ್ಳೂರಿ, ದ್ವೇಷಅಸೋಯೆ ಹೆಚ್ಚಾಗುತ್ತಿದ್ದುಇಂತಹ ಸಂದರ್ಭದಲ್ಲಿದಿ.ರಾಜೀವ್‌ಗಾAಧಿಯವರ ಹುಟ್ಟು ಹಬ್ಬವನ್ನುಸದ್ಭಾವನಾ ದಿನವನ್ನಾಗಿಆಚರಿಸುವುದರ ಮೂಲಕ ದೇಶದಲ್ಲಿ ಪ್ರೀತಿ ಪ್ರೇಮವನ್ನು ಬೆಳೆಸುವ ಉದ್ದೇಶವನ್ನು ಹೊಂದಲಾಗಿದೆಎAದಅವರು, ಈಗ ಮುಂಬರುವ ದಿನಗಳು ಚುನಾವಣೆಯ ದಿನಗಳಾಗಿದ್ದು ನಮ್ಮಲ್ಲಿಅಶಾಂತಿ ಹರಡುವವರು, ಶವದ ಮೇಲೆ ರಾಜಕೀಯ ಮಾಡುವವರುದೇಶದಲ್ಲಿದ್ವೇಷದ ವಾತವರಣ ಸೃಷ್ಟಿಸಲು ಸನ್ನದ್ಧರಾಗಿದ್ದಾರೆ. ಈ ಸದ್ಭಾವನಾ ಪ್ರತಿಜ್ಞೆಯನ್ನು ಸ್ವೀಕರಿಸುವುದರ ಮೂಲಕ ನಾವು ದೇಶವನ್ನು ಹಾಳು ಮಾಡುವ ಆಎಲ್ಲ ತಂತ್ರಗಳನ್ನು ಮೆಟ್ಟಿನಿಲ್ಲಬೇಕುಎಂದುಅವರುಕರೆ ನೀಡಿದರು. ಈಗ ಶವಗಳಿಗೆ ಭಾರಿ ಬೇಡಿಕೆಯಿದ್ದು ಶವಗಳನ್ನು ಮುಂದಿಟ್ಟುಕೊAಡುತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತವೆ. ನಾವು ಯಾರೂಕೂಡ ಕುರಿಗಳಂತೆ ಬಲಿಯಾಗದೆ ಶಾಂತಿಯನ್ನುಕಾಪಾಡಿಕೊAಡುಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವುದನ್ನು ಕಲಿತುಕೊಳ್ಳಬೇಕು ಎಂದರು.
ತಾಲೂಕುಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷಗಂಗಾಧರ್ ನಾಯ್ಕ ಮಾತನಾಡಿ, ನಾವೆಲ್ಲರೂ ವೈಯಕ್ತಿವಾಗಿತಮ್ಮತಮ್ಮ ಹೊಣೆಗಾರಿಕೆಯನ್ನುಅರಿತು ಪ್ರತಿಜ್ಞಾವಿಧಿಯಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅಂಜುಮನ್ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಆರ್.ಎಸ್.ನಾಯಕ ಮಾತನಾಡಿ, ನಾವು ಮಂಗಳದಲ್ಲಿ ದ್ವಜವನ್ನುನೆಟ್ಟುಬಂದಿದ್ದೇವೆ.ಆದರೆ ನಮ್ಮ ನಮ್ಮ ಅಂಗಳದಲ್ಲಿ ಪ್ರೀತಿ ಪ್ರೇಮಗಳು ಸೌಹಾರ್ದತೆಯನ್ನು ಬೆಳೆಸುವಲ್ಲಿ ಯಾಕೆ ವಿಫಲರಾಗುತ್ತಿದ್ದೇವೆಎಂದಅವರು, ಪರಪಧರ್ಮ ಪರವಿಚಾರ ಸಹಿಸಿಕೊಳ್ಳುವುದೆ ಅತಿದೊಡ್ಡಧರ್ಮವಾಗಿದೆಎಂದರು. ಕನ್ನಡನಾಡು ಶಾಂತಿ ಸೌಹರ್ದತೆಯತೋಟವಾಗಿದೆ.ನಾವು ಸೇತುವೆಯಾಗಬೇಕುಕಂದಕವಾಗಬಾರದುಎAದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ತಂಝೀಮ್ ಮುಖಂಡಇನಾಯತುಲ್ಲಾ ಶಾಬಂದ್ರಿ, ಜಮಾಅತೆಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಮುಖಂಡರಾದ ಮೌಲಾನ ಸೈಯದ್ಯಝುಬೇರ್, ಮುಜಾಹಿದ್ ಮುಸ್ತಫಾ ಪಯಾಮೆಇನ್ಸಾನಿಯತ್ ನ ಮೌಲಾನಇರ್ಷಾದ್ ನಾಯ್ತೆ ನದ್ವಿ, ಸದ್ಭಾವನಾ ಸಂದೇಶ ನೀಡಿದರು.
ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಠಾಣೆಯ ಪಿ.ಎಸ್.ಐ. ಹನುಮಂತಕುಡಗುAಡಿ, ಸೈಯ್ಯದ್ ಶಕೀಲ್‌ಎಸ್.ಎಂ., ಸಲಾಹುದ್ದೀನ್‌ಎಸ್.ಕೆ, ಸದ್ಭಾವನ ಮಂಚ್‌ಉಪಾಧ್ಯಕ್ಷ ಪಾಸ್ಕಲ್‌ಗೋಮ್ಸ್, ಪತ್ರಕರ್ತ ಮನಮೋಹನ್ ನಾಯ್ಕ, ಆಸಿಫ್ ಶೇಕ್, ಖಮರುದ್ದೀನ್ ಮಷಾಯಿಕ್ ಮತ್ತಿತರರು ಹಾಜರಿದ್ದರು.

error: