May 1, 2024

Bhavana Tv

Its Your Channel

ಬುರ್ಖಾಧಾರಿಗಳು ಬಂದು ಕಳ್ಳತನ ಮಾಡಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್

ಭಟ್ಕಳ: ಮೆಡಿಕಲ್ ಶಾಪ್ ಒಂದರಲ್ಲಿ ಬುರ್ಖಾಧಾರಿಗಳು ಬಂದು ಕಳ್ಳತನ ಮಾಡಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಭಟ್ಕಳ ಕಟ್ಟಿಗೆ ಡಿಪ್ಪೊ ಸಮೀಪ ಇರುವ ಅಪೋಲೊ ಮೆಡಿಕಲ್ ಮಳಿಗೆಯಲ್ಲಿ ಮೂವರು ಬುರ್ಕಾಧಾರಿ ಮಹಿಳೆಯರು ತಮ್ಮ ಕೈಚಳಕ ತೋರಿದ್ದಾರೆ. ಸಿ ಸಿ ಕ್ಯಾಮೆರಾ ಅಳವಡಿಸಿದ್ದರು ಸಹ ಅದು ಯಾವುದನ್ನು ಗಮನಿಸೋದೇ ಇವರು ಕಳ್ಳತನಕ್ಕೆ ಮುಂದಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಬುರ್ಖಾಧಾರಿ ಮಹಿಳೆಯರು ಔಷಧಿ ಖರೀದಿಸುವ ನಾಟಕವಾಡಿದ್ದಾರೆ.ವೇಳೆ ಅಲ್ಲೇ ಇದ್ದ ಸಿಬ್ಬಂದಿಯನ್ನು ಯಾಮಾರಿಸಿ ಕೈಚಳಕ ತೋರಿಸಿದ್ದು, ಔಷಧಿ ಅಂಗಡಿಯಲ್ಲಿದ್ದ ಕೆಲ ವಸ್ತುಗಳನ್ನು ತಮ್ಮ ಬುರ್ಖಾ ದಲ್ಲಿ ಹಾಕಿಕೊಂಡು ಕಳ್ಳತನ ಮಾಡಿದ್ದಾರೆ.
ಅನುಮಾನ ಬಂದು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಲೀಕರು ಪೊಲೀಸರ ಮೊರೆ ಹೋಗಿದ್ದು ಪ್ರಕರಣ ತನಿಖೆ ನಡೆಸಿದ ನಂತರ ಪೂರ್ಣ ಮಾಹಿತಿ ಹೊರ ಬರಬೇಕಿದೆ.

error: