September 25, 2023

Bhavana Tv

Its Your Channel

ಯಕ್ಷಗಾನ ವೇಷ ಧರಿಸಿ ಜನಮನ ಸೆಳೆದ ವೈದ್ಯರುಗಳು

ಭಟ್ಕಳ:ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಜಾಂಬವತಿಯಾಗಿ, ಹೊನ್ನಾವರದ ವೈದ್ಯ ಡಾ.ಕೃಷ್ಣ ಜಿ. ಕೃಷ್ಣನಾಗಿ, ಡಾ.ಮಂಜುನಾಥ ಶೆಟ್ಟಿ ಬಲರಾಮನಾಗಿ, ಡಾ.ಪ್ರಕಾಶ ನಾಯ್ಕ ಜಾಂಭವ, ಚರ್ಮ ರೋಗತಜ್ಞ ಡಾ.ಶಿವಾನಂದ ಹೆಗಡೆ ನಾರದನಾಗಿ ಅಭಿನಯಿಸಿ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ.

ವೈದ್ಯಕೀಯ ವೃತ್ತಿಗೂ ಯಕ್ಷಗಾನಕ್ಕೂ ಎಲ್ಲಿಂದೆಲ್ಲಿಯ ಸಂಬAಧ? ತಮ್ಮ ವೃತ್ತಿಯಲ್ಲಿ ಸದಾ ಒತ್ತಡದಲ್ಲಿಯೇ ಓಡಾಡಿಕೊಂಡಿರುವ ಜಿಲ್ಲೆಯ ವೈದ್ಯರುಗಳು ಕುಮಟಾ ಶ್ರೀ ರಾಮನಾಥ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷೇತ್ಸವದಲ್ಲಿ ತಮ್ಮ ಬಿಡುವಿನ ವೇಳೆ ಯಕ್ಷ ವೇಷಧರಿಸಿ, ಬಣ್ಣ ಹಚ್ಚಿ ಕುಣಿಯುವುದರೊಂದಿಗೆ ವೈದ್ಯರು ಜನಮನ ಸೆಳೆದಿದ್ದಾರೆ.
ಕುಮಟ ನಡೆದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಜಾಂಬವತಿಯಾಗಿ, ಹೊನ್ನಾವರದ ವೈದ್ಯ ಡಾ.ಕೃಷ್ಣ ಜಿ. ಕೃಷ್ಣನಾಗಿ, ಡಾ.ಮಂಜುನಾಥ ಶೆಟ್ಟಿ ಬಲರಾಮನಾಗಿ, ಡಾ.ಪ್ರಕಾಶ ನಾಯ್ಕ ಜಾಂಭವ, ಚರ್ಮ ರೋಗತಜ್ಞ ಡಾ.ಶಿವಾನಂದ ಹೆಗಡೆ ನಾರದನಾಗಿ ಅಭಿನಯಿಸಿ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ.
ಭಟ್ಕಳ ಸರಕಾರಿ ಆಸ್ಪತ್ರೆಯ ಸುಧಾರಣೆಯಲ್ಲಿ ಮಹತ್ತರವಾದ ಡಾ.ಸವಿತಾ ಕಾಮತ್,ಜಾಂಬವತಿ ಯಕ್ಷಗಾನ ವೇಷ ಹಾಕಿ ಕುಣಿದು ಪಾತ್ರವನ್ನು ನಿರ್ವಹಿಸಿದ್ದು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಭಟ್ಕಳಕ್ಕೆ ಬಂದಿದ್ದ ಆರೋಗ್ಯ ಸಚಿವ ಡಾ.ಸುಧಾಕರ ಕೃಷ್ಣನ ವೇಷ ಧರಿಸಿದ್ದು ಸ್ಮರಿಸಿಕೊಳ್ಳಬಹುದು.

error: