May 16, 2024

Bhavana Tv

Its Your Channel

ಭಟ್ಕಳದಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮ, ಹಿರಿಯ ಪತ್ರಕರ್ತ ಜಿ.ಯು. ಭಟ್ಟರಿಗೆ ಸನ್ಮಾನ

ಭಟ್ಕಳ: ಯಾವುದೇ ವ್ಯಕ್ತಿ ತಮ್ಮ ಧರ್ಮದ ಕುರಿತು ಅಭಿಮಾನವನ್ನು ಹೊಂದಿರುತ್ತಾನೆ ಆತ ಎಲ್ಲಾ ಧರ್ಮವನ್ನೂ ಗೌರವಿಸುತ್ತಾನೆ ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಹೊನ್ನಾವರ ಅವರು ಹೇಳಿದರು.

ಅವರು ಭಟ್ಕಳ ಖಾಸಗಿ ಹೋಟೆಲ್‌ನಲ್ಲಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಎರ್ಪಡಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅಮೃತಾಭಿನಂದನೆಯ ಪ್ರಯುಕ್ತ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಎಲ್ಲಾ ಧರ್ಮಗಳಲ್ಲಿಯೂ ಕೂಡಾ ಮಾನವೀಯತೆ, ಮಾನವ ಕುಲದ ಉದ್ಧಾರದ ಕುರಿತೇ ಉಲ್ಲೇಖಿಸಲಾಗಿದೆ. ನಮ್ಮ ದೇಶವು ಭಿನ್ನತೆಯಲ್ಲಿ ಏಕತೆಯನ್ನು ಹೊಂದಿದ ದೇಶವಾಗಿದ್ದು ಎಲ್ಲಾ ಧರ್ಮ, ಜಾತಿ, ಪಂಗಡವರೂ ಕೂಡಿ ಬಾಳಬೇಕಾಗಿದೆ ಎಂದರು. ಧರ್ಮ ಬದುಕುವ ಮಾರ್ಗವನ್ನು ಕಲಿಸುತ್ತದೆ, ಧರ್ಮವನ್ನು ಬಿಟ್ಟು ನಡೆದರೆ ಅಧರ್ಮದತ್ತ ಹೋಗಬೇಕಾಗುತ್ತದೆ. ಸಂವಿಧಾನದ ಆಶಯಗಳನ್ನು ನಾವು ಪಾಲಿಸಿಕೊಂಡು ಬಂದರೆ ಯಾವುದೇ ತೊಂದರೆಯಾಗದು ಎಂದ ಅವರು ನಮ್ಮ ದೇಶದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದರೆ ದೇಶ ಇನ್ನಷ್ಟು ಅಭಿವೃದ್ಧಿ ಹೊಂದುವುದರ ಜೊತೆಗೆ ಬಲಿಷ್ಟ ರಾಷ್ಟçವಾಗುತ್ತದೆ ಎನ್ನುವ ಕಾರಣಕ್ಕೆ ಹಲವಾರು ಪಿತೂರಿಗಳು ದೇಶವನ್ನು ದುರ್ಬಲಗೊಳಿಸಲು ಕೆಲಸ ಮಾಡುತ್ತವೆ ಎಂದೂ ಹೇಳಿದ ಅವರು ಅದಕ್ಕೆ ನಾವು ಎಚ್ಚರದಿಂದ ಇರಬೇಕಾಗಿದ್ದು ಅಗತ್ಯ ಎಂದರು. ಭಟ್ಕಳದ ಬಗ್ಗೆ ಹಲವಾರು ವರ್ಷಗಳ ನಂಟಿರುವ ಕುರಿತು ಉಲ್ಲೇಖಿಸಿದ ಅವರು ಇಲ್ಲಿನ ಗಲಭೆಗಳು, ನಂತರದ ದಿನಗಳಲ್ಲಿ ನೊಂದವರು ತೀರಾ ಬಡ ಜನತೆ ಮಾತ್ರ ಇಂದಿಗೂ ಅನೇಕ ಕುಟುಂಬಗಳು ತಮ್ಮವರನ್ನು ಕಳೆದುಕೊಂಡು ಬಡತನದಲ್ಲಿಯೇ ಜೀವನ ಸಾಗಿಸುತ್ತಿದೆ ಎಂದರು.

ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಹಾಗೂ ಜಮಾತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞÂ ಮಾತನಾಡಿ ಸಮಾಜದಲ್ಲಿನ ದುಷ್ಕೃತ್ಯಗಳನ್ನು, ಅನಾಹುತಗಳನ್ನು ಯಾರೂ ಕೂಡಾ ಸ್ವಾಗತಿಸಲಾರರು, ಅಂತವುಗಳನ್ನು ಸಮುದಾಯಗಳು ವಿರೋಧಿಸಬೇಕು. ಜಗತ್ತಿನ ಯಾವ ಧರ್ಮವೂ ಕೂಡಾ ಕೆಟ್ಟದ್ದನ್ನು ಹೇಳಿಲ್ಲ, ಬದಲಿಗೆ ಪರಸ್ಪರ, ಪ್ರೀತಿ, ವಿಶ್ವಾಸ, ಮಾನವೀಯತೆಯನ್ನು ಸಾರಿವೆ ಎಂದರು.

ಕಾರ್ಯಕ್ರಮದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮೌಲಾನಾ ಜುಬೇರ್, ಮುಹಮ್ಮದ್ ತಲ್ಹಾ ಸಿದ್ಧಿಬಾಪಾ ಉಪಸ್ಥಿತರಿದ್ದರು. ಉಪಸ್ಥಿತರಿದ್ದ ಮಾಧ್ಯಮ ಪ್ರತಿನಿದಿಗಳು ಕೇಳಿದ ವಿವಿಧ ಪ್ರಶ್ನೆಗಳಿಗೆ ತಾಳ್ಮೆಯಿಂದ ಮಹಮ್ಮದ್ ಕುಂಞÂ ಅವರು ಉತ್ತರಿಸಿದರು.
ಜಮಾತೆ ಇಸ್ಲಾಮಿ ಹಿಂದ್‌ನ ಎಂ.ಆರ್. ಮಾನ್ವಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಹೇಳಿದರು.

error: