April 29, 2024

Bhavana Tv

Its Your Channel

ಭಟ್ಕಳದಲ್ಲಿ ವಿಜೃಂಭಣೆಯಿoದ ಸಂಪನ್ನಗೊoಡ ಮಾರಿ ವಿಸರ್ಜನೆ

ಭಟ್ಕಳ: ಕಂಡು ಕೇಳರಿಯದಷ್ಟು ಜನ ಸಾಗರ, ಮೈ ಜುಮ್ಮೆನ್ನಿಸುವ ವಿವಿಧ ಪೌರಾಣಿಕ ಸ್ತಬ್ಧ ಚಿತ್ರಗಳು, ಭಜನೆ, ಕುಣಿತ ಸಂಭ್ರಮ, ಸಡಗರಗಳ ಸಂಗಮದೊAದಿಗೆ ತಾಲೂಕಿನ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಆರಂಭವಾದ ಮಾರಿಯ ಶೋಭಾ ಯಾತ್ರೆಯು ಬುಧವಾರ ರಾತ್ರಿ ಮಾರಿ ವಿಸರ್ಜನೆಯೊಂದಿಗೆ ಸುಸಂಪನ್ನಗೊAಡಿತು.

ಶ್ರೀ ದುರ್ಗಾಪರಮೇಶ್ವರಿ ಹಾಗೂ ಮಾರಿಗೆ ವಿಶೇಷ ಪೂಜೆ ಸಲ್ಲಿಸಿ ಮಾರಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಳ್ವೆಕೋಡಿಯಿಂದ ಹೊರಟ ಮೆರವಣಿಗೆಯು ಸಣಬಾವಿ, ಉಳ್ಮಣ್, ಯಕ್ಷಿಮನೆ, ಮಾವಿನಕಟ್ಟೆ, ಸಾರದಾಹೊಳೆ, ಶಿರಾಲಿ ಮಾರ್ಗವಾಗಿ ವೆಂಕಟಾಪುರದ ಕಂಚಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದ ನಿವೇಶನದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಸಹಸ್ರಾರು ಭಕ್ತರ ಹರ್ಷೋದ್ಘಾರಗಳೊಂದಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾರಿ ವಿಸರ್ಜನೆ ನೆರವೇರಿತು. ಮೆರವಣಿಗೆಯುದ್ಧಕ್ಕೂ ಕಾಂತಾರ ಸಿನಿಮಾದ ಪಂಜುರ್ಲಿ ದೈವ, ಈಶ್ವರ, ಶ್ರೀ ದುರ್ಗೆ, ಮಹಿಷಾಸುರ, ನಾಗದೇವತೆ ಸೇರಿದಂತೆ ಅತ್ಯುದ್ಭುತವಾದ ಸ್ತಬ್ಧಚಿತ್ರಗಳು, ಡೊಳ್ಳುಕುಣಿತ, ವಿವಿಧ ಮಹಿಳಾ ಸ್ವಯಂಸೇವಕ ಸಂಘಗಳ ಸದಸ್ಯರ ಭಜನಾ ಕುಣಿತ, ಅಳ್ವೆಕೋಡಿ ಭಜನಾ ತಂಡದ ಭಕ್ತಿಗೀತೆಗಳು ನೋಡುಗರ ಕಣ್ಮನ ಸೆಳೆದವು.
ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ನಿಂತು ಮಾರಿ ಮೆರವಣಿಗೆಯನ್ನು ಕಣ್ಣುಬಿಸಿಕೊಂಡರು. ಆಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಮಾರಿಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ನಾರಾಯಣ ದೈಮನೆ, ತಿಮ್ಮಪ್ಪ ಹೊನ್ನೆಮನೆ, ಹನ್ಮಂತ ನಾಯ್ಕ, ಅರವಿಂದ ಪೈ ಸೇರಿದಂತೆ ಹಲವಾರು ಪ್ರಮುಖರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಭಟ್ಕಳದ ಮಟ್ಟಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಶೋಭಾ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿಯಾಯಿತು. ಡಿವಾಯ್ ಎಸ್ಪಿ ಶ್ರೀಕಾಂತ, ಸಿಪಿಐ ದಿವಾಕರ, ಸಿಪಿಐ ಮಹಾಬಲೇಶ್ವರ ನಾಯ್ಕ, ಸಿಪಿಐ ತಿಮ್ಮಪ್ಪ ನಾಯ್ಕ, ಸಿಪಿಐ ವಸಂತ ಆಚಾರಿ ನೇತೃತ್ವದಲ್ಲಿ ಮೆರವಣಿಗೆಯುದ್ದಕ್ಕೂ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.

error: