April 29, 2024

Bhavana Tv

Its Your Channel

ನಾವು ನಮ್ಮಲ್ಲಿರುವ ಪೂರ್ಣ ರೂಪದ ಸುಖ, ಶಾಂತಿ ನೆಮ್ಮದಿಯನ್ನು ಪಡೆಯುವಲ್ಲಿ ವಿಫಲರಾಗಿದ್ದೇವೆ- ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ:- ನಾವು ನಮ್ಮಲ್ಲಿರುವ ಪೂರ್ಣ ರೂಪದ ಸುಖ, ಶಾಂತಿ ನೆಮ್ಮದಿಯನ್ನು ಪಡೆಯುವಲ್ಲಿ ವಿಫಲರಾಗಿದ್ದೇವೆ ಎಂದು ಶ್ರೀರಾಮ ಕ್ಷೇತ್ರದ ಮಠಾದೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು
ಅವರು ಅಳ್ವೇಕೋಡಿಯ ಶ್ರೀ ದುರ್ಗಾಪರಮೇಶ್ವರಿ 2ನೇ ದಿನದ ದೇವಾಲಯದಲ್ಲಿ ಮಾರಿ ಜಾತ್ರೋತ್ಸವದ ಪ್ರಯುಕ್ತ ಹಮ್ಮಿಕೊಂಡ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೆರೆದ ಭಕ್ತರಿಗೆ ಆಶೀರ್ವಚನ ನೀಡಿದರು.ಸಾವಿರ ಕೋಟಿಯ ಧನಿಕನಿರಬಹುದು ಅಥವಾ ಸಾಮಾನ್ಯ ಮನುಷ್ಯ ನಿರಬಹುದು ಆತನನ್ನು ನೋಡಿದರೆ ಅವರು ಯಾವುದೋ ತೊಂದರೆಯಿAದ ದುಖಃ ಪಡುತ್ತಿರುವುದನ್ನು ನಾವು ಸಮಾಜದಲ್ಲಿ ನೋಡುತ್ತೇವೆ. ಇದಕ್ಕೆಲ್ಲ ಕಾರಣವೆಂದರೆ ನಾವು ಪೂರ್ಣ ರೂಪದಲ್ಲಿ ಧರ್ಮವನ್ನು ಪಾಲಿಸದಿರುವದೇ ಕಾರಣ ಎಂದ ಅವರು ನಾವು ಸತ್ಯದ ಮತ್ತು ಧರ್ಮದ ಕಡೆಗೆ ನಮ್ಮ ಮನಸ್ಸಿನ ಪ್ರಯಾಣ ಬೆಳೆಸಬೇಕು ಎಂದ ಅವರು ಇಂದು ನಾವು ಎಲ್ಲಾ ಕ್ಷೇತ್ರಗಳಲ್ಲಿ ಜ್ಞಾನ ದಾಸೋಹದ ಕೊರತೆಯನ್ನು ಕಾಣುತ್ತೇವೆ, ಪ್ರತಿನಿತ್ಯ ಭಜನೆ ಮತ್ತು ತಂತ್ಸAಗದಲ್ಲಿ ಪಾಲ್ಗೊಳ್ಳುವುದರಿಂದ ಮನುಷ್ಯ ತನ್ನ ವಿಕಾಸ ಹೊಂದುತ್ತಾನೆ. ಸನಾತನ ಧರ್ಮದಲ್ಲಿರುವ ಶಕ್ತಿ ಯಾವ ಧರ್ಮದಲ್ಲೂ ಇಲ್ಲ ಎಂದ ಅವರು ಈ ಕ್ಷೇತ್ರದಲ್ಲಿ ಭಕ್ತರು ದೇವಿಯ ಪ್ರತಿಷ್ಟಾಪನೆ ಮಾಡಿ ಧರ್ಮವನ್ನು ಎತ್ತಿಹಿಡಿದಿದ್ದಾರೆ, ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಸ್ವಯಂ ಸೇವಕರು ನಿಷ್ಠೆ ಹಾಗೂ ಭಕ್ತಿಯ ಕಾರ್ಯಕ್ಕೆ ದೇವಿ ಪ್ರಸನ್ನಗೊಂಡಿದ್ದಾಳೆ ಎಂದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಮಾರಿಜಾತ್ರಾ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ವಹಿಸಿ ಮಾತನಾಡಿದರು.
ದೇವಸ್ಥಾನದ ಟ್ರಸ್ಟಿ ನಾರಾಯಣ ದೈಮನೆ ಸ್ವಾಗತಿಸಿದರು. ವೇದಿಕೆಯಲ್ಲಿ ತಾಲೂಕು ಶ್ರೀ ರಾಮ
ಕ್ಷಢತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ದೇವಸ್ಥಾನ ದ ಆಡಳಿತ ಮಂಡಳಿಯ ಧರ್ಮದರ್ಶಿ ಹನುಮಂತ ನಾಯ್ಕ, ಅರವಿಂದ ಪೈ, ಭಟ್ಕಳ ತಂಜೀಮ ಸಂಸ್ಥೆ ಯ ಅಧ್ಯಕ್ಷ ಇನಾಯತುಲ್ಲಾ ಶಾಭಂದ್ರಿ ಉಪಸ್ಥಿತರಿದ್ದರು.
ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸ್ವಾಮೀಜಿಗಳು ಮಾರಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

error: