May 15, 2024

Bhavana Tv

Its Your Channel

ಮೌಲ್ಯಗಳು ನಿಮ್ಮ ಗೌರವ ಹೆಚ್ಚಿಸುತ್ತವೆ-ಮುಹಮ್ಮದ್ ಕುಂಞಿ

ಭಟ್ಕಳದ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ನಡೆದ ಸಂಸ್ಕಾರ ಸುಧಾ ಕಾರ್ಯಕ್ರಮ

ಭಟ್ಕಳ: ನಮ್ಮಲ್ಲಿರುವ ಮೌಲ್ಯಗಳು ನಮ್ಮ ಆತ್ಮಗೌರವವನ್ನು ಹೆಚ್ಚಿಸುತ್ತದೆ. ಮೌಲ್ಯ ರಹಿತ ಬದುಕು ಸಮಾಜದಲ್ಲಿ ಕಡೆಗಣಿಸಲ್ಪಡುತ್ತದೆ ಎಂದು ಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞÂ ಹೇಳಿದರು.
ಅವರು ಗುರುವಾರ ಭಟ್ಕಳದ ಸಾಗರ ರಸ್ತೆಯಲ್ಲಿರುವ ಪ್ರತಿಷ್ಠಿತ ದಿ.ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜಿನಲ್ಲಿ ನಡೆದ “ಸಂಸ್ಕಾರ ಸುಧಾ” ಕಾರ್ಯಕ್ರಮದಲ್ಲಿ “ಉತ್ತಮ ಭವಿಷ್ಯಕ್ಕಾಗಿ” ಎಂಬ ವಿಷಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದರು.
ನಮ್ಮ ಹಿಂದೆ ಋಷಿ ಮುನಿಗಳು, ಪ್ರವಾದಿಗಳು, ಶರಣರು, ಸಂತರು ಅಪಾರವಾಗಿರುವ ಮೌಲ್ಯಗಳನ್ನು ಬಿಟ್ಟುಹೋಗಿದ್ದಾರೆ. ಆ ಮೌಲ್ಯಗಳನ್ನು ಅದ್ಯಯನ ಮಾಡುವ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದ ಅವರು, ಇಂದಿನ ದಿನಮಾನದಲ್ಲಿ ಹೆಚ್ಚು ಕಲಿತವರಿಂದಲೇ ಸಮಾಜದಲ್ಲಿ ಕೆಡುಕು ಉಂಟಾಗುತ್ತಿದೆ. ಕೇವಲ ಶಿಕ್ಷಣ ಪಡೆದರೆ ಸಾಲದು ನಾವು ಹೇಗೆ ಬದುಕಬೇಕು ಎಂಬುದರ ಶಿಕ್ಷಣ ಮತ್ತು ಮೌಲ್ಯಗಳು ನಮಗೆ ಸಿಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ವೀರೇಂದ್ರ ಶಾನುಭಾಗ, ನಾವು ಮೌಲ್ಯಗಳನ್ನು ಬಿಟ್ಟು ಮಾರ್ಕು (ಅಂಕ)ಗಳ ಹಿಂದೆ ಬಿದ್ದಿದ್ದೇವೆ. ಯಾರು ಹೆಚ್ಚು ಅಂಕ ಗಳಿಸುತ್ತಾರೋ ಅವರನ್ನೂ ಗೌರವಿಸುವ ಪರಿಪಾಠ ಸಮಾಜದಲ್ಲಿ ಬೆಳಯುತ್ತಿದೆ. ಮಾರ್ಕುಗಳನ್ನು ಕೊನೆ ಇಟ್ಟು ಮೌಲ್ಯಗಳನ್ನು ಮೊದಲು ತಂದಾಗ ಸಮಾಜ ಸುಂದರವಾಗಲು ಸಾಧ್ಯ ಎಂದು ಹೇಳಿದರು.
ಭಟ್ಕಳ ಸದ್ಭಾವನಾ ಮಂಚ್ ಕಾರ್ಯದರ್ಶಿ ಮುಹಮ್ಮದ್ ರಝಾ ಮಾನ್ವಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಶಿವಾನಂದ ಭಟ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸಯ್ಯದ್ ಝುಬೇರ್ ಎಸ್.ಎಂ, ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: