May 15, 2024

Bhavana Tv

Its Your Channel

ಭಟ್ಕಳದ ಜಾಲಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡ ಉದ್ಘಾಟನೆ

ಭಟ್ಕಳ ತಾಲುಕು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಇಲ್ಲಿನ ಜಾಲಿಯಲ್ಲಿ ಶಾಸಕ ಸುನೀಲ ನಾಯ್ಕ ಶನಿವಾರದಂದು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ‘ ಸರಕಾರಿ ಕಾಲೇಜಿಗೆ ಒಂದು ಸುಸಜ್ಜಿತ ಕಟ್ಟಡದ ಅವಶ್ಯಕತೆಯು ಬಹು ವರ್ಷದ ಬೇಡಿಕೆಯಾಗಿದ್ದು, ಈಗ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನೂಕೂಲ ಸಿಕ್ಕಿರುವುದು ಸಂತಸವಾಗಿದೆ. ಇದು ಶಾರದಾಂಬೆಯ ದೇಗುಲ ಸನ್ನಡತೆಯಿಂದ ನಡೆದುಕೊಳ್ಳಬೇಕು. ಅಂದು ಮಾಜಿ ಶಾಸಕ ಶಿವಾನಂದ ನಾಯ್ಕ ಅವರ ಅವಧಿಯಲ್ಲಿ ಆಗಿರುವ ಕೆಲಸವನ್ನು ನೆನಪಿಸಿಕೊಳ್ಳಬೇಕು. ಪ್ರಥಮ ದರ್ಜೆ ಕಾಲೇಜು, ವಸತಿ ಶಾಲೆ ಸೇರಿದಂತೆ ಸಾಕಷ್ಟು ಶಿಕ್ಷಣಕ್ಕೆ ಕನಸು ಕಂಡು ಕೊಡುಗೆ ನೀಡಿರುವ ಅವರ ಸಾಧನೆ ಹಾಗೂ ಅವರ ಸೇವೆಯನ್ನು ನಾವು ನೆನಪಿಸಿಕೊಳ್ಳಲೇಬೇಕು. ಆದರೆ ನಾನು ಎಲ್ಲಾ ಶಿಕ್ಷಣದ ಕಟ್ಟಡಕ್ಕೆ ಬಾಡಿಗೆಯಿಂದ ಮುಕ್ತಗೊಳಿಸಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಸಂಕಲ್ಪ ಮಾಡಿದ್ದಂತೆ ಎಲ್ಲವನ್ನು ಶಾಶ್ವತ ವ್ಯವಸ್ಥೆ ಕಲ್ಪಿಸಿಕೊಡುತ್ತಾ ಬಂದಿದ್ದೇನೆ. ಶಿಕ್ಷಣದ ಕ್ರಾಂತಿಯ ಜೊತೆಗೆ ವಿವಿಧ ಕಾಲೇಜಿನ ಕಟ್ಟಡವನ್ನು ನಿರ್ಮಿಸಿ ಶಿಕ್ಷಣ ಕಾರಿಡಾರ್ ವ್ಯವಸ್ಥೆಯ ಕನಸು ನನಸ್ಸಾಗುತ್ತಿದೆ. ಇನ್ನೇನು ಸ್ವಲ್ಪ ದಿನದಲ್ಲಿ ನಾರಾಯಣ ಗುರು ವಸತಿ ಶಾಲೆ ಹಾಗೂ ಸರಕಾರಿ ಕಾನೂನು ಶಾಲೆಯ ಕಟ್ಟಡ ಸಹ ಇದೇ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಆಗಲಿದೆ ಎಂದ ಅವರು ಸದ್ಯ ಕಟ್ಟಡದ ವ್ಯವಸ್ಥೆಯಾದ ಬಳಿಕ ಈಗ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಬೋದಕ ವ್ರಂದವು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗುವಂತೆ ಉತ್ತಮ ಬೋದನೆಯನ್ನು ಮಾಡಬೇಕು. ಮುಂದಿನ ವರ್ಷದಲ್ಲಿ 1 ಸಾವಿರಕ್ಕೂ ವಿದ್ಯಾರ್ಥಿಗಳ ದಾಖಲಾತಿಯಾಗುವಂತೆ ಮಾಡಬೇಕಾಗಿದೆ. ಒಂದು ಕಾಲ ಇತ್ತು ಅಂದು ನಾನು ಶಾಸಕನಾಗಿಲ್ಲದ ಸಮಯದಲ್ಲಿ ಸರಕಾರಿ ಕಾಲೇಜಿನಲ್ಲಿ ನಮ್ಮ ಮಕ್ಕಳಿಗೆ ಒಂದು ದಾಖಲಾತಿ ನೀಡುವಂತೆ ನನ್ನ ಬಳಿ ಮಾತನಾಡಲು ಪಾಲಕರು ಕೇಳಿಕೊಳ್ಳುತ್ತಿದ್ದರು. ಆ ದಿನ ಈಗ ಮತ್ತೆ ಮರುಕಳಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆಗಳ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ‘ ಸಾಕಷ್ಟು ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ಕಾಲೇಜು ನಡೆಯುತ್ತಿದ್ದು, ಈಗ ನೂತನ ಕಟ್ಟಡಕ್ಕೆ ಬಂದಿರುವುದು ಸಂತಸವಾಗಿದೆ.
ಕಾಲೇಜಿನ ಕಟ್ಟಡ ನಮ್ಮ ಮನೆಯೆಂಬAತೆ ವಿದ್ಯಾರ್ಥಿಗಳು ಕಾಪಾಡಿಕೊಳ್ಳಬೇಕು. ಕಾರಣ ಈ ಹಿಂದೆ ರಂಗೀನಕಟ್ಟೆಯಲ್ಲಿದ್ದ ವೇಳೆ ಕಾಲೇಜಿನ ವಸ್ತುಗಳನ್ನು ಹಾಳು ಮಾಡುವಂತಹ ಘಟನೆ ನಡೆದಿರುವುದು ಬೇಸರ ತಂದಿತ್ತು. ವಿದ್ಯಾರ್ಥಿಗಳಲ್ಲಿನ ಸಿಟ್ಟನ್ನು ಉದ್ವೇಗವನ್ನು ದೇಶ ಕಟ್ಟಲು ಉತ್ತಮ ಪ್ರಜೆಯಾಗಲು ಬಳಸಿಕೊಳ್ಳಿ. ಶಿಕ್ಷಕ, ಶಿಕ್ಷಕಿಯರನ್ನು, ತಂದೆ ತಾಯಿಯನ್ನು ಗೌರವಿಸಬೇಕು ಅವರನ್ನು ಅನಾಥಾಶ್ರಮಕ್ಕೆ ಸೇರಿಸದೇ ನೀವೇ ಅವರನ್ನು ನೋಡಿಕೊಳ್ಳಬೇಕು ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎರಡನೇಯ ಪ್ರಾಂಶುಪಾಲ ಐ.ಆರ್. ಖಾನ್,ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಎಮ್.ಆರ್.ನಾಯ್ಕ,ಇನ್ನೋರ್ವ ಕಾಲೇಜು ಮಂಡಳಿ ಸದಸ್ಯ ಡಿ.ಬಿ. ನಾಯ್ಕ ಮಾತನಾಡಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಭಾಗೀರಥಿ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನಂತರ ಶಾಸಕ ಸುನೀಲ ನಾಯ್ಕ, ಪಶ್ಚಿಮ ಘಟ್ಟಗಳ ಕಾರ್ಯಪಡೆಗಳ ಅಧ್ಯಕ್ಷ ಗೋವಿಂದ ನಾಯ್ಕ ಸೇರಿದಂತೆ ಕಾಲೇಜು ಕಟ್ಟಡಕ್ಕೆ ಶ್ರಮಿಸಿದ ಗಣ್ಯರನ್ನು ಕಾಲೇಜು ಮಂಡಳಿಯಿAದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರವಿ ನಾಯ್ಕ ಜಾಲಿ, ಡಾ.ರವಿ ನಾಯ್ಕ, ರಾಜೇಶ ನಾಯ್ಕ, ಧನ್ಯಕುಮಾರ ಜೈನ್ ಸೇರಿದಂತೆ ಕಾಲೇಜು ಆಡಳಿತ ಮಂಡಳಿ ಸದಸ್ಯರು, ಜಾಲಿ ಪಟ್ಟಣ ಪಂಚಾಯತ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

error: