ಭಟ್ಕಳ: ಭಟ್ಕಳ ಹೊನ್ನವಾರ ಜೆಡಿಎಸ್ ಅಭ್ಯರ್ಥಿ, ಹೈಕೋರ್ಟ್ ವಕೀಲರಾದ ಶ್ರೀ ನಾಗೇಂದ್ರ ನಾಯ್ಕ ಅವರು ಶನಿವಾರ ಸಂಜೆ ಜೆಡಿಎಸ್ ಕಾರ್ಯಕರ್ತರು ಮತ್ತು ತಮ್ಮ ಅಪಾರ ಬೆಂಬಲಿಗರೊAದಿಗೆ ಭಟ್ಕಳ ನಗರದಲ್ಲಿ ಮತಯಾಚನೆ ನಡೆಸಿದರು. ಚನ್ನಪಟ್ಟಣ ಹನುಮಂತ ದೇವರಿಗೆ ನಮಸ್ಕರಿಸಿ ರಥ ಬೀದಿಯಲ್ಲಿ ಮತಯಾಚನೆ ಆರಂಭಿಸಿದ ಅವರು ಹೂವಿನ ಪೇಟೆ ಮೂಲಕ ಶ್ರೀ ಮಾರಿಕಾಂಬಾ ದೇವಸ್ಥಾನ ರಸ್ತೆಯ ಮೂಲಕ ಹಳೆ ಬಸ್ ನಿಲ್ದಾಣ ವರೆಗೆ ಮತಯಾಚನೆ ನಡೆಸಿದರು.
ಈ ಭಾರಿ ಭಟ್ಕಳ ಹೊನ್ನವಾರ ಕ್ಷೇತ್ರದಲ್ಲಿ ಬದಲಾವಣೆ ಮಾಡಿ ಹೊಸ ಮುಖವಾದ ತಮಗೆ ಒಂದು ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ 300 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು, ನಾಗೇಂದ್ರ ನಾಯ್ಕ ಅಭಿಮಾನಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಪಾಂಡು ನಾಯ್ಕ, ಪುರಸಭಾ ಸದಸ್ಯ ಕೃಷ್ಣಾನಂದ ಪೈ, ಮುಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ದೇವಯ್ಯ ನಾಯ್ಕ, ಜೆಡಿಎಸ್ ತಾಲೂಕ ಅಧ್ಯಕ್ಷ ವಕೀಲ ರಾಜವರ್ಧನ ನಾಯ್ಕ, ವಕೀಲರಾದ ಮಂಜುನಾಥ್ ಗೊಂಡ, ನಾಗೇಶ್ ಗದ್ದೆಮನೆ, ಜೆಡಿಎಸ್ ಮುಖಂಡರಾದ ಈಶ್ವರ್ ನಾಯ್ಕ, ವೆಂಕಟೇಶ ನಾಯ್ಕ ಮುಂತಾದವರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.
More Stories
ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್ಡಿ ಪೊಲೀಸರು
ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡು
ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 5ನೇ ಚಾತುರ್ಮಾಸ ವೃತಾಚರಣೆ, ಭಟ್ಕಳ ತಾಲ್ಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ