September 16, 2024

Bhavana Tv

Its Your Channel

ಭಟ್ಕಳದ ಶಿರಾಲಿಯಲ್ಲಿ ಭರ್ಜರಿ ಮತಬೇಟೆ ಆರಂಭಿಸಿದ ಭಟ್ಕಳ ಜೆಡಿಎಸ್ ಅಭ್ಯರ್ಥಿ, ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ

ಭಟ್ಕಳ- ಭಟ್ಕಳ ಹೊನ್ನವಾರ ಜೆಡಿಎಸ್ ಅಭ್ಯರ್ಥಿ, ಹೈಕೋರ್ಟ್ ವಕೀಲರಾದ ನಾಗೇಂದ್ರ ನಾಯ್ಕ ಅವರು ರವಿವಾರ ಸಂಜೆ ಜೆಡಿಎಸ್ ಕಾರ್ಯಕರ್ತರು ಮತ್ತು ತಮ್ಮ ಅಪಾರ ಬೆಂಬಲಿಗರೊ0ದಿಗೆ ಶಕ್ತಿ ಪ್ರದರ್ಶನ ಮಾಡಿದರು. ೫೦೦ ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರೊಂದಿಗೆ ಶಿರಾಲಿ ನಗರದಲ್ಲಿ ಮತಯಾಚನೆ ನಡೆಸಿದರು. ಶಿರಾಲಿ ಆದಿ ಮಾಸ್ತಿ ದೇವರಿಗೆ ನಮಸ್ಕರಿಸಿ ಆದಿ ಮಾಸ್ತಿ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಅಂಗಡಿಗಳಿಗೆ ತೆರಳಿ ಮತಯಾಚನೆ ಆರಂಭಿಸಿದ ಅವರು ಶಿರಾಲಿ ಗುಡಿ ಹಿತ್ತಲ ರಸ್ತೆಯ ಮೂಲಕ ಮನೆಗಳಿಗೆ ಮತ್ತು ಅಂಗಡಿಯಲ್ಲಿ ಮತಯಾಚನೆ ನಡೆಸಿದರು.
ಈ ಭಾರಿ ಭಟ್ಕಳ ಹೊನ್ನವಾರ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಬದಲಾವಣೆ ಮಾಡಿ ಹೊಸ ಮುಖವಾದ ತಮಗೆ ಒಂದು ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ನಂತರ ಶಿರಾಲಿ ಸರ್ಕಲ್ ಮೂಲಕ ಎಂ.ಜಿ.ಎ0 ದೇವಸ್ಥಾನದ ಮಹಾದ್ವಾರದ ಮೂಲಕ ಅಂಗಡಿಗಳಿಗೆ ಮತ್ತು ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ೫೦೦ ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು, ನಾಗೇಂದ್ರ ನಾಯ್ಕ ಅಭಿಮಾನಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಪಾಂಡು ನಾಯ್ಕ, ಪುರಸಭಾ ಸದಸ್ಯ ಪಾಸ್ಕಲ್, ಗ್ರಾಮ ಪಂಚಾಯಿತಿ ಸದಸ್ಯ ದೇವಯ್ಯ ನಾಯ್ಕ, ಜೆಡಿಎಸ್ ತಾಲೂಕ ಅಧ್ಯಕ್ಷ ವಕೀಲ ರಾಜವರ್ಧನ ನಾಯ್ಕ, ವಕೀಲರಾದ ಮಂಜುನಾಥ್ ಗೊಂಡ, ನಾಗೇಶ್ ಗದ್ದೆಮನೆ, ಜೆಡಿಎಸ್ ಮುಖಂಡರಾದ ಈಶ್ವರ್ ನಾಯ್ಕ, ಶಂಕರ್ ನಾಯ್ಕ, ಕಾರ್ಯದರ್ಶಿ ನಾರಾಯಣ ನಾಯ್ಕ ಮುಂತಾದವರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.

error: