April 30, 2024

Bhavana Tv

Its Your Channel

ಭಟ್ಕಳ ಕೈಕಿಣಿಯಲ್ಲಿ ದಿಶಾ ಎಜ್ಯುಕೆರ್ & ಬಿಸ್ನೆಸ್ ಕನ್ಸೆಲ್ಟೆನ್ಸಿ ಉದ್ಘಾಟನಾ ಸಮಾರಂಭ..

ಭಟ್ಕಳ : ರವಿವಾರ, ದಿನಾಂಕ 23 ಎಪ್ರಿಲ್ 2023ರ ಪೂರ್ವಾಹ್ನ 10.00 ಗಂಟೆಗೆ ದಿಶಾ ಎಜ್ಯುಕೆರ್ ಬಿಸ್ನೆಸ್ ಕನ್ಸೆಲ್ಟೆನ್ಸಿ ತರಬೇತಿ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮದ ರಾಷ್ಟಿçÃಯ ಹೆದ್ದಾರಿ 66ರಲ್ಲಿರುವ ಶ್ರೀ ಗುರು ರಾಘವೇಂದ್ರ ಕಾಂಪ್ಲೆಕ್ಸ್ನ ಮೊದಲನೇ ಮಹಡಿಯಲ್ಲಿ ನೆರವೇರಲಿದೆ.
ದಿಶಾ ಎಜ್ಯುಕೆರ್ ಸಂಸ್ಥೆಯು, ಎಂಪವರಿ0ಗ್ ಪಿಪಲ್ ನೊಲೇಜ್ ಎಲ್.ಎಲ್.ಪಿ. ಬೆಂಗಳೂರು ಇವರ ಸಹಯೋಗದಲ್ಲಿ ಬ್ರಹತ್ ಪ್ರಮಾಣದ ಔದ್ಯೋಗಿಕ ಶಿಕ್ಷಣ ಮತ್ತು ವೃತ್ತಿಪರ ಕೋರ್ಸ್ಗಳನ್ನು ನಿಯೋಜಿಸಿಕೊಂಡಿದೆ. ಇದರಿಂದ ನಿರುದ್ಯೋಗಿ ಪದವೀಧರರಿಗೆ ಹಾಗೂ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಪರ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವಲ್ಲಿ ತುಂಬಾ ಸಹಾಯವಾಗಲಿದೆ.
ವ್ಯವಹಾರ ತಜ್ಞತೆಯ ಹಾಗೂ ತಂತ್ರಜ್ಞಾನದ ಅಡಿಪಾಯವಿರುವ ಈ ಕೋರ್ಸ್ಗಳನ್ನು ಯಶಸ್ವಿಯಾಗಿ ಪೂರೈಸಿದವರಿಗೆ ಉದ್ಯೋಗವಕಾಶವನ್ನು ಒದಗಿಸಿಕೊಡುವ ಗುರಿಹೊಂದಿದೆ. ಈ ತರಬೇತಿಯು ಸಂಪೂರ್ಣವಾಗಿ ಪ್ರಾಯೋಗಿಕವಾಗಿದ್ದು. ಮಾನವ ಸಂಪನ್ಮೂಲ(ಹೆಚ್ ಆರ್) ಲೆಕ್ಕಪತ್ರ (ಪೈನಾನ್ಸ್ & ಅಕೌಂಟ್ಸ್), ಜಿಎಸ್‌ಟಿ ಹಾಗೂ ಇನ್ನಿತರ 150ಕ್ಕೂ ಹೆಚ್ಚಿನ ವಿಷಯಗಳನ್ನು ಒಳಗೊಂಡಿದ್ದು ಮೌಲ್ಯಮಾಪನದಲ್ಲಿ ತೇರ್ಗಡೆಯಾದವರಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಈ ತರಬೇತಿ ಹಾಗೂ ಪ್ರಮಾಣಪತ್ರ ಕೇಂದ್ರ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಮಿನಿಸ್ಟಿçà ಆಫ್ ಕಾರ್ಪೊರೇಟ್ ಅರ‍್ಸ್), ನವದೆಹಲಿಯಿಂದ ದೇಶಾದ್ಯಂತ ಸ್ವಾಯತ್ತತೆ ಮತ್ತು ಮಾನ್ಯತೆಯನ್ನು ಪಡೆದಿರುತ್ತದೆ. ಈಗಾಗಲೇ, ಕರ್ನಾಟಕ ಹಾಗೂ ಹೊರರಾಜ್ಯಗಳು ಸೇರಿದಂತೆ ಸುಮಾರು 21ಕ್ಕೂ ಹೆಚ್ಚು ಮಹಾವಿದ್ಯಾಲಯಗಳು ಈ ತರಬೇತಿಯನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿದ್ದು ಕೋರ್ಸ್ಗಳನ್ನು ಯಶಸ್ವಿಯಾಗಿ ಪಡೆದ ಸಾವಿರಾರು ವಿದ್ಯಾರ್ಥಿಗಳು ಮಲ್ಟಿನ್ಯಾಷನಲ್ ಕಾರ್ಪೊರೇಷನ್‌ಗಳಲ್ಲಿ ಉದ್ಯೋಗ ಪಡೆದುಕೊಳ್ಳುವಲ್ಲಿ ಅಥವಾ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಮಾಡಿಕೊಳ್ಳುವುದರಲ್ಲಿ ಸಫಲರಾಗಿರುತ್ತಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮಬಾರಿಗೆ ಈ ರೀತಿಯ ಸಂಸ್ಥೆ ರೂಪುಗೊಂಡಿದ್ದು, ಯುವಕ-ಯುವತಿಯರು ಕಲಿಕಾ ಫಲಿತ (ಲರ್ನಿಂಗ್ ಔಟ್‌ಕಮ್ಸ್) ಗಳನ್ನು ಆದರಿಸಿಕೊಂಡು ತಂತ್ರಜ್ಞಾನ, ವ್ಯವಹಾರ ಜ್ಞಾನ, ಕಾರ್ಪೊರೇಟ್ ಸಂವಹನ ಕಲೆ, ಗ್ರೂಪ್ ಡಿಸ್ಕಷನ್, ಮಾರ್ಕೆಟಿಂಗ್ ಅನಾಲಿಟಿಕ್ಸ್, ಹಣಕಾಸು ವಿಶ್ಲೇಷಣೆ, ಫೈನಾನ್ಸಿಯಲ್ ಮೊಡಲಿಂಗ್ ಮುಂತಾದ ವಿಷಯಗಳಲ್ಲಿ ಪ್ರಯೋಗಿಕ ತರಬೇತಿ ವಿಶೇಷ ಪರಿಣಿತರಿರಂದ ಪಡೆದುಕೊಂಡು ಸ್ವಾವಲಂಬಿ ಜೀವನಕ್ಕೆ ದಾರಿಮಾಡಿಕೊಡುವ ದಿಶೆಯಲ್ಲಿ ದಿಶಾ ಎಜ್ಯುಕೆರ್ ಸಂಸ್ಥೆಯು ಆಹ್ವಾನಿಸುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಡಾ|| ರವೀಂದ್ರ ಆರ್. ಕಾಯ್ಕಿಣಿ ಯುವ ಜನತೆಗೆ ಕರೆ ನೀಡಿರುತ್ತಾರೆ.
ದಿನಾಂಕ : 23-04-2023 ರವಿವಾರದಂದು ಪೂರ್ವಾಹ್ನ 10.00 ರಿಂದ 12.00 ಗಂಟೆವರೆಗೆ ವಿಶೇಷ ಆಹ್ವಾನಿತ ರಾಷ್ಟಿçÃಯ ಹಾಗೂ ಅಂತರಾಷ್ಟಿçÃಯ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆಗಮಿಸಿ ಕೋರ್ಸ್ಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ನೀಡಲಾಗುವ ಪರಿಚಯ ಭಾಷಣ ಮತ್ತು ಪ್ರದರ್ಶನದ ಪ್ರಯೋಜನ ಪಡೆಯಲು ಈ ಮೂಲಕ ಕೋರಲಾಗಿದೆ.

error: