September 16, 2024

Bhavana Tv

Its Your Channel

ಭಟ್ಕಳ ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯರಿಂದ ನಾಮಪತ್ರ ಸಲ್ಲಿಕೆ

ಭಟ್ಕಳ: ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ಎಸ್. ವೈದ್ಯ ಅವರು ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರಿಗೆ ನಾಮ ಪತ್ರ ಇಂದು ಸೋಮವಾರ ಸಲ್ಲಿಸಿರು.

2023 ರ ವಿಧಾನ ಸಭಾ ಚುನಾವಣೆಯ ಹಿನ್ನೆಲೆ ಸದ್ಯ ನಾಮಪತ್ರ ಸಲ್ಲಿಕೆಯ ಕಾರ್ಯ ನಡೆಯುತ್ತಿದ್ದು ಪ್ರಮುಖ ಜಿದ್ದಾಜಿದ್ದಿನ ಕ್ಷೇತ್ರವಾದ ಭಟ್ಕಳ ಹೊನ್ನಾವರ ವಿಧಾನ ಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಕಾಳ ವೈದ್ಯ ಅವರು ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಚುನಾವಣಾ ಸ್ಪರ್ಧೆಯ ಮೊದಲ ಹಂತವಾದ ಸೋಮವಾರದಂದು ಮಂಕಾಳ ವೈದ್ಯ ಅವರು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ಇಲ್ಲಿನ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರಿಗೆ ಕುಟುಂಬ ಸಮೇತರಾಗಿ ಬಂದು ವಿಶೇಷ ಪೂಜೆ ಸಲ್ಲಿಸಿ ಚುನಾವಣೆಯಲ್ಲಿ ಅಧಿಕ ಮತಗಳಿಂದ ಗೆಲ್ಲುವಂತೆ ದೇವರಲ್ಲಿ ಸಂಕಲ್ಪ ಮಾಡಿದರು.
ತದನಂತರ ಇಲ್ಲಿನ ಮಾರಿಕಾಂಬಾ (ಮಾರಿಗುಡಿ) ದೇವಸ್ಥಾನಕ್ಕೆ ತೆರಳಿ ಅಲ್ಲಿಯೂ ಸಹ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಗೂಡಿ ಕಾಲ್ನಡಿಗೆಯಲ್ಲಿ ಮೆರವಣಿಗೆಯ ಮೂಲಕ ಪೇಟೆ ಮುಖ್ಯ ರಸ್ತೆ ಮಾರ್ಗವಾಗಿ ಹಳೇ ಬಸ್ ನಿಲ್ದಾಣದಿಂದ ತಾಲೂಕಾ ಆಡಳಿತ ಸೌಧದ ತನಕ ಸಾಗಿ ಬಂದರು.
ಮೆರವಣಿಗೆಯೂದ್ದಕ್ಕೂ ಮಂಕಾಳ ವೈದ್ಯ ಪರವಾದ ಘೋಷಣೆ ಕಾರ್ಯಕರ್ತರು ಕೂಗಿದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ ಅವರಿಗೆ 3-4 ಸಾವಿರಕ್ಕೂ ಅಧಿಕ ಕಾರ್ಯಕರ್ತರು ನೂರಾರು ಮುಖಂಡರು ಸಾಥ್ ನೀಡಿದರು. ಮೆರವಣಿಗೆಯ ಹಿನ್ನೆಲೆ ಪೋಲೀಸ ಇಲಾಖೆಯಿಂದ ಬಂದೋಬಸ್ತ ನೀಡಲಾಗಿತ್ತು

error: